OTT ವೇದಿಕೆಗಳ ಚಂದಾದಾರಿಕೆಯ ಮೇಲೆ ಬಂಪರ್ ರಿಯಾಯ್ತಿ ಸಿಗುತ್ತಿದೆ, ತ್ವರೆ ಮಾಡಿ ಲಾಭ ನಿಮ್ಮದಾಗಿಸಿಕೊಳ್ಳಿ

Offers on OTT Subscriptions in India: ದೇಶದ ಎರಡು ಪ್ರಮುಖ ಮತ್ತು ಜನಪ್ರಿಯ ಓಟಿಟಿ ವೇದಿಕೆಗಳ ಚಂದಾದಾರಿಕೆಯ ಯೋಜನೆಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಏಕೆಂದರೆ ಪ್ರಸ್ತುತ ನೀವು ಈ ವೇದಿಕೆಗಳ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.   

Written by - Nitin Tabib | Last Updated : May 15, 2022, 02:27 PM IST
  • ಇತ್ತೀಚಿನ ದಿನಗಳಲ್ಲಿ ಓಟಿಟಿ ವೇದಿಕೆಗಳ ಬಳಕೆ ಸಾಕಷ್ಟು ಹೆಚ್ಚಾಗತೊಡಗಿದೆ
  • ಕೆಲ ಓಟಿಟಿ ವೇದಿಕೆಗಳು ತಮ್ಮ ಯೋಜನೆಗಳಲ್ಲಿ ಬಂಪರ್ ರಿಯಾಯ್ತಿ ನೀಡುತ್ತಿವೆ
  • ಯಾವ ವೇದಿಕೆಯ ಯೋಜನೆಯ ಮೇಲೆ ಎಷ್ಟು ರಿಯಾಯ್ತಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ
OTT ವೇದಿಕೆಗಳ ಚಂದಾದಾರಿಕೆಯ ಮೇಲೆ ಬಂಪರ್ ರಿಯಾಯ್ತಿ ಸಿಗುತ್ತಿದೆ, ತ್ವರೆ ಮಾಡಿ ಲಾಭ ನಿಮ್ಮದಾಗಿಸಿಕೊಳ್ಳಿ title=
Voot Select Premium Zee5 Subscription Offers

Voot Select Premium Zee5 Subscription Offers: ಪ್ಯಾನ ಇಂಡಿಯಾ ಮೆಗಾ ಬ್ಲಾಕ್ ಬಸ್ಟರ್ ಚಲನಚಿತ್ರಗಳ ಈ ಯುಗದಲ್ಲಿ ಓಟಿಟಿ ವೇದಿಕೆಗಳ  ಬಳಕೆ ಕೂಡ ಸಾಕಷ್ಟು ಹೆಚ್ಚಾಗತೊಡಗಿದೆ. Netflix, Amazon Prime Video, Zee5, Voot ಗಳಂತಹ ಹಲವು ವೇದಿಕೆಗಳು ಹಿಂದಿ, ಇಂಗ್ಲೀಷ್  ಹಾಗೂ ಇತರ ಭಾರತೀಯ ಚಲನಚಿತ್ರಗಳನ್ನು ಮತ್ತು ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಇವುಗಳಲ್ಲಿ ಕೆಲ ಓಟಿಟಿ ವೇದಿಕೆಗಳ ಚಂದಾದಾರಿಕೆಯ ಮೇಲೆ ಭಾರಿ ರಿಯಾಯ್ತಿ ಸಿಗುತ್ತಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. 

ವೂಟ್  ಸೆಲೆಕ್ಟ್ ಪ್ರೀಮಿಯಂ ಚಂದಾದಾರಿಕೆ ಮೇಲೆ ಭಾರಿ ಡಿಸ್ಕೌಂಟ್ 
ಮೊದಲಿಗೆ, Voot ಸೆಲೆಕ್ಟ್ ಪ್ರೀಮಿಯಂನ ಚಂದಾದಾರಿಕೆಯ ಬಗ್ಗೆ ತಿಳಿದುಕೊಳ್ಳೋಣ, ಪ್ರಸ್ತುತ ಈ ವೇದಿಕೆಯ ಚಂದಾದಾರಿಕೆಯನ್ನು ನೀವು ಅತ್ಯಂತ ರಿಯಾಯ್ತಿ ದರದಲ್ಲಿ ಖರೀದಿಸಬಹುದು. ನೀವು ಒಂದು ತಿಂಗಳವರೆಗೆ Voot ಪ್ರೀಮಿಯಂಗೆ ಚಂದಾದಾರರಾಗಿದ್ದರೆ, ನೀವು ಕೇವಲ 99 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದೇ ವೇಳೆ, ನೀವು ಒಂದು ವರ್ಷದ Voot ಸೆಲೆಕ್ಟ್ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬೇಕಾದರೆ, ನೀವು 499 ರೂಪಾಯಿಗಳನ್ನು ಪಾವತಿಸಬೇಕು. ಆದರೆ, ಪ್ರಸ್ತುತ ಕೆಲ ದಿನಗಳವರೆಗೆ 299 ರೂ.ಗೆ ಒಂದು ವರ್ಷದ ಯೋಜನೆಯನ್ನು ನಿಮಗೆ ನೀಡಲಾಗುತ್ತಿದೆ ಮತ್ತು ನೀವು ಇದರ ಲಾಭವನ್ನು ಪಡೆಯಬಹುದು. ಅಷ್ಟೇ ಅಲ್ಲ ನೀವು ಬಯಸಿದರೆ,  ಅದನ್ನು ಮೊದಲ 14 ದಿನಗಳವರೆಗೆ ಉಚಿತವಾಗಿ ಆನಂದಿಸಬಹುದು.

Voot ನಲ್ಲಿ ಈ ಕಾರ್ಯಕ್ರಮಗಳನ್ನು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು
ನೀವು Voot ಗೆ ಚಂದಾದಾರರಾಗಿದ್ದರೆ, ನೀವು ಅನೇಕ ಅದ್ಭುತ ಷೋಗಳನ್ನು ವೀಕ್ಷಿಸುವ ಅವಕಾಶ ನಿಮಗೆ ಸಿಗಲಿದೆ. ಕಲರ್ಸ್‌ನ ಟಿವಿ ಧಾರಾವಾಹಿಗಳು, ಬಿಗ್ ಬಾಸ್ ಮತ್ತು ಶಾರ್ಕ್ ಟ್ಯಾಂಕ್ ಮತ್ತು ಅಮೇರಿಕಾ ಗಾಟ್ ಟ್ಯಾಲೆಂಟ್‌ನಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಜೊತೆಗೆ, ನೀವು Voot ನಲ್ಲಿ ಬರುವ ಮೂಲ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ನೀವು Voot ನಲ್ಲಿ 45 ಲೈವ್ ಟಿವಿ ಚಾನೆಲ್‌ಗಳನ್ನು ಸಹ ಪಡೆಯುವಿರಿ ಮತ್ತು ಯಾವುದೇ ಜಾಹೀರಾತುಗಳಿಲ್ಲದೆ ಇವುಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗಲಿದೆ.

ಇದನ್ನೂ ಓದಿ-Vivo Y53s 5G Offer on Amazon : 23 ಸಾವಿರ ಬೆಲೆಯ ಈ ಫೋನ್ ಅನ್ನು ಕೇವಲ 3 ಸಾವಿಯ ರೂ.ಗಳಿಗೆ ಖರೀದಿಸಿ

Zee5 ನ ಚಂದಾದಾರಿಕೆಯಲ್ಲಿ ವಿಶೇಷ ಕೊಡುಗೆಗಳು ಲಭ್ಯ
Zee5 ಕೂಡ ಒಂದು ಅದ್ಭುತವಾದ OTT ಪ್ಲಾಟ್‌ಫಾರ್ಮ್ ಆಗಿದೆ, ಅಲ್ಲಿ ನೀವು ಅನೇಕ ರೋಮಾಂಚಕಾರಿ ಷೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು. ಈ ಪ್ಲಾಟ್‌ಫಾರ್ಮ್‌ನ ಒಂದು ತಿಂಗಳ ಚಂದಾದಾರಿಕೆಯನ್ನು ಸದ್ಯಕ್ಕೆ ತೆಗೆಡುಹಾಕಲಾಗಿದೆ. ಆದರೆ, ಅದರ ಮೂರು ತಿಂಗಳ ಯೋಜನೆಯನ್ನು ನೀವು ರೂ 399 ಕ್ಕೆ ಖರೀದಿಸಬಹುದು. ನೀವು Zee5 ನ ವಾರ್ಷಿಕ ಚಂದಾದಾರಿಕೆಯನ್ನು ತೆಗೆದುಕೊಂಡರೆ, ಪ್ರಸ್ತುತ ವಿಶೇಷ ಕೊಡುಗೆಯ ಕಾರಣ, ನೀವು ಅದನ್ನು ಶೇ. 50% ರಷ್ಟು ರಿಯಾಯಿತಿಯಲ್ಲಿ ಅಂದರೆ, ರೂ 599 ಕ್ಕೆ ಖರೀದಿಸಬಹುದು.

ಇದನ್ನೂ ಓದಿ-Huawei AX3 WiFi 6+ Router in India: ಈಗ ಒಂದೇ ಸೆಕೆಂಡಿನಲ್ಲಿ ಡೌನ್‌ಲೋಡ್ ಆಗುತ್ತೆ ಫುಲ್ ಫಿಲ್ಮ್

Zee5 ನಲ್ಲಿ ಈ ಅದ್ಭುತ ಷೋಗಳು ಮತ್ತು ಇತ್ತೀಚಿನ ಚಲನಚಿತ್ರಗಳು ಲಭ್ಯ
Zee ನ ಈ OTT ಪ್ಲಾಟ್‌ಫಾರ್ಮ್‌ನಲ್ಲಿ ಧಾರಾವಾಹಿಗಳ ಜೊತೆಗೆ, ನೀವು ಹಿಂದಿ ಚಲನಚಿತ್ರಗಳು, ಇಂಗ್ಲಿಷ್ ಚಲನಚಿತ್ರಗಳು ಮತ್ತು ಷೋಗಳನ್ನು ಸಹ ವೀಕ್ಷಿಸಬಹುದು. ಇತ್ತೀಚೆಗೆ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವು Zee5 ನಲ್ಲಿ ಲಭ್ಯವಿದೆ, ಇಲ್ಲಿ ನೀವು ಇಂಗ್ಲಿಷ್ ಶೋ ಫ್ರೆಂಡ್ಸ್ ರಿಯೂನಿಯನ್ ಮತ್ತು ಇತರ ಹಲವು ಷೋಗಳನ್ನು ಮತ್ತು ಚಲನಚಿತ್ರಗಳನ್ನು ನೋಡಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News