WhatsApp New Feature: ಫೋಟೋಗಳನ್ನು ಸುಂದರಗೊಳಿಸಲು ವಾಟ್ಸ್ ಆಪ್ ನಲ್ಲಿ ಬರಲಿದೆ ಈ ಅದ್ಭುತ ವೈಶಿಷ್ಟ್ಯ

WhatsApp Latest Feature - ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಬಳಕೆದಾರರ ಮೊದಲ ಆದ್ಯತೆಯಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು, ವಾಟ್ಸಾಪ್ ತನ್ನ ಆಪ್‌ಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ. 

Written by - Nitin Tabib | Last Updated : Aug 10, 2021, 06:19 PM IST
  • ವಾಟ್ಸ್ ಆಪ್ ಬಳಕೆದಾರರಿಗೊಂದು ಸಂತಸದ ಸುದ್ದಿ.
  • ಶೀಘ್ರದಲ್ಲಿಯೇ ವಾಟ್ಸ್ ಆಪ್ ನಲ್ಲಿ ನೀವು ಫೋಟೋ ಎಡಿಟ್ ಕೂಡ ಮಾಡಬಹುದು.
  • ನೀವು ಕಳುಹಿಸುವ ಫೋಟೋಗೆ ನೀವು ಟೆಕ್ಸ್ಟ್, ಇಮೊಜಿ ಇತ್ಯಾದಿಗಳನ್ನು ಸೇರಿಸಿ ಸುಂದರವಾಗಿಸಬಹುದು.
WhatsApp New Feature: ಫೋಟೋಗಳನ್ನು ಸುಂದರಗೊಳಿಸಲು ವಾಟ್ಸ್ ಆಪ್ ನಲ್ಲಿ ಬರಲಿದೆ ಈ ಅದ್ಭುತ ವೈಶಿಷ್ಟ್ಯ title=
WhatsApp Latest Feature

WhatsApp Latest Feature - ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಬಳಕೆದಾರರ ಮೊದಲ ಆದ್ಯತೆಯಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು, ವಾಟ್ಸಾಪ್ ತನ್ನ ಆಪ್‌ಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ. ಇರುವುದರಿಂದ ವಾಟ್ಸ್ ಆಪ್ (WhatsApp) ಬಳಕೆದಾರರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಮತ್ತು ಅವರು ಹೊಸ ವೈಶಿಷ್ಟ್ಯಗಳನ್ನು ಆನಂದಿಸಬಹುದು. ವಾಟ್ಸಾಪ್ ತನ್ನ ವೆಬ್ (WhatsApp Web) ಮತ್ತು ಡೆಸ್ಕ್‌ಟಾಪ್ (WhatsApp Desktop) ಅಪ್ಲಿಕೇಶನ್‌ಗಳ ಬಳಕೆದಾರರಿಗೆ ಫೋಟೋ ಎಡಿಟಿಂಗ್ ಪರಿಕರಗಳನ್ನು (WhatsApp Photo Editing Tool) ತರಲು ಯೋಜನೆ ರೂಪಿಸಿದೆ ಎಂದು ಇದೀಗ ವರದಿಯಾಗಿದೆ. ಈ ವೈಶಿಷ್ಟ್ಯವು ಪ್ರಸ್ತುತ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದೆ ಎಂಬುದು ಇಲ್ಲಿ ಗಮನಾರ್ಹ. ಈ ಉಪಕರಣಗಳು ಬಳಕೆದಾರರಿಗೆ ಫೋಟೋಗಳಿಗೆ ಸ್ಟಿಕ್ಕರ್‌ಗಳನ್ನು ಸೇರಿಸಲು, ಅವುಗಳ ಬಣ್ಣವನ್ನು ಬದಲಾಯಿಸಲು ಮತ್ತು ಪಠ್ಯವನ್ನು ಕಳುಹಿಸುವ ಮೊದಲು ಬರೆಯಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ತಕ್ಷಣವೇ ಗೋಚರಿಸದಿರಬಹುದು. ಇದರ ಹೊರತಾಗಿ, ವಾಟ್ಸಾಪ್ ಬೀಟಾ ಆವೃತ್ತಿ 2.21.16.10 ನಲ್ಲಿ ಇನ್‌ಸ್ಟಂಟ್ ಮೆಸೇಜಿಂಗ್ ಆಪ್‌ಗೆ ಹೊಸ ಎಮೋಜಿಯನ್ನು ತರಲು ಪರೀಕ್ಷಿಸುತ್ತಿದೆ. ಹೊಸ ಎಮೋಜಿಯನ್ನು ತರುವ ಘೋಷಣೆಯನ್ನು ಏಪ್ರಿಲ್‌ನಲ್ಲಿ ಮಾಡಲಾಗಿದೆ ಎಂಬುದು ನಿಮಗೆ ಈಗಾಗಲೇ ತಿಳಿದ ವಿಷಯ.

ಇದನ್ನೂ ಓದಿ-WhatsApp ನಲ್ಲಿ ಡೌನ್‌ಲೋಡ್ ಮಾಡಬಹುದು ಕೋವಿಡ್ -19 ಲಸಿಕೆ ಪ್ರಮಾಣಪತ್ರ : ಹೇಗೆ ಇಲ್ಲಿದೆ ನೋಡಿ 

ಹೊಸ ಅಪ್ಡೇಟ್ ಬಳಿಕ ಬದಲಾವಣೆ ಮಾಡಬಹುದು (WhatsApp Latest News)
ವಾಟ್ಸಾಪ್ ಅಪ್‌ಡೇಟ್ ಟ್ರ್ಯಾಕರ್ ಆಗಿರುವ WABetaInfo, WhatsApp ವೆಬ್ ಮತ್ತು ಡೆಸ್ಕ್‌ಟಾಪ್ ಆಪ್‌ಗಳಲ್ಲಿ ಹೊಸ ಎಡಿಟಿಂಗ್ ಟೂಲ್‌ಗಳನ್ನು ಗುರುತಿಸಿದೆ. ಈ ವೈಶಿಷ್ಟ್ಯಕ್ಕೆ 'ಡ್ರಾಯಿಂಗ್ ಟೂಲ್ಸ್' ಎಂದು ಹೆಸರಿಡಲಾಗಿದೆ. ನೀವು ಫೋಟೋಗಳನ್ನು  WhatsApp ವೆಬ್ ಅಥವಾ ಡೆಸ್ಕ್‌ಟಾಪ್ ಆಪ್‌ನಿಂದ ಕಳುಹಿಸುವ ಮೊದಲು ಬಣ್ಣವನ್ನು ಬದಲಾಯಿಸುವ ಮೂಲಕ ಅವುಗಳನ್ನು ಇನ್ನಷ್ಟು ಸುಂದರಗೊಳಿಸಬಹುದು. ಮೊಬೈಲ್ ಆಪ್ ಆರಂಭದಿಂದಲೂ ಇಮೇಜ್ ಎಡಿಟಿಂಗ್ ಪರಿಕರಗಳನ್ನು ಹೊಂದಿದೆ. ಹೊಸ ಡ್ರಾಯಿಂಗ್ ಪರಿಕರಗಳ ಸಹಾಯದಿಂದ, ಬಳಕೆದಾರರು ತಮ್ಮ ಚಿತ್ರಗಳಿಗೆ ಎಮೋಜಿ ಅಥವಾ ಪಠ್ಯವನ್ನು ಸೇರಿಸಬಹುದು ಮತ್ತು ಅವುಗಳನ್ನು ಹಂಚುವ ಮೊದಲು ಅವುಗಳನ್ನು ಕ್ರಾಪ್ ಮಾಡಬಹುದು ಅಥವಾ ತಿರುಗಿಸಬಹುದು. ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಆಪ್‌ಗಳು ಎಡಿಟಿಂಗ್ ಸಮಯದಲ್ಲಿ ಚಿತ್ರಗಳಿಗೆ ಸ್ಟಿಕ್ಕರ್‌ಗಳನ್ನು ಸೇರಿಸಲು ಹೆಚ್ಚುವರಿ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ. ಇದು ಮೊಬೈಲ್ ಆಪ್‌ನಲ್ಲಿ ಇನ್ನೂ ಲಭ್ಯವಿಲ್ಲ. ನೀವು ಈ ಉಪಕರಣವನ್ನು 'ಒಮ್ಮೆ ನೋಡಿ' ಫೋಟೋಗಳೊಂದಿಗೆ ಬಳಸಬಹುದು.

ಇದನ್ನೂ ಓದಿ-Laptopನಿಂದಲೂ ಮಾಡಬಹುದು Whatsapp Video Call, ಈ ಸರಳ ವಿಧಾನವನ್ನು ತಿಳಿಯಿರಿ

ಹೊಸ ಅಪ್ಡೇಟ್ ಬಳಿಕ ಬಳಕೆದಾರರಿಗೆ ಒಟ್ಟು 217 ಇಮೊಜಿಗಳು ಸಿಗಲಿವೆ
ಮತ್ತೊಂದು ವರದಿಯಲ್ಲಿ ವಾಟ್ಸ್ ಆಪ್ ಬೀಟಾ ಆಪ್ ಅನ್ನು Google Play ಬೀಟಾ ಪ್ರೋಗ್ರಾಮ್ ವರ್ಶನ್ 2.21.16.10 ನಲ್ಲಿ ಅಪ್ಡೇಟ್ ಮಾಡಲಾಗಿದೆ ಎಂದು WABetaInfo ಮಾಹಿತಿ ಹಂಚಿಕೊಂಡಿದೆ. ಈ ಅಪ್‌ಡೇಟ್ ನಂತರ ಬಳಕೆದಾರರಿಗೆ ಸಾಕಷ್ಟು ಹೊಸ ಎಮೋಜಿಗಳನ್ನು ಸಿಗಲಿವೆ ಎಂದು ಅದು ಹೇಳಿದೆ. ಈ ಎಮೋಜಿಗಳನ್ನು ಯೂನಿಕೋಡ್ ಒಕ್ಕೂಟವು ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿತ್ತು ಮತ್ತು ಏಪ್ರಿಲ್‌ನಲ್ಲಿ ಐಒಎಸ್ 14.5 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಅವು WhatsApp ಬೀಟಾ ಬಳಕೆದಾರರಿಗೂ ಲಭ್ಯವಾಗಲಿವೆ. ಹೊಸ ಅಪ್‌ಡೇಟ್ ನಂತರ, ನಿಮಗೆ ವಾಟ್ಸಾಪ್‌ನಲ್ಲಿ ಒಟ್ಟು 217 ಹೊಸ ಎಮೋಜಿಗಳು ಸಿಗಲಿವೆ.

ಇದನ್ನೂ ಓದಿ-Whatsapp- ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಲಾದ ಸಂದೇಶ ಓದಲು ಇಲ್ಲಿದೆ ಸುಲಭ ಟ್ರಿಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News