ಚಾಮರಾಜನಗರದ ಡಿಪ್ಲೊಮ ಪದವೀಧರ ಭರತ್ ಎಂಬುವವರು ತಾವೇ ಟೆಲಿಸ್ಕೋಪ್ ತಯಾರಿಸೋ ಮೂಲಕ ವಿಜ್ಞಾನಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಜ್ಞಾನಿ ಪಿ.ಎನ್.ಶಂಕರ್ ಬರೆದಿರುವ ಹೌ ಟು ಬಿಲ್ಡ್ ಟೆಲಿಸ್ಕೋಪ್ ಎಂಬ ಪುಸ್ತಕ ಓದಿಕೊಂಡು ಜೊತೆಗೆ ಫೋನ್ ಕರೆಗಳ ಮೂಲಕ ಹಲವರಿಂದ ಸಲಹೆ ಪಡೆದು ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ತಯಾರಿಸಿದ್ದಾರೆ. ಇವರು ತಯಾರಿಸುವ ಟೆಲಿಸ್ಕೋಪ್ 8 ಇಂಚು ವ್ಯಾಸದ ನಿಮ್ನ ದರ್ಪಣ ಹೊಂದಿದ್ದು 8.1 ಪೋಕಲ್ ಅನುಪಾತದ 1660 ಮಿ.ಮೀ. ಪೋಕಲ್ ಲೆಂತ್ ಹೊಂದಿದ್ದು ಇಷ್ಟು ದೊಡ್ಡ ದೂರದರ್ಶಕವನ್ನು ಖರೀದಿ ಮಾಡಲು 70-80 ಸಾವಿರ ಬೇಕಾಗಲಿದೆ.