WhatsApp New Feature: ಶೀಘ್ರದಲ್ಲೇ ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಯ ಸೇರ್ಪಡೆ, ನಿಮ್ಮ ಚಾಟ್ ಎಷ್ಟು ಸುರಕ್ಷಿತ ಹೇಳಿಕೊಡಲಿದೆ!

WhatsApp Update: ವಿಶ್ವದ ಖ್ಯಾತ ಕಿರು ಸಂದೇಶ ರವಾನಿಸುವ ಆಪ್ ಆಗಿರುವ ವಾಟ್ಸ್ ಆಪ್ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಶೀಘ್ರದಲ್ಲಿಯೇ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಲಿದೆ. ಈ ಹೊಸ ವೈಶಿಷ್ಟ್ಯ ನಿಮಗೆ ನಿಮ್ಮ ಚಾಟ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆಯೇ ಅಥವಾ ಇಲ್ಲ ಎಂಬುದನ್ನು ಹೇಳಿಕೊಡಲಿದೆ. ಪ್ರಸ್ತುತ, ಈ ವೈಶಿಷ್ಟ್ಯದ ಪರೀಕ್ಷೆಯು ನಡೆಯುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.(Technology News In Kannada)  

Written by - Nitin Tabib | Last Updated : Mar 10, 2024, 04:45 PM IST
  • ಶೀಘ್ರದಲ್ಲೇ WhatsApp ನಲ್ಲಿ ಹೊಸ ಫೀಚರ್ ಬರುತ್ತಿದೆ
  • ಇದು ಚಾಟ್ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿದೆಯೇ ಅಥವಾ ಇಲ್ಲ ಹೇಳಲಿದೆ.
  • ಸದ್ಯ ಈ ವೈಶಿಷ್ಟ್ಯ ಪರೀಕ್ಷೆಯ ಹಂತದಲ್ಲಿದೆ
WhatsApp New Feature: ಶೀಘ್ರದಲ್ಲೇ ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಯ ಸೇರ್ಪಡೆ, ನಿಮ್ಮ ಚಾಟ್ ಎಷ್ಟು ಸುರಕ್ಷಿತ ಹೇಳಿಕೊಡಲಿದೆ! title=

Whats Up Latest Update: WhatsApp ತನ್ನ ಬಳಕೆದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಕಾಲಕಾಲಕ್ಕೆ ಹೊಸ ಅಪ್ಡೇಟ್ ಗಳನ್ನು  ಬಿಡುಗಡೆ ಮಾಡುತ್ತಿರುತ್ತದೆ. ಕೆಲ ದಿನಗಳ ಹಿಂದೆ, ವಾಟ್ಸ್ ಆಪ್  ಲಾಕ್-ಸ್ಕ್ರೀನ್‌ನಿಂದ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವ ಸಂಪರ್ಕಗಳನ್ನು ನಿರ್ಬಂಧಿಸುವ ಸೌಲಭ್ಯವನ್ನು ಒದಗಿಸಿದೆ. ಇದೀಗ ವಾಟ್ಸ್ ಆಪ್ ಮತ್ತೊಂದು  ಭದ್ರತಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದು ನಿಮ್ಮ ಚಾಟ್ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ (end to end ecryption) ಆಗಿದೆಯೇ ಅಥವಾ ಇಲ್ಲ ಎಂಬುದನ್ನು ನಿಮಗೆ ಹಳಲಿದೆ. ಬಳಕೆದಾರರ ಚಾಟ್‌ಗಳನ್ನು ಸುರಕ್ಷಿತವಾಗಿಡಲು ಈ ಭದ್ರತಾ ವೈಶಿಷ್ಟ್ಯವನ್ನು 2016 ರಲ್ಲಿ ಹೊರತರಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲ್ಪಟ್ಟ ಸಂದೇಶಗಳು ಮತ್ತು ಕರೆಗಳನ್ನು ವಾಟ್ಸ್ ಆಪ್ ಅಲ್ಲ ಯಾರಿಂದಲೂ ನೋಡಲು-ಕೇಳಲು ಸಾಧ್ಯವಿಲ್ಲ. (Technology News In Kannada)

wabetainfo ವರದಿಯ ಪ್ರಕಾರ, ಹೊಸ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಆಯ್ಕೆಯ ಸಕ್ರಿಯಗೊಳಿಸುವುದರಿಂದ, ಸಂಪರ್ಕದ ಕೆಳಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಶೀರ್ಷಿಕೆಯು ಕಾಣಿಸಿಕೊಳ್ಳಲಿವೆ, ಇದು ಚಾಟ್ ಸುರಕ್ಷಿತವಾಗಿದೆ ಎಂಬುದನ್ನು ತೋರಿಸಲಿದೆ. ಕೆಲ ಸೆಕೆಂಡುಗಳ ನಂತರ ಈ ಶೀರ್ಷಿಕೆಯು ಖುದ್ದಾಗಿ ಕಣ್ಮರೆಯಾಗುತ್ತದೆ ಮತ್ತು ಕೊನೆಯ ದೃಶ್ಯವು ಮತ್ತೆ ಕಾಣಿಸಿಕೊಳ್ಳುತ್ತದೆ. ಈ ವೈಶಿಷ್ಟ್ಯವು ಬಳಕೆದಾರರ ಚಾಟ್‌ಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ. ಸಂದೇಶಗಳನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.

ವಾಟ್ಸಾಪ್‌ನಲ್ಲಿ ಈ ವೈಶಿಷ್ಟ್ಯ ಬಂದ ಬಳಿಕ, ಬಳಕೆದಾರರು ತಮ್ಮ ಸಂದೇಶಗಳು ಮತ್ತು ಕರೆಗಳು ಸುರಕ್ಷಿತವಾಗಿವೆ ಎಂಬ ಭರವಸೆಯನ್ನು ಪಡೆಯಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅವರ ವೈಯಕ್ತಿಕ ಡೇಟಾವನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂಬುದನ್ನು ಇದು ಖಚಿತಪಡಿಸಲಿದೆ. (whatsapp security)

ಇದನ್ನೂ ಓದಿ- YouTube ಗೆ ಸೆಡ್ಡು ಹೊಡೆಯಲು ಮುಂದಾದ ಎಲಾನ್ ಮಸ್ಕ್, ಇನ್ಮುಂದೆ ಟಿವಿ ಮೇಲೂ 'X' ವಿಡಿಯೋಗಳನ್ನು ನೋಡಬಹುದು!

ವೈಶಿಷ್ಟ್ಯ ಯಾವಾಗ ಬಿಡುಗಡೆಯಾಗಲಿದೆ? (whatsapp extra layer of security message)
WhatsApp ನ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಚಾಟ್ ಆಯ್ಕೆಯು ಪ್ರಸ್ತುತ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಪರೀಕ್ಷೆ ಮುಗಿದ ನಂತರ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಇದನ್ನೂ ಓದಿ-Bajaj CNG Bike: ಶೀಘ್ರದಲ್ಲೇ ಮಾರುಕಟ್ಟೆಗಿಳಿಯಲಿದೆ ವಿಶ್ವದ ಮೊಟ್ಟಮೊದಲ CNG Bike

ಈ ವೈಶಿಷ್ಟ್ಯಗಳ ಪರೀಕ್ಷೆಯೂ ನಡೆಯುತ್ತಿದೆ
ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಪ್ರಸ್ತುತ ಗೌಪ್ಯತೆಯ ಮತ್ತೊಂದು ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ, ತನ್ಮೂಲಕ ಬಳಕೆದಾರರು ತಮ್ಮ ಅವತಾರ್ ಸ್ಟಿಕ್ಕರ್‌ಗಳನ್ನು ಯಾರು ನೋಡಬಹುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿದೆ. ಅದರ ಒಂದೊಮ್ಮೆ ಜಾರಿಯಾದರೆ, ಎಲ್ಲರೂ ನಿಮ್ಮ  ಅವತಾರ್ ಸ್ಟಿಕ್ಕರ್ ಅನ್ನು ನೋಡಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ, ಬಳಕೆದಾರರು ಆಯ್ಕೆಮಾಡಿದ ಸಂಪರ್ಕಗಳು ಮಾತ್ರ ಅವುಗಳನ್ನು ಬಳಸಬಹುದು. ಪ್ರಸ್ತುತ ಅದರ ಪರೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News