ನವದೆಹಲಿ : Xiaomi 11 Lite NE 5G ಭಾರತದಲ್ಲಿ ಬಿಡುಗಡೆಯಾಗಿದೆ. ಲಾಂಚ್ ಈವೆಂಟ್ ಅನ್ನು ಕಂಪನಿಯ ಯೂಟ್ಯೂಬ್ ಚಾನೆಲ್ ಹಾಗೂ ಟ್ವಿಟರ್, ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಯಿತು. Xiaomi 11 Lite NE ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ದೇಶದ ಹಗುರ ಮತ್ತು ಅತ್ಯಂತ ಒಳ್ಳೆ 5G ಸ್ಮಾರ್ಟ್ ಫೋನ್ ಎಂದು ಹೇಳಲಾಗುತ್ತಿದೆ. ಇದು 185 ಗ್ರಾಂ ತೂಕವಿದ್ದು, 6.81 ಎಂಎಂನಷ್ಟು ಸ್ಲಿಮ್ ಆಗಿದೆ.
Xiaomi 11 Lite NE 5G ಬೆಲೆ :
Xiaomi 11 Lite NE 5G ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 6GB RAM + 128GB ಸ್ಟೋರೇಜ್ ಬೆಲೆ 26,999 ರೂ. ಕಂಪನಿಯು ಫೋನ್ ನಲ್ಲಿ 2 ಸಾವಿರ ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಅಲ್ಲದೆ, 1500 ರೂಪಾಯಿಗಳ ದೀಪಾವಳಿ ಆಫರ್ (Diwali offer) ಕೂಡ ಲಭ್ಯವಿದೆ. ಅಂದರೆ, ರಿಯಾಯಿತಿ ಮತ್ತು ಆಫರ್ ನಂತರ ಈ ಫೋನ್ ಅನ್ನು 23,499 ರೂ.ಗಳಿಗೆ ಖರೀದಿಸಬಹುದು. 8GB RAM + 128GB ಸ್ಟೋರೇಜ್ ಬೆಲೆ 28,999 ರೂ. ಇದರ ಮೇಲೆ 2 ಸಾವಿರ ರೂ.ಗಳ ರಿಯಾಯಿತಿ ಮತ್ತು 1500 ರೂ.ಗಳ ದೀಪಾವಳಿ ಆಫರ್ ಇದೆ. ಹಾಗಾಗಿ ಈ ಫೋನ್ 25,499 ರೂ .ಗಳಿಗೆ ಕ್ಕೆ ಲಭ್ಯವಿರುತ್ತದೆ. ದೀಪಾವಳಿ ಆಫರ್ ಅಕ್ಟೋಬರ್ 2 ರಿಂದ ಅಕ್ಟೋಬರ್ 7 ರವರೆಗೆ ಮಾತ್ರ ಇರುತ್ತದೆ. ಅಕ್ಟೋಬರ್ 7 ರ ನಂತರ 1500 ರೂಪಾಯಿಗಳ ರಿಯಾಯಿತಿ ಇರುವುದಿಲ್ಲ. ಈ ಫೋನ್ ಅಮೆಜಾನ್ ನಲ್ಲಿ (Amazon) ಅಕ್ಟೋಬರ್ 2 ರಿಂದ ಮಾರಾಟಕ್ಕೆ ಸಿಗಲಿದೆ.
ಇದನ್ನೂ ಓದಿ : Nokia Laptop: ಅಗ್ಗದ ಬೆಲೆಯಲ್ಲಿ ಜಬರ್ದಸ್ತ್ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ನೋಕಿಯಾ, ಬೆಲೆ-ವೈಶಿಷ್ಟ್ಯಗಳ ವಿವರ ಇಲ್ಲಿದೆ
Xiaomi 11 Lite NE 5G ವಿಶೇಷತೆಗಳು :
Xiaomi 11 Lite NE 5G 6.55 ಇಂಚಿನ Full HD+ AMOLED ಡಿಸ್‌ಪ್ಲೇಯನ್ನು ಹೊಂದಿದ್ದು ಅದು 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಶಿಯೋಮಿ ಫೋನ್‌ನಲ್ಲಿ 10-ಬಿಟ್ ಪ್ಯಾನಲ್ ಅನ್ನು ಬಳಸಿದ್ದು, ಇದು Netflix ಮತ್ತು HDR10+ ಪ್ರಮಾಣೀಕರಣಕ್ಕಾಗಿ Dolby Vision ಬೆಂಬಲದೊಂದಿಗೆ ಬರುತ್ತದೆ. ಇದು ವೈಡ್‌ವೈನ್ ಎಲ್ 1 ಸರ್ಟಿಫಿಕೇಶನ್ ಅನ್ನು ಹೊಂದಿದೆ. ಇದು 6.8 ಎಂಎಂನಷ್ಟು ತೆಳುವಾದ 5 ಜಿ ಸ್ಮಾರ್ಟ್ಫೋನ್ (Smartphone) ಎಂದು Xiaomi ಹೇಳಿಕೊಂಡಿದೆ. ಈ ಫೋನಿನ ತೂಕ ಕೇವಲ 158 ಗ್ರಾಂ.
ಹೊಸ Xiaomi ಸ್ಮಾರ್ಟ್ ಫೋನ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 778G ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು Android 11, ಆಧರಿಸಿ MIUI 12.5 ರನ್ ಮಾಡುತ್ತದೆ. ಇಲ್ಲಿಯವರೆಗೆ, Xiaomi MIUI 12.5 ನೊಂದಿಗೆ Redmi ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ : Google Maps: ದುರ್ಘಟನೆಯಿಂದ ಪಾರಾಗಲು ಗೂಗಲ್ ಮ್ಯಾಪ್ ನ Speed Limit Function ಬಳಕೆ ಮಾಡಿ
Xiaomi 11 Lite NE 5G ಕ್ಯಾಮೆರಾ :
Xiaomi 11 Lite NE 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 64 ಮೆಗಾಪಿಕ್ಸೆಲ್ ಸೆನ್ಸಾರ್ f/1.79 ಅಪರ್ಚರ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ 119 ಡಿಗ್ರಿ FoV ಮತ್ತು f/2.2 ಅಪರ್ಚರ್, ಮತ್ತು 5- ಮೆಗಾಪಿಕ್ಸೆಲ್ ಟೆಲಿಮ್ಯಾಕ್ರೋ ಅನ್ನು ಒಳಗೊಂಡಿದೆ. ಅಲ್ಲದೆ F/2.4 ಅಪರ್ಚರ್ ಹೊಂದಿರುವ ಲೆನ್ಸ್ ಅನ್ನು ಕೂಡಾ ಹೊಂದಿದೆ. ಇದು 20 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿರುತ್ತದೆ. ಫೋನ್ ನಲ್ಲಿ 4,250mAh ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.