ನವದೆಹಲಿ: ಜನರ ಚಾಟಿಂಗ್ ಶೈಲಿಯನ್ನು ಬದಲಾಯಿಸಲು ವಾಟ್ಸಾಪ್ ನಿರಂತರವಾಗಿ ಹೊಸತನವನ್ನು ತೋರಿಸುತ್ತಿದೆ. ಬಳಕೆದಾರರ ಚಾಟಿಂಗ್ ಅನ್ನು ಸುಲಭಗೊಳಿಸಲು ಇದು ಅನೇಕ ಹೊಸ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಯಾವ ವೈಶಿಷ್ಟ್ಯಗಳನ್ನು ಪ್ರಾರಂಭಿಸಲಾಗಿದೆ. ಇದರಿಂದ ಗ್ರಾಹಕರಿಗೆ ಯಾವ ರೀತಿಯ ಪ್ರಯೋಜನವಾಗಲಿದೆ ಎಂದು ತಿಳಿಯಿರಿ.
1. ಸಂದೇಶಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ
ಇತ್ತೀಚೆಗೆ ವಾಟ್ಸಾಪ್ (Whatsapp) ಸಂದೇಶಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ನೀವು ಯಾರಿಗಾದರೂ ರವಾನಿಸಿದ ಸಂದೇಶ 7 ದಿನಗಳಲ್ಲಿ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಈ ವೈಶಿಷ್ಟ್ಯವು ವೈಯಕ್ತಿಕ ಮತ್ತು ಗ್ರೂಪ್ ಸಂದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಗ್ರೂಪ್ ಗಳಲ್ಲಿ ಅಡ್ಮಿನ್ ಮಾತ್ರವೇ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು.
2. ಪಾವತಿ ವೈಶಿಷ್ಟ್ಯ (Payment feature)
ವಾಟ್ಸಾಪ್ ಇತ್ತೀಚೆಗೆ ಪಾವತಿ ವೈಶಿಷ್ಟ್ಯವನ್ನು ಸಹ ಬಿಡುಗಡೆ ಮಾಡಿದೆ. ಈಗ ನೀವು ಯುಪಿಐ (UPI)ನಲ್ಲಿ ವಾಟ್ಸಾಪ್ ಮೂಲಕವೂ ಪಾವತಿಸಬಹುದು. ನಿಮ್ಮ ಚಾಟಿಂಗ್‌ಗೆ ಪಾವತಿ ಆಯ್ಕೆ ಕೂಡ ಬಂದಿದೆ. ಚಾಟ್ ಮಾಡುವ ರೀತಿಯಲ್ಲಿಯೇ ನೀವು ಅಗತ್ಯವಿದ್ದಾಗ ಯಾರಿಗಾದರೂ ಸುಲಭವಾಗಿ ಹಣವನ್ನು ಕಳುಹಿಸಬಹುದು.
WhatsApp Pay ಮೂಲಕ ಪಾವತಿಸುವ ಮೊದಲು ಈ ವಿಷಯ ತಿಳಿಯಿರಿ, ಇಲ್ಲವೇ ಖಾಲಿಯಾಗುತ್ತೆ ಖಾತೆ
3. ಶಾಪಿಂಗ್ ವೈಶಿಷ್ಟ್ಯ (Shopping feature)
ಈಗ ವಾಟ್ಸಾಪ್ ಮೂಲಕ ಶಾಪಿಂಗ್ (Shopping) ಮಾಡಬಹುದು ಎಂದು ಕೆಲವೇ ಜನರಿಗೆ ತಿಳಿದಿದೆ. ವಾಟ್ಸಾಪ್ ಇತ್ತೀಚೆಗೆ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈಗ ನೀವು ನಿಮ್ಮ ಹತ್ತಿರದ ಪ್ರದೇಶದಲ್ಲಿ ಶಾಪಿಂಗ್ ಮಳಿಗೆಗಳು ಮತ್ತು ವ್ಯವಹಾರವನ್ನು ಹುಡುಕಬಹುದು. ನೀವು ಕೊಳ್ಳುವ ವಸ್ತುಗಳಿಗೆ ವಾಟ್ಸಾಪ್ ಪೇಮೆಂಟ್ ಮೂಲಕ ಪಾವತಿಸಿ ಶಾಪಿಂಗ್ ಮಾಡಬಹುದು.
ವಾಟ್ಸಾಪ್‌ನ ಈ 3 ಅತ್ಯಂತ ಅಪಾಯಕಾರಿ ಸೆಟ್ಟಿಂಗ್‌ಗಳನ್ನು ತಕ್ಷಣ ಬದಲಾಯಿಸಿ ಇಲ್ಲದಿದ್ದರೆ ...
4. ವಾಟ್ಸಾಪ್ನಲ್ಲಿ ಮ್ಯೂಟ್ ಆಯ್ಕೆ
ಹೌದು ಒಂದು ಗುಂಪು ಅಥವಾ ವ್ಯಕ್ತಿಯಿಂದ ಬರುವ ನಿರಂತರ ಸಂದೇಶಗಳಿಂದ ನೀವು ತೊಂದರೆಗೀಡಾಗಿದ್ದರೆ, ಈಗ ನೀವು ಅಂತಹ ಸಂದೇಶಗಳನ್ನೂ ಶಾಶ್ವತವಾಗಿ ಮ್ಯೂಟ್ ಮಾಡಬಹುದು. ಅಂದರೆ ನೀವು ಯಾರನ್ನಾದರೂ ನಿರ್ಬಂಧಿಸುವ ಅಥವಾ ಗ್ರೂಪ್ ನಿಂದ ಎಕ್ಸಿಟ್ ಆಗುವ ಅಗತ್ಯವಿಲ್ಲ. ಆದರೆ ನೀವು ಅವರಿಂದ ಬರುವ ಸಂದೇಶವನ್ನು ಶಾಶ್ವತವಾಗಿ ಮ್ಯೂಟ್ ಮಾಡಬಹುದು.
WhatsApp ಕರೆಗಳನ್ನೂ ಸಹ ರೆಕಾರ್ಡ್ ಮಾಡಬಹುದು, ಅದಕ್ಕಾಗಿ ಈ ಟ್ರಿಕ್ ಅಳವಡಿಸಿಕೊಳ್ಳಿ
5. ಏಕಕಾಲದಲ್ಲಿ ಬಹಳಷ್ಟು ಸಂದೇಶಗಳನ್ನು ಅಳಿಸಿ
ವಾಟ್ಸಾಪ್‌ನಲ್ಲಿ ಪ್ರತಿದಿನ ನೂರಾರು ಸಂದೇಶಗಳು ಬರುತ್ತಿರುತ್ತವೆ. ಆದರೆ ಕೆಲವೊಮ್ಮೆ ಎಲ್ಲಾ ವೀಡಿಯೊಗಳು ಮತ್ತು ಫೋಟೋಗಳನ್ನು ಅಳಿಸುವುದು ಕಷ್ಟ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ. ಈಗ ನೀವು ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ ಹಲವು ಸಂದೇಶವನ್ನು ಅಳಿಸಬಹುದು.