ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಊದಿಕೊಂಡಿದೆಯೇ? ಎಚ್ಚರ! ಎಚ್ಚರ!

Smartphone: ಸ್ಮಾರ್ಟ್‌ಫೋನ್‌ನ ಬ್ಯಾಟರಿ ಊದಿಕೊಳ್ಳುವುದನ್ನು ನೀವು ನೋಡಿರಬಹುದು. ಆದರಿದು ಫೋನನ್ನು ಹಾನಿಗೊಳಿಸುವುದರೊಂದಿಗೆ ಸ್ಫೋಟಿಸಲೂ ಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jun 19, 2024, 10:09 AM IST
  • ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಊದಿಕೊಳ್ಳುವುದು ಗಂಭೀರ ಸಮಸ್ಯೆ
  • ಫೋನ್ ಬ್ಯಾಟರಿ ಊದಿಕೊಳ್ಳಲು ನಿಮ್ಮ ಕೆಲವು ತಪ್ಪುಗಳು ಕೂಡ ಕಾರಣವಿರಬಹುದು
  • ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...
ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಊದಿಕೊಂಡಿದೆಯೇ? ಎಚ್ಚರ! ಎಚ್ಚರ!  title=

Smartphone Tips: ಸ್ಮಾರ್ಟ್‌ಫೋನ್‌ಗಳ ಪದಾರ್ಪಣೆಯೊಂದಿಗೆ ಫೋನ್ ಈಗ ಕೇವಲ ಸಂಪರ್ಕ ಸೇತುವೆಯಷ್ಟೇ ಅಲ್ಲ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಇಂಟರ್ನೆಟ್, ಗೇಮಿಂಗ್, ವೀಡಿಯೊಗಳನ್ನು ವೀಕ್ಷಿಸಲು ಮತ್ತು ಇತರ ಹಲವು ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಆದರೆ, ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಊದಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಇದನ್ನು ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆ ಎದುರಾಗಬಹುದು. 

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಊದಿಕೊಳ್ಳುವುದು ಫೋನ್ ಅನ್ನು ಹಾನಿಗೊಳಿಸುವುದಷ್ಟೇ ಅಲ್ಲ, ಫೋನ್ ಸ್ಫೋಟಕ್ಕೂ (Phone Blast) ಕೂಡ ಕಾರನಾಗಿರಬಹುದು. ಇದನ್ನು ತಪ್ಪಿಸಲು ಫೋನ್ ಬ್ಯಾಟರಿ ಊತಕ್ಕೆ ಮುಖ್ಯ ಕಾರಣಗಳೇನು? ಎಂದು ತಿಳಿದಿರುವುದು ಅಗತ್ಯವಾಗಿದೆ. 

ಸ್ಮಾರ್ಟ್‌ಫೋನ್‌ನ ಬ್ಯಾಟರಿ ಊದಿಕೊಳ್ಳಲು ನಿಮ್ಮ ಈ ತಪ್ಪುಗಳೂ ಕಾರಣವಿರಬಹುದು! 
ನೇರ ಸೂರ್ಯನ ಕಿರಣಗಳು: 

ಸ್ಮಾರ್ಟ್‌ಫೋನ್ (Smartphone) ಅನ್ನು ನೇರ ಸೂರ್ಯನ ಬೆಳಕಿನಲ್ಲಿ ಇಡುವುದರಿಂದ ಇದು ಫೋನ್ ಹೆಚ್ಚು ಬಿಸಿಯಾಗುತ್ತದೆ. ಇದು ಬ್ಯಾಟರಿ ಊಟಕ್ಕೆ ಮುಖ್ಯ ಕಾರಣವಾಗಬಹುದು. 

ಇದನ್ನೂ ಓದಿ- Refrigerator Blast: ಇಂತಹ ಜಾಗದಲ್ಲಿ ಫ್ರೀಡ್ಜ್ ಇಟ್ಟರೆ ಅದು ಸ್ಫೋಟಗೊಳ್ಳಬಹುದು, ಎಚ್ಚರ!

ತಪ್ಪಾದ ಚಾರ್ಜರ್ ಬಳಕೆ: 
ಸ್ಮಾರ್ಟ್‌ಫೋನ್ ಚಾರ್ಜ್ (Smartphone Charge) ಮಾಡುವಾಗ ನೀವು ಬಳಸುವ ಫೋನ್ ಕಂಪನಿಯ ಚಾರ್ಜರ್ ಅನ್ನೇ ಬಳಸುವುದನ್ನು ಖಚಿತಪಡಿಸಿಕೊಳ್ಳಿ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಲೋಕಲ್ ಚಾರ್ಜರ್ ಗಳ ಬಳಕೆಯನ್ನು ತಪ್ಪಿಸಿ. 

ಹೆಚ್ಚು ಹೊತ್ತು ಚಾರ್ಜ್ ಮಾಡುವುದು: 
ನಮ್ಮಲ್ಲಿ ಕೆಲವರಿಗೆ ಹೆಚ್ಚು ಹೊತ್ತು ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ (Phone Battery) ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಆದರೆ, ದೀರ್ಘಕಾಲದವರೆಗೆ ಚಾರ್ಜ್ ಮಾಡುವುದರಿಂದ ಬ್ಯಾಟರಿಯು ಊದಿಕೊಳ್ಳಬಹುದು. ಕೆಲವೊಮ್ಮೆ ಇದರಿಂದಲೂ ಸ್ಫೋಟ ಸಂಭವಿಸಬಹುದು. 

ಇದನ್ನೂ ಓದಿ- 

ಫೋನ್ ಬೀಳುವುದು: 
ಫೋನ್ ತುಂಬಾ ಎತ್ತರದಿಂದ ಕೆಳಗೆ ಬಿದ್ದರೆ ಇದರಿಂದ ಫೋನ್ ಡಿಸ್ಪ್ಲೇ ಅಷ್ಟೇ ಅಲ್ಲ ಬ್ಯಾಟರಿಯೂ ಹಾನಿಗೊಳಗಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News