ದೇಶದ ಈ ಭಾಗದಲ್ಲಿ ತೆರೆದಿದೆ UPI-ATM: ಇಲ್ಲಿವೆ ಇದರ ಪ್ರಯೋಜನಗಳು

UPI ATM: ರಾಷ್ಟ್ರ ರಾಜಧಾನಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ತೆರೆಯಲಾಗಿದೆ. ಇದರ ಪ್ರಮುಖ ಪ್ರಯೋಜನವೆಂದರೆ ನೀವು ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ಇದರಲ್ಲಿ ಹಣ ವಿತ್ ಡ್ರಾ ಮಾಡಬಹುದು. 

Written by - Yashaswini V | Last Updated : Sep 7, 2023, 04:20 PM IST
  • ರಾಷ್ಟ್ರ ರಾಜಧಾನಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ಆರಂಭ
  • ಏನಿದು ಯುಪಿಐ ಎಟಿಎಂ?
  • ಇದರಲ್ಲಿ ಹಣ ವಿತ್ ಡ್ರಾ ಮಾಡುವುದು ಹೇಗೆ?
ದೇಶದ ಈ ಭಾಗದಲ್ಲಿ ತೆರೆದಿದೆ UPI-ATM: ಇಲ್ಲಿವೆ ಇದರ ಪ್ರಯೋಜನಗಳು  title=

UPI ATM: ಜಿ20 ಶೃಂಗಸಭೆಗೂ ಮೊದಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ಆರಂಭವಾಗಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಎನ್‌ಪಿ‌ಸಿ‌ಐ ಸಹಯೋಗದೊಂದಿಗೆ ಈ ಎಟಿಎಂ ಅನ್ನು ತೆರೆಯಲಾಗಿದೆ. ಶೀಘ್ರದಲ್ಲೇ ದೇಶದ ಇತರ ಭಾಗಗಳಲ್ಲೂ ಇದೇ ರೀತಿಯ ಯುಪಿಐ ಎಟಿಎಂ ತೆರೆಯಲಾಗುವುದು ಎಂದು ರಾಷ್ಟ್ರೀಯ ಪಾವತಿ ನಿಗಮಮಾಹಿತಿ ನೀಡಿದೆ. 

ಏನಿದು ಯುಪಿಐ ಎಟಿಎಂ?  
ಯುಪಿಐ-ಎಟಿಎಂ ಸೇವೆಯನ್ನು ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ (ICCW) ಎಂದೂ ಕರೆಯಲಾಗುತ್ತದೆ. ಇದರಲ್ಲಿ ಯಾವುದೇ  ಎಟಿಎಂ ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಯುಪಿಐ ಮೂಲಕ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಅರ್ಥಾತ್, ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ಈ ಯುಪಿಐ-ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಬಹುದು. 

ಯುಪಿಐ ಎಟಿಎಂ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಯುಪಿಐ-ಎಟಿಎಂ ಅನ್ನು ದೇಶದ ದೂರದ ಪ್ರದೇಶಗಳಲ್ಲಿಯೂ ಭೌತಿಕ ಕಾರ್ಡ್ ಇಲ್ಲದೆಯೇ ಹಣವನ್ನು ಹಿಂಪಡೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬ್ಯಾಂಕಿಂಗ್ ಸೇವೆಗಳಿಗೆ ಹೊಸ ಆಯಾಮ ಸಿಗಲಿದೆ ಎಂದು ಈ ಎಟಿಎಂ ಆರಂಭಿಸುವ ಸಂದರ್ಭದಲ್ಲಿ ಎನ್‌ಪಿಸಿಐ ಹೇಳಿದೆ. 

ಇದನ್ನೂ ಓದಿ- ಮೊಬೈಲ್ ಕವರ್ ಬಣ್ಣ ಬದಲಾಗಿದೆಯೇ? ಅದನ್ನು ಫಳ ಫಳ ಹೊಳೆಯುವಂತೆ ಮಾಡುತ್ತೆ ಮನೆಯಲ್ಲಿರುವ ಈ ವಸ್ತುಗಳು

ಯುಪಿಐ-ಎಟಿಎಂ ಹೇಗೆ ಕೆಲಸ ಮಾಡುತ್ತದೆ?
>> ಯುಪಿಐ-ಎಟಿಎಂನಲ್ಲಿ ಯುಪಿಐ ನಗದು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಆಯ್ಕೆ ಮಾಡಿದ ತಕ್ಷಣ, ಹಿಂಪಡೆಯಬೇಕಾದ ಮೊತ್ತವನ್ನು ನಮೂದಿಸಲು ಅವರಿಗೆ ಸೂಚಿಸಲಾಗುತ್ತದೆ. 
>> ಇದರ ನಂತರ QR ಕೋಡ್ ಅನ್ನು ರಚಿಸಲಾಗುತ್ತದೆ, ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಸ್ಕ್ಯಾನ್ ಮಾಡಬೇಕು ಮತ್ತು UPI ಪಿನ್ ಅನ್ನು ನಮೂದಿಸಬೇಕು.
>> ಇದರ ನಂತರ ಗ್ರಾಹಕರು ನಗದು ಹಿಂಪಡೆಯಬಹುದು.

ಇದನ್ನೂ ಓದಿ- ವಾಟ್ಸಾಪ್ ಗ್ರೂಪ್‌ನಲ್ಲಿ ಈ ಪದಗಳನ್ನು ಬಳಸಿದರೆ ಜೈಲು ಪಾಲಾಗಬಹುದು, ಹುಷಾರ್!

ಈ ಯುಪಿಐ-ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡುವ ಹಂತ ಹಂತದ ಪ್ರಕ್ರಿಯೆ:- 
*  ಮೊದಲನೆಯದಾಗಿ ಯುಪಿಐ-ಎಟಿಎಂಗೆ ಹೋಗಿ. 
* ಇಲ್ಲಿ ಯುಪಿಐ ಕಾರ್ಡ್‌ಲೆಸ್ ಕ್ಯಾಶ್ ಬಟನ್ ಅನ್ನು ಟ್ಯಾಪ್ ಮಾಡಿ. 
* ಬಳಿಕ ನೀವು ಹಿಂಪಡೆಯಬೇಕಾದ ಮೊತ್ತವನ್ನು ನಮೂದಿಸಿ. 
* ನಂತರ ಎಟಿಎಂ ಯಂತ್ರದ ಪರದೆಯ ಮೇಲೆ ಕ್ಯೂಆರ್ ಕೋಡ್ ಗೋಚರಿಸುತ್ತದೆ. 
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ BHIM ಯುಪಿಐ ಅಪ್ಲಿಕೇಶನ್‌ ತೆರೆದು ಪರದೆಯ ಮೇಲೆ ಗೋಚರಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿರಿ. 
* ನಂತರ ನಿಮ್ಮ ಯುಪಿಐ ನಮೂದಿಸಿ. 
* ಯುಪಿಐ ಪಿನ್ ನಮೂದಿಸಿದ ತಕ್ಷಣ ನಗದು ಹಿಂಪಡೆಯುವಿಕೆ ದೃಢೀಕರಣ ಸಂದೇಶ ನಿಮಗೆ ಲಭ್ಯವಾಗುತ್ತದೆ. ಇದರೊಂದಿಗೆ ನೀವು ಸಾಮಾನ್ಯವಾಗಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಂತೆ ಹಣ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News