Vodafone Idea ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ

Vodafone Idea- ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳನ್ನು ನೀಡುವ ಭರ್ಜರಿ ಯೋಜನೆಯನ್ನು ಪರಿಚಯಿಸಿದೆ.  151ರೂ.ಗಳ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಮೂರು ತಿಂಗಳವರೆಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗುತ್ತಿದೆ. Vi ಯ ಈ ಯೋಜನೆ ಬಗ್ಗೆ ತಿಳಿಯೋಣ...

Written by - Yashaswini V | Last Updated : Jun 28, 2022, 08:59 AM IST
  • ವೊಡಾಫೋನ್ ಐಡಿಯಾ 151 ರೂಪಾಯಿಯ ಪ್ರಿಪೇಯ್ಡ್ ಯೋಜನೆ
  • ಡಿಸ್ನಿ+ ಹಾಟ್‌ಸ್ಟಾರ್ ಬೆನಿಫಿಟ್ ಬಂಡಲ್ ಅನ್ನು ಈ ಡೇಟಾ ಪ್ಯಾಕ್‌ನೊಂದಿಗೆ ಮೂರು ತಿಂಗಳವರೆಗೆ ನೀಡಲಾಗುತ್ತದೆ
  • ಇದಲ್ಲದೆ, ಈ ಡೇಟಾ ಪ್ಯಾಕ್ ಸ್ವತಂತ್ರ ಮಾನ್ಯತೆಯೊಂದಿಗೆ ಬರುತ್ತದೆ.
Vodafone Idea ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ  title=
Vodafone Idea Prepaid Plans

ವೊಡಾಫೋನ್ ಐಡಿಯಾದ ಭರ್ಜರಿ ಆಫರ್: ವೊಡಾಫೋನ್ ಐಡಿಯಾ  ಈ ವರ್ಷದ ಆರಂಭದಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಯೋಜನೆಯೊಂದಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ನೀಡಲು ಪ್ರಾರಂಭಿಸಿತು. ಕಂಪನಿಯು ಐಪಿಎಲ್ 2022 ರ ಸಮಯದಲ್ಲಿ ಈ ಯೋಜನೆಯನ್ನು ಪರಿಚಯಿಸಿತು. ಆದರೆ ನೀವು ಟೆಲಿಕಾಂ ಕಂಪನಿಯಿಂದ ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಬರುವ  ಅತ್ಯಂತ ಕೈಗೆಟುಕುವ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ರೂ. 151 ರ ಯೋಜನೆಯನ್ನು ತೆಗೆದುಕೊಳ್ಳಬಹುದು. ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗುತ್ತಿದೆ. ವಿಐನ ಈ ಯೋಜನೆ ಬಗ್ಗೆ ತಿಳಿಯೋಣ...

ವೊಡಾಫೋನ್ ಐಡಿಯಾ 151 ರೂಪಾಯಿಯ ಪ್ರಿಪೇಯ್ಡ್ ಯೋಜನೆ:
ವೊಡಾಫೋನ್ ಐಡಿಯಾದ 151 ರೂಪಾಯಿಯ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಪ್ರಯೋಜನದ ಯೋಜನೆ ಅಲ್ಲ. ಈ ಯೋಜನೆಯೊಂದಿಗೆ, ಬಳಕೆದಾರರು 30 ದಿನಗಳವರೆಗೆ 8ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದು ಡೇಟಾ ಬೂಸ್ಟರ್ ಪ್ಯಾಕ್ ಆಗಿದ್ದು, ಬಳಕೆದಾರರು ಮೊದಲು ಅನಿಯಮಿತ ಪ್ಯಾಕ್ ಚಂದಾದಾರಿಕೆಯನ್ನು ಹೊಂದಿರುವಾಗ ಇದು ಉಪಯುಕ್ತವಾಗಿದೆ. ಡಿಸ್ನಿ+ ಹಾಟ್‌ಸ್ಟಾರ್ ಬೆನಿಫಿಟ್ ಬಂಡಲ್ ಅನ್ನು ಈ ಡೇಟಾ ಪ್ಯಾಕ್‌ನೊಂದಿಗೆ ಮೂರು ತಿಂಗಳವರೆಗೆ ನೀಡಲಾಗುತ್ತದೆ. ಈ ಯೋಜನೆಯೊಂದಿಗೆ, ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಮೂರು ತಿಂಗಳವರೆಗೆ ಬರುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ  ಬಳಕೆದಾರರು 8ಜಿಬಿ ಡೇಟಾವನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಈ ಡೇಟಾ ಪ್ಯಾಕ್ ಸ್ವತಂತ್ರ ಮಾನ್ಯತೆಯೊಂದಿಗೆ ಬರುತ್ತದೆ.

ಇದನ್ನೂ ಓದಿ- Gmail ಬಳಕೆದಾರರು ಈಗ ಇಂಟರ್ನೆಟ್ ಇಲ್ಲದೆ ಇಮೇಲ್ ಕಳುಹಿಸಬಹುದು

ಏರ್‌ಟೆಲ್ ಮತ್ತು ಜಿಯೋ ಕೂಡ ಇದೇ ರೀತಿಯ ಪ್ಯಾಕ್‌ಗಳನ್ನು ನೀಡುತ್ತವೆ:
ವೊಡಾಫೋನ್ ಐಡಿಯಾ ಮಾತ್ರವಲ್ಲದೆ ನೀವು ಏರ್‌ಟೆಲ್ ಮತ್ತು ಜಿಯೋ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಂದ ಡಿಸ್ನಿ+ ಹಾಟ್‌ಸ್ಟಾರ್ ಪ್ಯಾಕ್‌ಗಳನ್ನು ಪಡೆಯಬಹುದು. ಈ ಎರಡೂ ಕಂಪನಿಗಳು ಈ ವಿಶೇಷ ಒಟಿಟಿ ಚಂದಾದಾರಿಕೆಯೊಂದಿಗೆ ಕೈಗೆಟುಕುವ ಪ್ಯಾಕ್‌ಗಳನ್ನು ಸಹ ನೀಡುತ್ತವೆ.

ಇದನ್ನೂ ಓದಿ- BSNL: ಬಿಎಸ್ಎನ್ಎಲ್ ಭರ್ಜರಿ ಕೊಡುಗೆ

ಎಲ್ಲಾ ಟೆಲ್ಕೋಗಳಿಂದ ಗ್ರಾಹಕರನ್ನು ಆಕರ್ಷಿಸಲು ಮೊದಲು ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂಬುದನ್ನು ಗಮನಾರ್ಹ ವಿಷಯವಾಗಿದೆ. ಆದರೆ ಡಿಸ್ನಿ + ಹಾಟ್‌ಸ್ಟಾರ್ ಹಲವಾರು ಚಲನಚಿತ್ರಗಳನ್ನು ಹೊಂದಿದೆ, ಅವುಗಳನ್ನು ಉಚಿತವಾಗಿ ಆನಂದಿಸಲು ಬಯಸುವವರಿಗೆ ಈ ಯೋಜನೆಗಳು ಬಹಳ ಪ್ರಯೋಜನಕಾರಿ ಆಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News