Trending News: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಉಪಗ್ರಹ ಸೂರ್ಯನ ನಗುಮೊಗದ ಈ ಚಿತ್ರವನ್ನು ಕ್ಲಿಕ್ಕಿಸಿದೆ, ಈ ಚಿತ್ರದಲ್ಲಿ ಸೂರ್ಯನಿಗೂ ಒಂದು ಮುಹವಿದೆ ಮತ್ತು ಆತ ನಗುತ್ತಿದ್ದಾನೆ ಎಂಬಂತೆ ತೋರುತ್ತಿದೆ. ಆದಾಗ್ಯೂ, ಚಿತ್ರದಲ್ಲಿ ಕಂಡುಬರುವ ಸೂರ್ಯನ ಈ ರೂಪವನ್ನು ತಜ್ಞರು ಎಚ್ಚರಿಕೆ ಎಂದು ವಿವರಿಸಿದ್ದಾರೆ. ನಾಸಾ ತನ್ನ ದೂರದರ್ಶಕದ ಸಹಾಯದಿಂದ ಈ ಚಿತ್ರವನ್ನು ಕ್ಲಿಕ್ಕಿಸಿದೆ.
ಇದನ್ನೂ ಓದಿ-Big Banking Alert: SBI ಸೇರಿದಂತೆ 18 ಬ್ಯಾಂಕುಗಳ ಗ್ರಾಹಕರೇ ಎಚ್ಚರ! ಹೊಸ ರೂಪದಲ್ಲಿ ಮರಳಿ ಬಂದ ಅಪಾಯಕಾರಿ ವೈರಸ್
ಇದರಿಂದ ನಾಳೆ ಶನಿವಾರ ಸೂರ್ಯನಿಂದ ಭೂಮಿಯ ಕಡೆಗೆ ನೇರಳಾತೀತ ಕಿರಣಗಳ ದಾಳಿ ಸಂಭವಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಾಸಾದ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿಯು ಸೂರ್ಯನನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದೆ ಎಂದು SpaceWeather.com ಗೆ ದಿ ಗಾರ್ಡಿಯನ್ ಉಲ್ಲೇಖಿಸಿದೆ. ನೇರಳಾತೀತ ಬೆಳಕಿನಲ್ಲಿ ಕಂಡುಬರುವ ಸೂರ್ಯನ ಮೇಲಿನ ಕಪ್ಪು ಕಲೆಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ. ಅವು ಬಾಹ್ಯಾಕಾಶದಲ್ಲಿ ಬಲವಾದ ಸೌರ ಮಾರುತಗಳು ಬೀಸುವ ಪ್ರದೇಶಗಳಾಗಿವೆ.ಇನ್ನೊಂದೆಡೆ, ನಾಸಾ ಈ ಚಿತ್ರವನ್ನು ಬಿಡುಗಡೆ ಮಾಡಿದ ನಂತರ ಆನ್ಲೈನ್ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಅನೇಕ ಜನರು ಇದನ್ನು ಭೂತದ ಮುಖವಾಡ ಎಂದು ಕರೆದರೆ, ಕೆಲವರು ಸಿಂಹದ ಮುಖವಾಡ ಎನ್ನುತ್ತಿದ್ದಾರೆ. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಚಿತ್ರವನ್ನು ಮಕ್ಕಳ ಶೋ ಟೆಲಿಟಬ್ಬೀಸ್ಗೆ ಹೋಲಿಸಿದ್ದಾರೆ.
ಈ ಫೋಟೋ ಅಕ್ಟೋಬರ್ 26 ರಿಂದ ಪ್ರಕಟವಾಗಿದೆ. ಈ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆದ ಬಳಿಕ, ಜನರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸೂರ್ಯ ಒಂದು ಬಿಸ್ಕಿಟ್ ಆಗಿದ್ದಾನೆ ಎಂಬುದು ಇದೀಗ ದೃಢಪಟ್ಟಿದೆ ಎಂದು ವ್ಯಕ್ತಿಯೊಬ್ಬರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಸೂರ್ಯನ ಈ ಚಿತ್ರದೊಂದಿಗೆ ವ್ಯಕ್ತಿ ಮಿನಿ ಬಿಸ್ಕೆಟ್ ಚಿತ್ರವನ್ನು ಕೂಡ ಹಂಚಿಕೊಂಡಿದ್ದಾರೆ. ಅನೇಕ ಜನರು ಫೋಟೋವನ್ನು ಸ್ವಲ್ಪ ಬದಲಾಯಿಸಿದ್ದಾರೆ. ಟ್ವಿಟರ್ನಲ್ಲಿ ವ್ಯಕ್ತಿಯೊಬ್ಬರು ನಗುತ್ತಿರುವ ಈ ಸೂರ್ಯನಿಗೆ ಸಿಂಹದ ರೂಪ ನೀಡಿದ್ದಾರೆ.
Say cheese! 📸
Today, NASA’s Solar Dynamics Observatory caught the Sun "smiling." Seen in ultraviolet light, these dark patches on the Sun are known as coronal holes and are regions where fast solar wind gushes out into space. pic.twitter.com/hVRXaN7Z31
— NASA Sun, Space & Scream 🎃 (@NASASun) October 26, 2022
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ