Weird Experiment ! ಬೈಕ್ ನಲ್ಲಿ ಪೆಟ್ರೋಲ್ ಬಳಸುವ ಬದಲು ಮದ್ಯ ಹಾಕಿದರೆ ಏನಾಗುತ್ತದೆ?

Science Experiment: ಜನರು ಅನೇಕ ಪ್ರಯೋಗಗಳನ್ನು ಮಾಡುತ್ತಾರೆ, ಆದರೆ ಬೈಕ್‌ನಲ್ಲಿ ಪೆಟ್ರೋಲ್ ಬದಲಿಗೆ ಮದ್ಯವನ್ನು ಹಾಕುವುದು ತುಂಬಾ ವಿಚಿತ್ರವಾಗಿದೆ. ಬೈಕು ಆಲ್ಕೋಹಾಲ್‌ನಿಂದ ಚಲಿಸುತ್ತದೆಯೇ ಅಥವಾ ಇಲ್ಲವೇ ತಿಳಿದುಕೊಳ್ಳೋಣ ಬನ್ನಿ.   

Written by - Nitin Tabib | Last Updated : Nov 9, 2021, 12:53 PM IST
  • ಪೆಟ್ರೋಲ್ ಮತ್ತು ಆಲ್ಕೋಹಾಲ್ ಎರಡೂ ಹೊತ್ತಿ ಉರಿಯುತ್ತವೆ.
  • ಪೆಟ್ರೋಲ್‌ಗಿಂತ ಭಿನ್ನವಾಗಿ, ಆಲ್ಕೋಹಾಲ್ ನೀರಿನಲ್ಲಿ ಸೇರಿಕೊಳ್ಳುತ್ತದೆ.
  • ಕಿಡಿ ತೋರಿಸಿದ ನಂತರ ಪೆಟ್ರೋಲ್ ಮತ್ತು ಮದ್ಯಕ್ಕೆ ಬೆಂಕಿ ಹತ್ತುತ್ತದೆ.
Weird Experiment ! ಬೈಕ್ ನಲ್ಲಿ ಪೆಟ್ರೋಲ್ ಬಳಸುವ ಬದಲು ಮದ್ಯ ಹಾಕಿದರೆ ಏನಾಗುತ್ತದೆ? title=
Science Experiment (File Photo)

ನವದೆಹಲಿ: Science Experiment - ಇದುವರೆಗೆ ಹಲವಾರು ವಿಚಿತ್ರ ಪ್ರಯೋಗಗಳನ್ನು (Weird Experiment) ನೀವು ಕೇಳಿರಬಹುದು, ನೋಡಿರಲೂ ಬಹುದು. ಆದರೆ ಯಾರೋ ಒಬ್ಬರು ಬೈಕ್‌ಗೆ ಪೆಟ್ರೋಲ್ (Petrol) ಬದಲು ಮದ್ಯವನ್ನು (Alcohol)  ಹಾಕಿ ನಂತರ ಬೈಕ್ ಚಲಾಯಿಸಲು ಪ್ರಯತ್ನಿಸಿದ್ದಾರೆ ಎಂಬುದನ್ನು ಎಲ್ಲಾದರು ಕೇಳಿದ್ದೀರಾ? ಎಷ್ಟೋ ಜನ ಹೇಳಿದರೂ ಇದೇನು ಮೂರ್ಖತನ ಎನ್ನುತ್ತಾರೆ. ಆದರೆ ಒಬ್ಬ ವ್ಯಕ್ತಿ ಇದನ್ನು ಮಾಡಿದ್ದಾನೆ ಮತ್ತು ಅದರ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದಾನೆ. ಹಾಗಾದರೆ ಪೆಟ್ರೋಲ್ ಬದಲು ಆಲ್ಕೋಹಾಲ್ ಹಾಕಿದರೆ ಬೈಕ್ ಓಡುತ್ತದೆಯೋ ಇಲ್ಲವೋ ಎಂಬುದನ್ನು ಇಂದು ತಿಳಿಯೋಣ ಬನ್ನಿ 

ಬೈಕ್ ನಲ್ಲಿ ಪೆಟ್ರೋಲ್ ಬದಲಿಗೆ ಅಲ್ಕೋಹಾಲ್ ಹಾಕಿದರೆ ಏನಾಗಿದೆ?
ಈ ಪ್ರಯೋಗಕ್ಕಾಗಿ, ವ್ಯಕ್ತಿಯು ಮೊದಲು ತನ್ನ ಬೈಕ್‌ನಿಂದ ಎಲ್ಲಾ ಪೆಟ್ರೋಲ್ ಅನ್ನು ಹೊರತೆಗೆದು  ನಂತರ ಅದರಲ್ಲಿ ಮದ್ಯವನ್ನು ಹಾಕುತ್ತಾನೆ. ವ್ಯಕ್ತಿ ತನ್ನ ಬೈಕ್‌ನಲ್ಲಿ ಐಸೊಪ್ರೊಫೈಲ್ ಆಲ್ಕೋಹಾಲ್ (Isopropyl Alcohol) ಅನ್ನು ಹಾಕುತ್ತಾನೆ, ಇದರಲ್ಲಿ ಆಲ್ಕೋಹಾಲ್ ಅಂಶವು ಶೇಕಡಾ 95 ರಷ್ಟಿರುತ್ತದೆ. ಐಸೊಪ್ರೊಫೈಲ್  ಆಲ್ಕೋಹಾಲ್ ಮತ್ತು ಪೆಟ್ರೋಲ್ ನಡುವೆ ಕೆಲವು ಸಾಮಾನ್ಯ ವಿಷಯಗಳಿವೆ ಎಂಬುದು ಇಲ್ಲಿ ಗಮನಾರ್ಹ. ಎರಡಕ್ಕೂ ಕಿಡಿ ತೋರಿಸಿದರೆ, ಬೆಂಕಿ ಹೊತ್ತಿಕೊಳ್ಳುತ್ತವೆ. ಎರಡೂ ಗಾಳಿಯಲ್ಲಿ ಹಾರಿ ಹೋಗುತ್ತವೆ (Evaporate). ಆದರೆ, ಇವೆರಡರ ನಡುವಿನ ವ್ಯತ್ಯಾಸವೇನೆಂದರೆ ನೀರಿನಲ್ಲಿ ಆಲ್ಕೋಹಾಲ್ ಬೆರೆಯುತ್ತದೆ ಮತ್ತು ಪೆಟ್ರೋಲ್ ನೀರಿನಲ್ಲಿ ಬೆರೆಯುವುದಿಲ್ಲ.

ಮದ್ಯ ಹಾಕಿದಾಗ ಬೈಕ್ ಸ್ಟಾರ್ಟ್ ಆಯ್ತಾ?
ಬೈಕ್‌ನ ಟ್ಯಾಂಕ್‌ಗೆ ಪೆಟ್ರೋಲ್ ಬದಲಿಗೆ ಐಸೊಪ್ರೊಫೈಲ್ ಆಲ್ಕೋಹಾಲ್ ಹಾಕಿ ವ್ಯಕ್ತಿ ಬೈಕ್ ಅನ್ನು ಸ್ಟಾರ್ಟ್ ಮಾಡಿದಾಗ, ಬೈಕ್ ಒಮ್ಮೆ ಮಾತ್ರ ಸ್ಟಾರ್ಟ್ ಆಗಿದೆ. ಏಕೆಂದರೆ ಅದರ ಕಾರ್ಬ್ಯುರೇಟರ್ ಒಳಗಿರುವ ಸ್ವಲ್ಪ ಪೆಟ್ರೋಲ್ ಬೈಕ್ ಅನ್ನು ಸ್ಟಾರ್ಟ್ ಮಾಡಿದೆ ಎಂದು ನಂಬಲಾಗಿದೆ. ನಂತರ ಕಾರ್ಬ್ಯುರೇಟರ್ (Carburettor) ಪೆಟ್ರೋಲ್ ಖಾಲಿಯಾಗುವವರೆಗೆ ಬೈಕ್ ಅನ್ನು 1-2 ಕಿಲೋಮೀಟರ್ ಓಡಿಸುವುದಾಗಿ ಆ ವ್ಯಕ್ತಿ ನಿರ್ಧರಿಸಿದ್ದಾನೆ.

ಇದನ್ನೂ ಓದಿ-Viral News: 6 ತಿಂಗಳು ಹೊಟ್ಟೆಯೊಳಗಿತ್ತು ಮೊಬೈಲ್ ಫೋನ್, ಬೆಚ್ಚಿಬಿದ್ದ ವೈದ್ಯರು..!

ಸುಮಾರು ಅರ್ಧ ಕಿಲೋಮೀಟರ್ ಬೈಕ್ ಓಡಿಸಿದ ನಂತರ ಬೈಕ್ ನ ಸೈಲೆನ್ಸರ್ (Silencer) ನಿಂದ ಮದ್ಯದ ವಾಸನೆ ಬರಲು ಶುರುವಾಗಿದ್ದು, ಬೈಕ್ ಈಗ ಪೆಟ್ರೋಲ್ ನಿಂದ ಅಲ್ಲ ಮದ್ಯದಿಂದಲೇ ಓಡುತ್ತಿದೆ ಎಂದು ವ್ಯಕ್ತಿಗೆ ಅರ್ಥವಾಗಿದೆ. ಆದರೆ, ಮದ್ಯದಲ್ಲಿ ಓಡುವಾಗ, ಬೈಕು ಆರಂಭದಲ್ಲಿ ಜರ್ಕ್ ಆಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ನಿಲ್ಲಲು ಆರಂಭಿಸುತ್ತದೆ. ಆದರೆ 2-3 ಕಿಮೀ ನಂತರ ಬೈಕ್ ಚೆನ್ನಾಗಿ ಓಡಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ-Weird News: Glue ಬಳಸಿ Girl Friend ಕಣ್ಣನ್ನೇ ಅಂಟಿಸಿದ Boy Friend, ಕಾರಣ ಬೆಚ್ಚಿಬೀಳಿಸುವಂತಿದೆ

(ಸೂಚನೆ - ಇಂತಹ ಪ್ರಯೋಗಗಳನ್ನು ನುರಿತ ತಜ್ಞರ ಅವಗಾಹನೆಯಲ್ಲಿ ಮಾಡಲಾಗುತ್ತದೆ. ಹೀಗಾಗಿ ಇಂತಹ ಪ್ರಯೋಗಗಳನ್ನು ಮನೆಯಲ್ಲಿ ಮಾಡಬೇಡಿ. ಏಕೆಂದರೆ ಪ್ರಯೋಗದ ವೇಳೆ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ)

ಇದನ್ನೂ ಓದಿ-Weird News: ಬೆಡ್ರೂಮಲ್ಲಿ ದೊರೆತ ಸಿಕ್ರೆಟ್ ಲಿಸ್ಟ್ ನೋಡಿ ಬೆಚ್ಚಿಬಿದ್ದಪತ್ನಿ, ಗರ್ಲ್ ಫ್ರೆಂಡ್ ಜೊತೆ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News