WhatsApp ನಿಂದ ಶೀಘ್ರದಲ್ಲಿಯೇ ಈ ಹೊಸ ವೈಶಿಷ್ಟ್ಯ ಬಿಡುಗಡೆ

WhatsApp New Feature - ವರದಿಗಳ ಪ್ರಕಾರ ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯ ಬಿಡುಗಡೆಯಾದ ಬಳಿಕ ಬಳಕೆದಾರರು ದೊಡ್ಡ-ದೊಡ್ಡ ಗಾತ್ರದ ಫೈಲ್ ಗಳನ್ನು ವಾಟ್ಸ್ ಆಪ್ ಮೂಲಕ ಪರಸ್ಪರ ಹಂಚಿಕೊಳ್ಳಬಹುದು (WhatsApp Share Files). ಹಾಗಾದರೆ, ಬನ್ನಿ ಈ ಹೊಸ ಅಪ್ಡೇಟ್ ಕುರಿತು ತಿಳಿದುಕೊಳ್ಳೋಣ ಬನ್ನಿ  

Written by - Nitin Tabib | Last Updated : Mar 28, 2022, 05:47 PM IST
  • ಶೀಘ್ರದಲ್ಲಿಯೇ ವಾಟ್ಸ್ ಆಪ್ ನಿಂದ ಹೊಸ ವೈಶಿಷ್ಟ್ಯ ಬಿಡುಗಡೆ
  • ಏಕಕಾಲಕ್ಕೆ ದೊಡ್ಡ ಗಾತ್ರದ ಫೈಲ್ ಗಳನ್ನು ಹಂಚಿಕೊಳ್ಳಬಹುದು.
  • ಸದ್ಯಕ್ಕೆ ಈ ವೈಶಿಷ್ಟ್ಯ ಪರೀಕ್ಷಾ ಹಂತದಲ್ಲಿದೆ.
WhatsApp ನಿಂದ ಶೀಘ್ರದಲ್ಲಿಯೇ ಈ ಹೊಸ ವೈಶಿಷ್ಟ್ಯ ಬಿಡುಗಡೆ title=
Whatsapp Latest Update

ನವದೆಹಲಿ:   Whatsapp Update - ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ WhatsApp ತನ್ನ ಬಳಕೆದಾರರಿಗೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತದೆ. ವಾಟ್ಸಾಪ್ ಕಾಲಕಾಲಕ್ಕೆ ನವೀಕರಣಗಳನ್ನು ಕೂಡ ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಗೆ ಖುಷಿಪಡಿಸುತ್ತದೆ ಇರುತ್ತದೆ. ಇತ್ತೀಚೆಗೆ, ವಾಟ್ಸಾಪ್ ತನ್ನ ಹೊಸ ಅಪ್‌ಡೇಟ್‌ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯ ಬಿಡುಗಡೆಗಾಗಿ ಬಳಕೆದಾರರು ಕೂಡ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಹೊಸ ಅಪ್‌ಡೇಟ್ ಯಾವುದು ಮತ್ತು ಅದು ಬಳಕೆದಾರರಿಗೆ ಹೇಗೆ ನೆರವಾಗಲಿದೆ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-Cheapest Recharge Plan: ಕೇವಲ ರೂ. 259ಕ್ಕೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಪ್ಲಾನ್ ಬಿಡುಗಡೆ ಮಾಡಿದ Jio

WhatsApp ಜಾರಿಗೊಳಿಸುತ್ತಿದೆ ಹೊಸ Update
WABetaInfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ WhatsApp ಸಣ್ಣ ಟೆಸ್ಟ್ ವೊಂದನ್ನು ಆರಂಭಿಸಿದೆ. ಇದರಿಂದ ಬಳಕೆದಾರರು 2ಜಿಬಿ ಗಾತ್ರದ ಫೈಲ್ (WhatsApp Share Files Up To 2GB) ಹಂಚಿಕೊಳ್ಳಬಹುದು. ಪ್ರಸ್ತುತ ಈ ಪರೀಕ್ಷೆ ಅರ್ಜೆಂಟಿನಾದಲ್ಲಿ ನಡೆಯುತ್ತಿದೆ. ವಾಟ್ಸ್ ಆಪ್ ನ iOS (iPhone) ಬೀಟಾ (WhatsApp IOS Beta) ವರ್ಶನ್ 22.7.0.76 ನಲ್ಲಿ ಈ ಟೆಸ್ಟ್ ಆರಂಭಗೊಂಡಿದೆ. ಈ ವೈಶಿಷ್ಟ್ಯದ ಕುರಿತು ವಿಸ್ತ್ರತ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-ಫ್ರೀ ಆಗಿ ಸಿಗುತ್ತೆ Netflix, Disney+Hotstar, Amazon Prime Video ಸದಸ್ಯತ್ವ! ಹೇಗೆಂದು ತಿಳಿಯಿರಿ...

ಧೂಳೆಬ್ಬಿಸಿದ ಹೊಸ ವೈಶಿಷ್ಟ್ಯ
ಈ ಅಪ್‌ಡೇಟ್‌ ನೊಂದಿಗೆ WhatsApp ಏನನ್ನು ತರುತ್ತಿದೆ ಎಂಬುದನ್ನು ಈಗ ನಾವು ವಿವರವಾಗಿ ತಿಳಿದುಕೊಳ್ಳೋಣ. ನಾವು ನಿಮಗೆ ಈ ಮೊದಲೇ ಹೇಳಿದಂತೆ, ಅಪ್ಲಿಕೇಶನ್‌ನಲ್ಲಿ ದೊಡ್ಡ ಫೈಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಲು ನಿಮಗೆ ಅನುಮತಿಸುವ ವೈಶಿಷ್ಟ್ಯವೊಂದರ ಮೇಲೆ  WhatsApp ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ನೀವು ಕೇವಲ 100MBವರೆಗಿನ (WhatsApp 100MB Files) ಫೈಲ್‌ಗಳನ್ನು (WhatsApp Files Limit) ಮಾತ್ರ ವಾಟ್ಸ್ ಆಪ್ ಮೂಲಕ ಹಂಚಿಕೊಳ್ಳಬಹುದು. ಆದರೆ, ಹೊಸ ವೈಶಿಷ್ಟ್ಯ ಜಾರಿಯಾದ ಬಳಿಕ ನೀವು 2GB ವರೆಗಿನ ಫೈಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು. ವಾಟ್ಸ್ ಆಪ್ ನಲ್ಲಿನ ಈ ನ್ಯೂನ್ಯತೆಯ ಕಾರಣ ಬಳಕೆದಾರರು ವಾಟ್ಸ್ ಆಪ್ ಗೆ ತೀವ್ರ ಪೈಪೋಟಿ ನೀಡುವ Telegram ಗೆ ಶಿಫ್ಟ್ ಆಗುತ್ತಾರೆ ಹಾಗೂ ಟೆಲಿಗ್ರಾಂನಲ್ಲಿ ಈ ವೈಶಿಷ್ಟ್ಯ ಮೊದಲಿನಿಂದಲೇ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News