20 ವರ್ಷದ ಯುವತಿಯನ್ನು ಮದುವೆಯಾಗೋ ಮೂಲಕ ಸುದ್ದಿಯಾಗಿದ್ದ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದ 50 ವರ್ಷದ ಶಂಕರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.