Whatsapp Fake Message: ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಲಿಂಕ್ ಅನ್ನು ಮರೆತೂ ಕೂಡ ಕ್ಲಿಕ್ ಮಾಡಬೇಡಿ

ಅಂತಹ ಯಾವುದೇ ಘೋಷಣೆಯನ್ನು ಭಾರತ ಸರ್ಕಾರ ಮಾಡಿಲ್ಲ. ಅಂತಹ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರಿ.

Written by - Yashaswini V | Last Updated : Jun 2, 2021, 10:30 AM IST
  • ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಸಂದೇಶ
  • ಈ ವೈರಲ್ ಸಂದೇಶದ ಬಗ್ಗೆ ಸತ್ಯಾಸತ್ಯತೆ ಬಹಿರಂಗಗೊಳಿಸಿದ ಪಿಐಬಿ ಫ್ಯಾಕ್ಟ್ ಚೆಕ್
  • ಈ ವೆಬ್‌ಸೈಟ್‌ಗಳು ಅಥವಾ ಲಿಂಕ್‌ಗಳಿಂದ ದೂರವಿರುವಂತೆ ಎಚ್ಚರಿಕೆ
Whatsapp Fake Message: ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಲಿಂಕ್ ಅನ್ನು ಮರೆತೂ ಕೂಡ ಕ್ಲಿಕ್ ಮಾಡಬೇಡಿ title=
Whatsapp Fake Message

ನವದೆಹಲಿ: ಕರೋನಾ ಸಾಂಕ್ರಾಮಿಕದ ಈ ಯುಗದಲ್ಲಿ, ಅನೇಕ ನಕಲಿ ಸಂದೇಶಗಳು ವೈರಲ್ ಆಗುತ್ತಿವೆ. ಇಂತಹ ಹಲವು ಸಂದೇಶಗಳು ಜನರನ್ನು ಮೋಸದ ಜಾಲದಲ್ಲಿ ಸಿಲುಕಿಸುತ್ತಿವೆ. ಅದೇ ಸಮಯದಲ್ಲಿ, ವಾಟ್ಸಾಪ್‌ನಲ್ಲಿ (Whatsapp) ಸಹ ಜನರಿಗೆ ಸಂದೇಶವನ್ನು ಕಳುಹಿಸಲಾಗುತ್ತಿದೆ, ಇದರಲ್ಲಿ ಕೇಂದ್ರ ಸರ್ಕಾರವು (Central Government) ದೇಶದ ಲಕ್ಷಾಂತರ ಬಳಕೆದಾರರಿಗೆ ಉಚಿತ ಇಂಟರ್ನೆಟ್ ಅನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂದೇಶವು ನಕಲಿ ಎಂದು ತಿಳಿದುಬಂದಿದೆ. ಸರ್ಕಾರವು ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ.

ನಕಲಿ ಸಂದೇಶ ಮತ್ತು ಲಿಂಕ್ :
ಸರ್ಕಾರಿ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಈ ಮಾಹಿತಿಯನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದೆ. ಈ ಸಂದೇಶವು ನಕಲಿ ಮತ್ತು ದಾರಿತಪ್ಪಿಸುವಂತಿದೆ ಎಂದು ಪಿಐಬಿ ಈ ಸಂಪೂರ್ಣ ಸಂದೇಶದ ಬಗ್ಗೆ ವಿವರವಾಗಿ ಹೇಳಿದೆ. ವಾಸ್ತವವಾಗಿ ವೈರಲ್ ಆಗಿತ್ತಿರುವ ವಾಟ್ಸಾಪ್ ಸಂದೇಶದಲ್ಲಿ ಭಾರತ ಸರ್ಕಾರವು 100 ಮಿಲಿಯನ್ ಬಳಕೆದಾರರಿಗೆ 3 ತಿಂಗಳವರೆಗೆ ಉಚಿತ ಇಂಟರ್ನೆಟ್ (Free Internet) ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಹೇಳುತ್ತದೆ. ಆದರೆ ಇದು ಸಂಪೂರ್ಣವಾಗಿ ಫೇಕ್ ಸಂದೇಶ ಎನ್ನಲಾಗಿದೆ. ಅಂತಹ ಯಾವುದೇ ಘೋಷಣೆಯನ್ನು ಭಾರತ ಸರ್ಕಾರ ಮಾಡಿಲ್ಲ. ಅಂತಹ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರಿ ಎಂದು ಎಚ್ಚರಿಸಲಾಗಿದೆ.

ಇದನ್ನೂ ಓದಿ - ಈಡೇರಿತು ಬಾಲಕಿ ಬೇಡಿಕೆ : ಆನ್ ಲೈನ್ ಕ್ಲಾಸ್ ಮತ್ತು ಹೋಂವರ್ಕ್ ಗೆ ಮಾರ್ಗಸೂಚಿ ನಿಗದಿ

ಈ ವೆಬ್‌ಸೈಟ್‌ಗಳು ಅಥವಾ ಲಿಂಕ್‌ಗಳಿಂದ ದೂರವಿರಿ:
ವಾಟ್ಸಾಪ್‌ನಲ್ಲಿ (Whatsapp) ವೈರಲ್ ಆಗುತ್ತಿರುವ ಈ ಸಂದೇಶವು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದುದಾಗಿದೆ. ಎಸ್‌ಎಂಎಸ್, ಇಮೇಲ್ ಅಥವಾ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮೂಲಕ ಹಂಚಿಕೊಳ್ಳಲಾಗುವ ಇಂತಹ ಯಾವುದೇ ನಕಲಿ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಎಂದು ಪಿಐಬಿ ಸಾರ್ವಜನಿಕರನ್ನು ಎಚ್ಚರಿಸಿದೆ. ಅಂತಹ ನಕಲಿ ವೆಬ್‌ಸೈಟ್‌ಗಳು ಅಥವಾ ಲಿಂಕ್‌ಗಳ ಮೂಲಕ ಮೋಸಗಾರರು ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಬಹುದು ಎಂದು ಸಹ ಹೇಳಲಾಗಿದೆ.

ಇದನ್ನೂ ಓದಿ - SBI ಗ್ರಾಹಕರೇ ಗಮನಿಸಿ! ಜೂನ್ 30ರೊಳಗೆ ತಪ್ಪದೇ ಈ ಕೆಲಸ ಪೂರ್ಣಗೊಳಿಸಿ

ವೈರಲ್ ಆಗುತ್ತಿರುವ ಸಂದೇಶ:
ವಾಸ್ತವವಾಗಿ, ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ (Online Education) ಭಾರತ ಸರ್ಕಾರವು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ರೀಚಾರ್ಜ್ ಅನ್ನು ಉಚಿತವಾಗಿ ನೀಡುತ್ತಿದೆ ಎಂದು ವಾಟ್ಸಾಪ್ ವೈರಲ್ ಸಂದೇಶದಲ್ಲಿ ಹೇಳಲಾಗಿದೆ. ನೀವು ಜಿಯೋ, ಏರ್‌ಟೆಲ್ ಅಥವಾ VI ಸಿಮ್ ಹೊಂದಿದ್ದರೆ ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು. ನಿಮ್ಮ ಉಚಿತ ರೀಚಾರ್ಜ್ ಪಡೆಯಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಎಂದು ವೈರಲ್ ಆಗುತ್ತಿರುವ ಸಂದೇಶದಲ್ಲಿ ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News