Way To Convert LED TV Into Smart TV: ಮನೆಯಲ್ಲಿರುವ LED TV ಅನ್ನು Smart TVಯನ್ನಾಗಿ ಹೇಗೆ ಬದಲಾಯಿಸಬೇಕು?

Way To Convert LED TV Into Smart TV - ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ವ್ಯಾಮೋಹ ಜನರಲ್ಲಿ ಹೆಚ್ಚುತ್ತಿದೆ. ಆದರೆ ಇವುಗಳಿಗಾಗಿ ನೀವು ಸ್ಮಾರ್ಟ್ ಟಿವಿ ಹೊಂದಿರಬೇಕು. ಇಂದು ನಾವು ನಿಮ್ಮ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಹೇಗೆ ಪರಿವರ್ತಿಸಬಹುದು ಮತ್ತು ಒಟಿಟಿ ಸೇವೆಯನ್ನುಹೇಗೆ ಸುಲಭವಾಗಿ ಆನಂದಿಸಬೇಕು ಎಂಬುದನ್ನು ಹೇಳಲಿದ್ದೇವೆ.

Written by - Nitin Tabib | Last Updated : Apr 11, 2021, 10:45 PM IST
  • ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ವ್ಯಾಮೋಹ ಜನರಲ್ಲಿ ಹೆಚ್ಚುತ್ತಿದೆ.
  • ಆದರೆ ಇವುಗಳಿಗಾಗಿ ನೀವು ಸ್ಮಾರ್ಟ್ ಟಿವಿ ಹೊಂದಿರಬೇಕು.
  • ನಿಮ್ಮ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿ ಆಗಿ ಹೇಗೆ ಪರಿವರ್ತಿಸಬೇಕು?
Way To Convert LED TV Into Smart TV: ಮನೆಯಲ್ಲಿರುವ LED TV ಅನ್ನು Smart TVಯನ್ನಾಗಿ ಹೇಗೆ ಬದಲಾಯಿಸಬೇಕು? title=
Way To Convert LED TV Into Smart TV (File Photo)

ನವದೆಹಲಿ: Way To Convert LED TV Into Smart TV - ಕೇಬಲ್ ಮತ್ತು ಡಿಟಿಎಚ್ ಬೇಡಿಕೆ ಕಳೆದ ಕೆಲ ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಒಟಿಟಿ ಪ್ಲಾಟ್‌ಫಾರ್ಮ್‌ನ ಜನಪ್ರಿಯತೆ ಪ್ರತಿದಿನ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಟಿವಿಯಲ್ಲಿ ಧಾರಾವಾಹಿ ಅಥವಾ ಚಲನಚಿತ್ರವನ್ನು ನೋಡುವ ಬದಲು ಈ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಧಾರಾವಾಹಿಗಳು, ವೆಬ್ ಸರಣಿಗಳು ಮತ್ತು ಚಲನಚಿತ್ರಗಳನ್ನು ವಿಕ್ಷೀಸುತ್ತಿದ್ದಾರೆ. ಇಂತಹ  ಪರಿಸ್ಥಿತಿಯಲ್ಲಿ, ಈ ಸೇವೆಗಳನ್ನು ಆನಂದಿಸಲು ನೀವು ಸ್ಮಾರ್ಟ್ ಟಿವಿ (Smart TV) ಹೊಂದಿರಬೇಕು. ಆದಾಗ್ಯೂ, ನೀವು ಅವುಗಳನ್ನು ಫೋನ್‌ನಲ್ಲಿ ಸಹ ನೋಡಬಹುದು. ಆದರೆ ಟಿವಿಯಲ್ಲಿ ನೋಡುವ ಮಜಾ ಬೇರೆಯೇ ಆಗಿರುತ್ತದೆ. ಆದರೆ ಈಗ ನೀವು ಸ್ಮಾರ್ಟ್ ಟಿವಿ ಹೊಂದಿಲ್ಲದಿದ್ದರೆ ನೀವು ಚಿಂತಿಸಬೇಕಾಗಿಲ್ಲ, ಅದು ಅಪ್ರಸ್ತುತವಾಗುತ್ತದೆ. ನಾವು ವಿವರಿಸಿದ ರೀತಿಯಲ್ಲಿ ನಿಮ್ಮ ನಾರ್ಮಲ್ LED TVಯನ್ನು ನೀವು ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಬಹುದು. ಹೇಗೆ ಎಂದು ತಿಳಿಯೋಣ ಬನ್ನಿ.

HDMI ಕೇಬಲ್ ಬಳಕೆ ಮಾಡಿ
HDMI ಕೇಬಲ್ ಬಳಸಿ ನೀವು ಸುಲಭವಾಗಿ ನಿಮ್ಮ ಮನೆಯ ನಾರ್ಮಲ್ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿಸಬಹುದು. HDMI ಕೇಬಲ್ ಬಳಕೆ ಮಾಡಿ ನೀವು ನಿಮ್ಮ ಟಿವಿಯನ್ನು ನಿಮ್ಮ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿ. ಈಗ ನೀವು ನಿಮ್ಮ ಟಿವಿಯನ್ನು ಮಾನಿಟರ್ ರೂಪದಲ್ಲಿ ಬಳಸಬಹುದು. ಈಗ ನೀವು ನಿಮ್ಮ ಟಿವಿಯಲ್ಲಿ ನಿಮ್ಮ ನೆಚ್ಚಿನ ಟಿವಿ ಷೋ ಹಾಗೂ ಚಿತ್ರಗಳನ್ನು ವಿಕ್ಷೀಸಬಹುದು.

ಅಂಡ್ರಾಯಿಡ್ ಟಿವಿ ಬಾಕ್ಸ್ 
ಅಂಡ್ರಾಯಿಡ್ ಟಿವಿ ಬಾಕ್ಸ್ ಕೂಡ ನಿಮಗೆ ಉತ್ತಮ ಆಯ್ಕೆಯಾಗಿದೆ. ಇದರಿಂದ ನೀವು ನಿಮ್ಮ ಟಿವಿ ಸ್ಕ್ರೀನ್ ಮೇಲೆ ಗೂಗಲ್ ಪ್ಲೇ ಹಾಗೂ ಗೂಗಲ್ ನ ಇತರೆ ಸೇವೆಗಳನ್ನು ಬಳಸಬಹುದು.

ಪ್ಲೇ ಸ್ಟೇಷನ್ ಅಥವಾ X ಬಾಕ್ಸ್ 
ನೀವು ಬೇಕಾದರೆ ಪ್ಲೇ ಸ್ಟೇಷನ್ ಹಾಗೂ X ಬಾಕ್ಸ್ ಸಹಾಯದಿಂದ ನಿಮ್ಮ ಟಿವಿಯನ್ನು ಸ್ಮಾರ್ಟ್ ಟಿವಿ ಆಗಿ ಪರಿವರ್ತಿಸಬಹುದು. ಈ ಪ್ಲಾಟ್ ಫಾರ್ಮ್ ಗಳ ಎಂಟರ್ಟೈನ್ಮೆಂಟ್ ಸೆಕ್ಷನ್ ಸಹಾಯದಿಂದ ನೀವು ಆನ್ಲೈನ್ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಬಹುದು.

ಇದನ್ನೂ ಓದಿ- ನೀವೂ Paytm ಬಳಸುತ್ತೀರಾ? ಹಾಗಾದ್ರೆ ಮನೆಯಲ್ಲಿಯೇ ಕುಳಿತು ನೀವು ಎರಡು ಲಕ್ಷ ರೂ. ಪಡೆಯಬಹುದು

ಡಿಜಿಟಲ್ ಮೀಡಿಯಾ ಪ್ಲೇಯರ್
ಕೆಲ ಡೋಂಗಲ್ ಗಳ ಸಹಾಯದಿಂದಲೂ ಕೂಡ ನೀವು ನಿಮ್ಮ ನಾರ್ಮಲ್ ಟಿವಿ ಅನ್ನು ಸ್ಮಾರ್ಟ್ ಟಿವಿ ಆಗಿ ಪರಿವರ್ತಿಸಬಹುದು. ನೋಡಲು ಇವು USB ಫ್ಲಾಶ್ ಡ್ರೈವ್ ತೆರೆನಾಗಿರುತ್ತವೆ. ಆದರೆ ಇವು HDMI ಪೋರ್ಟ್ ಜೊತೆಗೆ ಬರುತ್ತವೆ. ಇದಕ್ಕಾಗಿ ನಿಮ್ಮ ಬಳಿ HDMI ಪೋರ್ಟ್ ಕನೆಕ್ಟ್ ಮಾಡುವ ಟಿವಿ ಇರಬೇಕು.

ಇದನ್ನೂ ಓದಿ- ಭಾರತ ಸರ್ಕಾರದಿಂದ ನಿಜವಾಗಿಯೂ ಸಿಗುತ್ತಿದೆಯೇ 3 ತಿಂಗಳ FREE Internet? ಇಲ್ಲಿದೆ ಸತ್ಯಾಸತ್ಯತೆ

ಏರ್ಟೆಲ್ TV
ಏರ್ಟೆಲ್ TV ಸಹಾಯದಿಂದ ಬಳಕೆದಾರರು ಕೇಬಲ್ ಟಿವಿ ಹಾಗೂ ಇಂಟರ್ನೆಟ್ ಬೇಸ್ಡ್ ಸೇವೆಗಳಾಗಿರುವ ಯುಟ್ಯೂಬ್, ಅಮೆಜಾನ್ ಪ್ರೈಮ್ ಹಾಗೂ ನೆಟ್ ಫ್ಲಿಕ್ಸ್ ನಂತಹ ಸ್ಟ್ರೀಮಿಂಗ್ ಸೇವೆಗಳ ಮಜಾ ಸವಿಯಬಹುದು. ಏರ್ಟೆಲ್ ಟಿವಿ ಕ್ರೋಮ್ ಕಾಸ್ಟ್ ಸಪೋರ್ಟ್ ನೊಂದಿಗೆ ಬರುತ್ತದೆ. ಇದರಲ್ಲಿ ನೀವು ಲೈವ್ ಟಿವಿ ರಿಕಾರ್ಡ್ ಕೂಡ ಮಾಡಬಹುದಾಗಿದೆ.

ಇದನ್ನೂ ಓದಿ- BSNL Masterstroke Offer: ಕೇವಲ ರೂ.47 ನೀಡಿ 28 ದಿನಗಳ ಅವಧಿಗೆ ನಿತ್ಯ 1 ಜಿಬಿ ಡೇಟಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News