JioPhone Next ಫೋನ್ ಅನ್ನು ಕಡಿಮೆ ಬೆಲೆಗೆ ಬುಕ್ ಮಾಡಬೇಕಾದರೆ Whatsappನಲ್ಲಿ ಈ ಕೆಲಸ ಮಾಡಿದರೆ ಸಾಕು

EMI ನಲ್ಲಿ JioPhone ನೆಕ್ಸ್ಟ್ ಅನ್ನು ಖರೀದಿಸುವವರಿಗೆ Jio ನಿಂದ ಕೆಲವು ವಿಶೇಷ ರೀಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. 

Written by - Ranjitha R K | Last Updated : Nov 2, 2021, 01:27 PM IST
  • JioPhone Next ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
  • ವಾಟ್ಸಾಪ್ ಮೂಲಕವೂ ಫೋನ್ ಬುಕ್ ಮಾಡಬಹುದು.
  • 70182-70182 ಗೆ WhatsApp ನಲ್ಲಿ 'Hi' ಎಂದು ಕಳುಹಿಸಿದರೆ ಸಾಕು
JioPhone Next ಫೋನ್ ಅನ್ನು ಕಡಿಮೆ ಬೆಲೆಗೆ ಬುಕ್ ಮಾಡಬೇಕಾದರೆ Whatsappನಲ್ಲಿ ಈ ಕೆಲಸ ಮಾಡಿದರೆ ಸಾಕು  title=
JioPhone Next ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯ (file photo)

ನವದೆಹಲಿ : JioPhone Next ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.  ಫೋನ್ 1,999 ರೂ.ಗಳ ಕೈಗೆಟುಕುವ ಬೆಲೆಯಲ್ಲಿ ಮಾರಾಟವಾಗಲಿದೆ. ಉಳಿದ ಮೊತ್ತವನ್ನು ಸುಲಭ EMI ಯೋಜನೆಗಳಲ್ಲಿ 18 ಅಥವಾ 24 ತಿಂಗಳುಗಳಲ್ಲಿ ಪಾವತಿಸಬಹುದು. JioPhone ನೆಕ್ಸ್ಟ್ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಫೋನ್ ಆಗಿರಲಿದೆ. JioPhone Next Android OS ನಿಂದ ನಡೆಸಲ್ಪಡುವ ಪ್ರಗತಿ OS ನಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಕೂಡಾ, JioPhone Next ಬುಕ್ ಮಾಡಲು ಬಯಸುವುದಾದರೆ, ಸುಲಭವಾದ ಮಾರ್ಗವನ್ನು ಹೇಳಲಿದ್ದೇವೆ. ವಾಟ್ಸಾಪ್ ಮೂಲಕವೂ ಫೋನ್ ಬುಕ್ ಮಾಡಬಹುದು. 

WhatsApp ಮೂಲಕ JioPhone ಅನ್ನು ಬುಕ್ ಮಾಡುವುದು ಹೇಗೆ ? 
- JioPhone Next ಗಾಗಿ ಮೊದಲು ನೋಂದಾಯಿಸಿಕೊಳ್ಳಿ.
- ನಿಮ್ಮ ಹತ್ತಿರದ JioMart ಡಿಜಿಟಲ್ ರಿಟೇಲರ್‌ಗೆ ಭೇಟಿ ನೀಡಿ ಅಥವಾ www.jio.com/next ಗೆ ಭೇಟಿ ನೀಡಿ ಅಥವಾ 70182-70182 ಗೆ WhatsApp ನಲ್ಲಿ 'Hi' ಎಂದು ಕಳುಹಿಸಿ.
- ಕನ್ ಫರ್ಮೆಶನ್ ಪಡೆದ ನಂತರ, JioPhone Next ತೆಗೆದುಕೊಳ್ಳಲು ನಿಮ್ಮ ಹತ್ತಿರದ JioMart ಡಿಜಿಟಲ್‌ಗೆ ಭೇಟಿ ನೀಡಿ.

ಇದನ್ನೂ ಓದಿ : Flipkart Diwali Sale: ಕೇವಲ 500 ರೂ.ಗಳಲ್ಲಿ ಖರೀದಿಸಿ POCOನ ಅದ್ಭುತ 5G ಸ್ಮಾರ್ಟ್‌ಫೋನ್

JioPhone ನೆಕ್ಸ್ಟ್ ಖರೀದಿಸುವವರಿಗೆ ಈ ವಿಶೇಷ ರೀಚಾರ್ಜ್ ಯೋಜನೆಗಳು :
EMI ನಲ್ಲಿ JioPhone ನೆಕ್ಸ್ಟ್ ಅನ್ನು ಖರೀದಿಸುವವರಿಗೆ Jio ನಿಂದ ಕೆಲವು ವಿಶೇಷ ರೀಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. 

Always-on  ಪ್ಲಾನ್: ನೀವು 18 ತಿಂಗಳ EMI ಯೋಜನೆಯೊಂದಿಗೆ 350 ರೂ. ಗಳಿಗೆ ಈ ರೀಚಾರ್ಜ್ ಯೋಜನೆಯನ್ನು ಖರೀದಿಸಲು ಸಾಧ್ಯವಾಗುತ್ತದೆ ಮತ್ತು 24 ತಿಂಗಳ EMI ಯೋಜನೆಯನ್ನು ಹೊಂದಿರುವ ಬಳಕೆದಾರರು ಈ ಯೋಜನೆಯನ್ನು  300ರೂ. ಗೆ ಪಡೆಯುತ್ತಾರೆ. ಇದರಲ್ಲಿ, ಪ್ರತಿ ತಿಂಗಳು ಕರೆ ಮಾಡಲು 100 ನಿಮಿಷಗಳು ಮತ್ತು 5GB ಇಂಟರ್ನೆಟ್ ಪಡೆಯಬಹುದು. 

 Large ಪ್ಲಾನ್ : ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆಯ ಈ ಪ್ಲಾನ್ ಅನ್ನು  18 ತಿಂಗಳ EMI  ಪ್ಲಾನ್ ನಲ್ಲಿ 500 ರೂ .ಗೆ ಮತ್ತು 24 ತಿಂಗಳ EMI  ಪ್ಲಾನ್ ನಲ್ಲಿ  450 ಗೆ ಪಡೆಯಬಹುದು.  

ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಗೆ iPhone 12 Mini ಖರೀದಿಸಲು ಸುವರ್ಣ ಅವಕಾಶ, Flipkart ಸೇಲ್ ನಲ್ಲಿ ಸಿಗುತ್ತಿದೆ ಭಾರೀ ಡಿಸ್ಕೌಂಟ್

XL ಪ್ಲಾನ್ : 18 ತಿಂಗಳ EMI ಯೋಜನೆಯ ಈ ರೀಚಾರ್ಜ್ ಪ್ಲಾನ್ ಅನ್ನು 550 ರೂ.ಗಳಿಗೆ ಖರೀದಿಸಬಹುದು. 24 ತಿಂಗಳ EMI ಯೋಜನೆಯನ್ನು ಹೊಂದಿರುವ ಬಳಕೆದಾರರು ಈ ಪ್ಲಾನ್ ಅನ್ನು 500 ರೂ. ಗೆ ಪಡೆಯುತ್ತಾರೆ. ಇದರಲ್ಲಿ ಪ್ರತಿದಿನ ಅನಿಯಮಿತ ವಾಯ್ಸ್ ಕಾಲ್ ಮತ್ತು 2GB ಇಂಟರ್ನೆಟ್ ಸಿಗುತ್ತದೆ. 

XXL ಪ್ಲಾನ್ : ದಿನಕ್ಕೆ 2.5GB ಡೇಟಾ ಮತ್ತು ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನಗಳನ್ನು ಹೊಂದಿರುವ ಈ ಪ್ಲಾನ್ ಅನ್ನು,  18 ತಿಂಗಳ EMI ಜೊತೆಗೆ 600 ರೂ .  ಮತ್ತು 24 ತಿಂಗಳ EMIಯೊಂದಿಗೆ 550ರೂ.ಗೆ  ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News