WhatsApp: ಈ ಸಿಂಪಲ್ ಟಿಪ್ಸ್ ಅನುಸರಿಸಿ, ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿ

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಿಂದಾಗಿ ಕಚೇರಿಗೆ ಸಂಬಂಧಿಸಿದ ಕೆಲವು ಕೆಲಸಗಳು ಬಹಳ ಸುಲಭವಾದಂತಾಗಿದೆ. ಕಾಲಕಾಲಕ್ಕೆ, ಕಂಪನಿಯು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇದೆ. ಇಂದು ನಾವು ವಾಟ್ಸಾಪ್ ನ 3 ಸರಳ ತಂತ್ರಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಲಿದ್ದು ಅದು ನಿಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸುತ್ತದೆ.

Written by - Yashaswini V | Last Updated : Jul 5, 2021, 12:15 PM IST
  • ವಾಟ್ಸಾಪ್ನ ಈ 3 ಸರಳ ತಂತ್ರಗಳೊಂದಿಗೆ ನಿಮ್ಮ ಜೀವನವು ಮತ್ತಷ್ಟು ಸುಲಭವಾಗುತ್ತದೆ
  • ಈ ವೈಶಿಷ್ಟ್ಯಗಳು ನಿಮ್ಮ ಚಾಟಿಂಗ್ ಆನಂದವನ್ನು ದ್ವಿಗುಣಗೊಳಿಸುತ್ತವೆ
  • ಇದರಲ್ಲಿ ನೀವು ಟೈಪ್ ಮಾಡದೆ ಯಾರಿಗಾದರೂ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು
WhatsApp: ಈ ಸಿಂಪಲ್ ಟಿಪ್ಸ್ ಅನುಸರಿಸಿ, ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿ title=
ವಾಟ್ಸಾಪ್ನ ಈ 3 ಸರಳ ವೈಶಿಷ್ಟ್ಯಗಳು ನಿಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸುತ್ತೆ

ನವದೆಹಲಿ: ವಾಟ್ಸಾಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಒದಗಿಸುತ್ತಲೇ ಇರುತ್ತದೆ. ಆದರೆ ವಾಟ್ಸಾಪ್ನ ಕೆಲವು ವೈಶಿಷ್ಟ್ಯಗಳ ಬಗ್ಗೆ ಇನ್ನೂ ಕೂಡ ಹಲವು ಬಳಕೆದಾರರಿಗೆ ಮಾಹಿತಿಯ ಕೊರತೆಯಿದೆ. ಅಂತಹ ಕೆಲವು ವೈಶಿಷ್ಟ್ಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ವಾಟ್ಸಾಪ್ನ ಈ 3 ಸರಳ ತಂತ್ರಗಳೊಂದಿಗೆ ನಿಮ್ಮ ಜೀವನವು ಮತ್ತಷ್ಟು ಸುಲಭವಾಗುತ್ತದೆ.

ವಾಟ್ಸಾಪ್ ಸಂದೇಶ ಪಾಪ್-ಅಪ್:
ಇದು ಅದ್ಭುತ ಲಕ್ಷಣವಾಗಿದೆ. ಇದರಲ್ಲಿ ನೀವು ವಾಟ್ಸಾಪ್ನ (Whatsapp) ಪಾಪ್-ಅಪ್ ಅಧಿಸೂಚನೆಯನ್ನು ಪಡೆಯುತ್ತೀರಿ. ನೀವು ಬಯಸಿದರೆ, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಸಂದೇಶಗಳ ಪಾಪ್-ಅಪ್ ಅನ್ನು ನೀವು ಹೊಂದಿಸಬಹುದು. ಇದರ ಪ್ರಯೋಜನವೆಂದರೆ ನಿಮ್ಮ ಫೋನ್‌ನಲ್ಲಿ ಸಂದೇಶ ಬಂದ ತಕ್ಷಣ, ಆ ಸಂದೇಶವು ನಿಮ್ಮ ಫೋನ್‌ನ ಪರದೆಯಲ್ಲಿ ಕಾಣಿಸುತ್ತದೆ. ಇದಕ್ಕಾಗಿ, ನೀವು ಮತ್ತೆ ಮತ್ತೆ ವಾಟ್ಸಾಪ್ ತೆರೆಯುವ ಅಗತ್ಯವಿಲ್ಲ, ನೀವು ಪರದೆಯಲ್ಲಿಯೇ ಪಾಪ್-ಅಪ್ ಸಂದೇಶವನ್ನು ಓದಬಹುದು.

ಇದನ್ನೂ ಓದಿ- WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು

ವಾಟ್ಸಾಪ್ನಲ್ಲಿ ಪಠ್ಯ ಸಂದೇಶ :
ಈ ವೈಶಿಷ್ಟ್ಯದ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಈ ವೈಶಿಷ್ಟ್ಯದಲ್ಲಿ ನೀವು ಟೈಪ್ ಮಾಡದೆ ಯಾರಿಗಾದರೂ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು. ಈ ವೈಶಿಷ್ಟ್ಯವನ್ನು ಬಳಸಲು, ಸಂದೇಶವನ್ನು (Message) ಟೈಪ್ ಮಾಡುವಾಗ ಮೈಕ್ನ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಕೀಬೋರ್ಡ್ ಐಕಾನ್ ಒತ್ತುವ ಮೂಲಕ ನಿಮ್ಮ ಸಂದೇಶವನ್ನು ನೀವು ಮಾತನಾಡಬೇಕು. ಇದರಲ್ಲಿ ನಿಮ್ಮ ಧ್ವನಿಯನ್ನು ಅನುಸರಿಸಿ ನೀವು ಏನು ಹೇಳುತ್ತೀರೋ ಅದನ್ನು ಟೈಪ್ ಮಾಡಲಾಗುತ್ತದೆ. ಈ ರೀತಿಯಾಗಿ, ನೀವು ಬೇರೆ ಕೆಲಸಗಳಲ್ಲಿ ನಿರತರಾಗಿರುವಾಗ ಸುಲಭವಾಗಿ ಸಂದೇಶವನ್ನು ಟೈಪ್ ಮಾಡಬಹುದು.

ಇದನ್ನೂ ಓದಿ: WhatsApp Testing New Feature: WhatsAppನಲ್ಲಿ ಬರುತ್ತಿರುವ ಈ ವಿಡಿಯೋ ಮೂಲಕ ನೀವು ಹೈ ಕ್ವಾಲಿಟಿ ವಿಡಿಯೋ ಕಳುಹಿಸಬಹುದು

ವಾಟ್ಸಾಪ್ ಶಾರ್ಟ್‌ಕಟ್‌ಗಳು :
ಒಂದೊಮ್ಮೆ ನೀವು ಯಾರ ಜೊತೆಗಾದರೂ ನಿರಂತರವಾಗಿ ಚಾಟ್ ಮಾಡುತ್ತಿದ್ದಾರೆ ಅವರೊಂದಿಗೆ ಚಾಟ್ ಮಾಡಲು ನೀವು ಶಾರ್ಟ್‌ಕಟ್ ರಚಿಸಬಹುದು. ಇದರೊಂದಿಗೆ ನೀವು ವಾಟ್ಸಾಪ್ ತೆರೆಯದೆ ಆ ವ್ಯಕ್ತಿಗೆ ಸಂದೇಶಗಳನ್ನು ಕಳುಹಿಸಬಹುಡು ಮತ್ತ ಅವರು ನಿಮಗೆ ಕಳುಹಿಸಿರುವ ಸಂದೇಶವನ್ನು ಸಹ ಓದಬಹುದು. ಚಾಟ್‌ಗಾಗಿ ನೀವು ಆಯ್ಕೆ ಮಾಡಿದ ಶಾರ್ಟ್‌ಕಟ್‌ನ ಫೋಟೋದೊಂದಿಗೆ ನಿಮ್ಮ ಮೊಬೈಲ್‌ನಲ್ಲಿ ಐಕಾನ್ ಕಾಣಿಸುತ್ತದೆ. ಅದರ ನಂತರ ನೀವು ಆ ವ್ಯಕ್ತಿಯೊಂದಿಗೆ ಚಾಟ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News