ಪ್ರಕೃತಿಯಲ್ಲಿ ಸಿಗುವ ಹಣ್ಣುಗಳಲ್ಲಿ ಪಪ್ಪಾಯಿ ಪ್ರಮುಖವಾದುದು. ಪಪ್ಪಾಯಿಯ ಆರೋಗ್ಯ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಉತ್ತಮ ಆರೋಗ್ಯಕ್ಕಾಗಿ ಪಪ್ಪಾಯಿಯನ್ನು ಸೇವಿಸುವುದು ಅನಾದಿ ಕಾಲದಿಂದಲೂ ಇದೆ. ಆಯುರ್ವೇದವು ಪಪ್ಪಾಯಿಯ ಪ್ರಯೋಜನಗಳನ್ನು ಸಹ ಉಲ್ಲೇಖಿಸುತ್ತದೆ. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಪಪ್ಪಾಯಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ.