Vodafone-Idea ಗ್ರಾಹಕರಿಗೆ ಶಾಕ್, ಅತ್ಯಂತ ಜನಪ್ರಿಯ ಯೋಜನೆಗಳನ್ನು ಮುಚ್ಚಿದ ಕಂಪನಿ

Vodafone-Idea: ವೊಡಾಫೋನ್-ಐಡಿಯಾ ಎರಡು ಯೋಜನೆಗಳನ್ನು ರಹಸ್ಯವಾಗಿ ತೆಗೆದುಹಾಕಿದೆ. 601 ರೂ. ಮತ್ತು 701  ರೂ. ಯೋಜನೆಗಳು ಇನ್ನು ಮುಂದೆ ವೊಡಾಫೋನ್ ಐಡಿಯಾದಿಂದ ನೀಡಲಾಗುವುದಿಲ್ಲ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಹೊಡೆತ ಬಿದ್ದಿದೆ.   

Written by - Yashaswini V | Last Updated : Dec 24, 2021, 11:51 AM IST
  • ವೊಡಾಫೋನ್-ಐಡಿಯಾ ಎರಡು ಯೋಜನೆಗಳನ್ನು ರಹಸ್ಯವಾಗಿ ತೆಗೆದುಹಾಕಿದೆ
  • 601 ರೂ. ಮತ್ತು 701 ರೂ. ಯೋಜನೆಗಳು ಇನ್ನು ಮುಂದೆ ವೊಡಾಫೋನ್ ಐಡಿಯಾದಿಂದ ಲಭ್ಯವಿಲ್ಲ
  • ವೊಡಾಫೋನ್ ಐಡಿಯಾ ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಕೇವಲ ಎರಡು ಯೋಜನೆಗಳನ್ನು ಹೊಂದಿದೆ
Vodafone-Idea ಗ್ರಾಹಕರಿಗೆ ಶಾಕ್, ಅತ್ಯಂತ ಜನಪ್ರಿಯ ಯೋಜನೆಗಳನ್ನು ಮುಚ್ಚಿದ ಕಂಪನಿ title=
Vi Prepaid Plans

Vodafone-Idea: ವೊಡಾಫೋನ್-ಐಡಿಯಾ ಕೆಲವು ವಾರಗಳ ಹಿಂದೆ ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ವೊಡಾಫೋನ್ ಐಡಿಯಾ (Vi) ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರಯೋಜನಗಳೊಂದಿಗೆ ಉತ್ತಮ ದರ್ಜೆಯ ಪ್ರಿಪೇಯ್ಡ್ ಯೋಜನೆಯನ್ನು ನೀಡುವ ಆಪರೇಟರ್ ಆಗಿದೆ. ಆದರೆ ಈಗ, ಈ ಟೆಲಿಕಾಂ ಕಂಪನಿ ತನ್ನ ಕೊಡುಗೆಗಳಿಂದ ಅಂತಹ ಎರಡು ಯೋಜನೆಗಳನ್ನು ತೆಗೆದುಹಾಕಿದೆ. 601 ರೂ. ಮತ್ತು 701 ರೂ. ಯೋಜನೆಗಳು ಇನ್ನು ಮುಂದೆ ವೊಡಾಫೋನ್ ಐಡಿಯಾದಿಂದ ಲಭ್ಯವಿರುವುದಿಲ್ಲ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಹೊಡೆತ ಬಿದ್ದಿದೆ. 

Vi ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಕೇವಲ ಎರಡು ಯೋಜನೆಗಳನ್ನು ಹೊಂದಿದೆ:
ಈಗ ವೊಡಾಫೋನ್ ಐಡಿಯಾ (Vodafone-Idea) ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಕೇವಲ ಎರಡು ಯೋಜನೆಗಳನ್ನು ಹೊಂದಿದೆ. ಕಂಪನಿಯ ರೂ. 501 ಮತ್ತು ರೂ. 901 ಪ್ಲಾನ್‌ಗಳಲ್ಲಿ ಮಾತ್ರ ಡಿಸ್ನಿ + ಹಾಟ್‌ಸ್ಟಾರ್ ಸೌಲಭ್ಯ ಲಭ್ಯವಿರುತ್ತದೆ. ಆದರೆ ಇದು ಕಂಪನಿಯ ಕಡೆಯಿಂದ ತಾರ್ಕಿಕ ಕ್ರಮವಾಗಿ ಕಂಡುಬರುತ್ತದೆ ಮತ್ತು ಅದಕ್ಕಾಗಿಯೇ ಈ ಯೋಜನೆಗಳು ಶೀಘ್ರದಲ್ಲೇ ಹೆಚ್ಚಿನ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಮರಳಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Flipkart's Big Sale: ಅದ್ಭುತ ಕ್ಯಾಮೆರಾದೊಂದಿಗೆ 1700 ರೂ.ಗೆ ಖರೀದಿಸಿ Vivo ಸ್ಮಾರ್ಟ್‌ಫೋನ್

Vodafone Idea ಹೆಚ್ಚಿದ ಬೆಲೆಯೊಂದಿಗೆ ರೂ. 601 ಮತ್ತು ರೂ. 701 ಪ್ಲಾನ್‌ಗಳನ್ನು ಮರಳಿ ತರುವ ನಿರೀಕ್ಷೆ:
ವೊಡಾಫೋನ್ ಐಡಿಯಾ ಇತ್ತೀಚೆಗೆ ರೂ. 155, ರೂ. 239, ರೂ. 666 ಮತ್ತು ರೂ. 699 ರ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದೆ. ರೂ. 701 ಮತ್ತು ಹೊಸದಾಗಿ ಪ್ರಾರಂಭಿಸಲಾದ ರೂ. 699 ಯೋಜನೆಯಲ್ಲಿ ಬಹುತೇಕ ಒಂದೇ ರೀತಿಯ ಪ್ರಯೋಜನಗಳನ್ನು ನೀಡಲಾಯಿತು.

ರೂ. 701 ಪ್ರಿಪೇಯ್ಡ್ ಯೋಜನೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ (Disney+ Hotstar) 3GB ದೈನಂದಿನ ಡೇಟಾವನ್ನು 56 ದಿನಗಳವರೆಗೆ ನೀಡಲಾಯಿತು. ರೂ. 699 ಯೋಜನೆಯು ಹೆಚ್ಚು ಕಡಿಮೆ ಈ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಕಾರಣದಿಂದಾಗಿ Vi ತನ್ನ ಕೊಡುಗೆಗಳಿಂದ ರೂ. 701 ಯೋಜನೆಯನ್ನು ಕೈಬಿಟ್ಟಿರಬಹುದು ಎಂದು ಕೂಡ ಹೇಳಲಾಗುತ್ತಿದೆ.

ರೂ. 601 ಪ್ಲಾನ್ ಡೇಟಾ ವೋಚರ್ ಮಾತ್ರ. ಆದರೆ ಇದರಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ನೀಡಿತು. ಸದ್ಯದಲ್ಲಿಯೇ Vi ನಿಂದ ಈ OTT ಪ್ರಯೋಜನದೊಂದಿಗೆ ಹೊಸ ಡೇಟಾ ವೋಚರ್ ಪರಿಚಯಿಸುವ ಸಾಧ್ಯತೆ ಇದೆ.

ಇದನ್ನೂ ಓದಿ- Call Record ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, ತಿಳಿದುಕೊಳ್ಳಲು ಸುದ್ದಿನ್ನೊಮ್ಮೆ ಓದಿ

ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುವ ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಯೋಜನೆಗಳಿವು:
ರೂ. 501 ಮತ್ತು ರೂ. 901 ರ  ಎರಡು ಪ್ಲಾನ್‌ಗಳು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುವ  ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಯೋಜನೆಗಳಾಗಿವೆ. ಇವು ಕ್ರಮವಾಗಿ 28 ದಿನಗಳು ಮತ್ತು 70 ದಿನಗಳವರೆಗೆ 3GB ದೈನಂದಿನ ಡೇಟಾವನ್ನು ನೀಡುತ್ತವೆ. ಎರಡೂ ಯೋಜನೆಗಳು ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನ ಜೊತೆಗೆ V Hero ಪ್ರಯೋಜನಗಳನ್ನು ನೀಡುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News