ನವದೆಹಲಿ: ಐಸಿಸಿ ಪುರುಷರ ಟಿ 20 ವಿಶ್ವಕಪ್ 2021 (T20 World Cup) ಆರಂಭವಾಗಿದೆ, 16 ತಂಡಗಳು ಟಿ 20 ವಿಶ್ವಕಪ್ ಪ್ರಶಸ್ತಿಗಾಗಿ ಹೋರಾಡುತ್ತಿವೆ ಮತ್ತು 5 ವರ್ಷಗಳ ನಂತರ ಪಂದ್ಯಾವಳಿಯನ್ನು ಆಡಲಾಗುತ್ತಿದೆ. ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. 2021 ರ ಟಿ 20 ವಿಶ್ವಕಪ್ ಸೇರಿದಂತೆ ಎಲ್ಲಾ ಐಸಿಸಿ ಕಾರ್ಯಕ್ರಮಗಳನ್ನು ಟಿವಿ ಮತ್ತು ಅದರ ಡಿಜಿಟಲ್ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಮಾಡಲು ಸ್ಟಾರ್ ಸ್ಪೋರ್ಟ್ಸ್ ವಿಶೇಷ ಹಕ್ಕುಗಳನ್ನು ಹೊಂದಿದೆ. ಹಾಟ್‌ಸ್ಟಾರ್ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ಎಲ್ಲಾ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಇದನ್ನು ಸ್ಟ್ರೀಮ್ ಮಾಡಲು ನಿಮಗೆ ಚಂದಾದಾರಿಕೆಯ ಅಗತ್ಯವಿದೆ. ಭಾರತದಲ್ಲಿ ಐಸಿಸಿ ಟಿ 20 ವಿಶ್ವಕಪ್ 2021 ಅನ್ನು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಉಚಿತವಾಗಿ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಅದರ ಬಗ್ಗೆ ತಿಳಿದುಕೊಳ್ಳೋಣ ...
ಟಿ 20 ವಿಶ್ವಕಪ್ 2021 ಅನ್ನು ಮೊಬೈಲ್‌ನಲ್ಲಿ ಲೈವ್ ಆಗಿ ಹೇಗೆ ವೀಕ್ಷಿಸುವುದು?
ನೀವು ಜಿಯೋ (Jio), ಏರ್‌ಟೆಲ್ (Airtel) ಮತ್ತು ವಿಐ (Vi) ಗ್ರಾಹಕರಾಗಿದ್ದರೆ ಕೆಲವು ರೀಚಾರ್ಜ್ ಪ್ಲಾನ್‌ಗಳ ಮೂಲಕ ಟಿ 20 ವಿಶ್ವಕಪ್ 2021 (T20 World Cup 2021) ಅನ್ನು ಮೊಬೈಲ್ ಫೋನ್‌ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು, ಉಚಿತ SMS ಮತ್ತು ಡೇಟಾ ಮತ್ತು ಇತರ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಜಿಯೋ ರೀಚಾರ್ಜ್ ಯೋಜನೆಗಳ ಬಗ್ಗೆ ತಿಳಿಯೋಣ...
ಇದನ್ನೂ ಓದಿ- T20 World Cup 2021: ಬಾಂಗ್ಲಾದೇಶದ ವಿರುದ್ಧ ಸ್ಕಾಟ್ಲೆಂಡ್ ಗೆ 6 ರನ್ ಗಳ ರೋಚಕ ಗೆಲುವು
ಐಸಿಸಿ ಪುರುಷರ ಟಿ 20 ವಿಶ್ವಕಪ್ 2021 ವೀಕ್ಷಿಸಲು ಜಿಯೋ ಕ್ರಿಕೆಟ್ ಯೋಜನೆ (Jio Cricket Plans):
499 ರೂ.ಗಳ ಜಿಯೋ ರೀಚಾರ್ಜ್ ಯೋಜನೆ: ರಿಲಯನ್ಸ್ ಜಿಯೋದ (Reliance Jio) 499 ರೂ.ಗಳ ಜಿಯೋ ರೀಚಾರ್ಜ್ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 3 ಜಿಬಿ ಡೇಟಾ/ದಿನ + 6 ಜಿಬಿ ಹೆಚ್ಚುವರಿ ಡೇಟಾ, ಉಚಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆಪ್‌ಗಳಿಗೆ ಉಚಿತ ಪ್ರವೇಶ ಸೇರಿದಂತೆ ಹಲವು ಪ್ರಯೊಜನಗಳು ಲಭ್ಯವಿದೆ. ಈ ರೀಚಾರ್ಜ್ ಯೋಜನೆಯ ಮಾನ್ಯತೆಯು 28 ದಿನಗಳು.
666 ರೂ.ಗಳ ಜಿಯೋ ರೀಚಾರ್ಜ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆಯಲ್ಲಿ (Jio Prepaid Plans) ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 2 ಜಿಬಿ ಡೇಟಾ/ದಿನ, ಉಚಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆಪ್‌ಗಳಿಗೆ ಪ್ರವೇಶ ಲಭ್ಯವಿದೆ. ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 56 ದಿನಗಳು.
ಇದನ್ನೂ ಓದಿ- Former cricketer Yuvraj Singh: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ಗೆ ಮಧ್ಯಂತರ ಜಾಮೀನು
888 ರೂ.ಗಳ ಜಿಯೋ ರೀಚಾರ್ಜ್ ಪ್ಲಾನ್: ಈ ಯೋಜನೆಯಲ್ಲಿ ಗ್ರಾಹಕರಿಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 2 ಜಿಬಿ ಡೇಟಾ/ದಿನ + 5 ಜಿಬಿ ಹೆಚ್ಚುವರಿ ಡೇಟಾ, ಉಚಿತ ವಾಯ್ಸ್ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಜೊತೆಗೆ ಜಿಯೋ ಆಪ್ ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿದೆ. ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 84 ದಿನಗಳು.
2,599 ರೂ.ಗಳ ಜಿಯೋ ರೀಚಾರ್ಜ್ ಯೋಜನೆ: ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿಯೂ ಕೂಡ ಗ್ರಾಹಕರಿಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ (Disney + Hotstar) ಮೊಬೈಲ್ ಚಂದಾದಾರಿಕೆ, 2 ಜಿಬಿ ಡೇಟಾ/ದಿನ + 10 ಜಿಬಿ ಹೆಚ್ಚುವರಿ ಡೇಟಾ, ಉಚಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಜಿಯೋ ಆಪ್‌ಗಳಿಗೆ ಉಚಿತ ಪ್ರವೇಶ ಲಭ್ಯವಾಗಲಿದೆ. ರೀಚಾರ್ಜ್ ಯೋಜನೆಯ ಮಾನ್ಯತೆಯು 365 ದಿನಗಳು.
549 ರೂ.ಗಳ ಜಿಯೋ ಆಡ್-ಆನ್ ರೀಚಾರ್ಜ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ, 1.5 ಜಿಬಿ ಡೇಟಾ/ದಿನ ಮತ್ತು ಜಿಯೋ ಆಪ್‌ಗಳಿಗೆ ಪ್ರವೇಶದ ಪ್ರಯೋಜನವನ್ನು ಪಡೆಯಲಿದ್ದಾರೆ. ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 56 ದಿನಗಳು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ