Motorola Edge 20: ಆ. 17ರಂದು ಭಾರತದಲ್ಲಿ ಲಾಂಚ್ ಆಗಲಿದೆ ಅತ್ಯಂತ ತೆಳ್ಳನೆಯ 5G ಸ್ಮಾರ್ಟ್ಫೋನ್

ಮೊಟೊರೊಲಾ ಎಡ್ಜ್ 20 ಸ್ಮಾರ್ಟ್ ಫೋನ್ ಬಿಡುಗಡೆ ದಿನಾಂಕ ಬಹಿರಂಗಗೊಂಡಿದ್ದು, ಈ ಸ್ಮಾರ್ಟ್ ಫೋನ್ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.  

Written by - Yashaswini V | Last Updated : Aug 10, 2021, 02:15 PM IST
  • ಮೊಟೊರೊಲಾ ಎಡ್ಜ್ 20 ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ತೆಳುವಾದ 5G ಸ್ಮಾರ್ಟ್ ಫೋನ್ ಆಗಿರುತ್ತದೆ
  • ಇದನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778 ಜಿ ಪ್ರೊಸೆಸರ್‌ನಲ್ಲಿ ನೀಡಲಾಗುವುದು
  • ಸ್ಮಾರ್ಟ್‌ಫೋನ್‌ನಲ್ಲಿ, ಬಳಕೆದಾರರು 8GB RAM ಅನ್ನು ಪಡೆಯುತ್ತಾರೆ
Motorola Edge 20: ಆ. 17ರಂದು ಭಾರತದಲ್ಲಿ ಲಾಂಚ್ ಆಗಲಿದೆ ಅತ್ಯಂತ ತೆಳ್ಳನೆಯ 5G ಸ್ಮಾರ್ಟ್ಫೋನ್  title=
Motorola Edge 20

ನವದೆಹಲಿ: ಇತ್ತೀಚೆಗೆ ಮೊಟೊರೊಲಾ ತನ್ನ ಮುಂಬರುವ ಸ್ಮಾರ್ಟ್ ಫೋನ್ ಮೊಟೊರೊಲಾ ಎಡ್ಜ್ 20 (Motorola Edge 20) ಕುರಿತು ಟೀಸರ್ ಬಿಡುಗಡೆ ಮಾಡಿದೆ. ಇದರಲ್ಲಿ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಬಲವಾದ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಸುಳಿವು ನೀಡಿತ್ತು. ಮೊಟೊರೊಲಾ ಎಡ್ಜ್ 20 (Motorola Edge 20) ಜೊತೆಗೆ, ಕಂಪನಿಯು ಭಾರತದಲ್ಲಿ ಮೊಟೊರೊಲಾ ಎಡ್ಜ್ 20 ಫ್ಯೂಷನ್ (Motorola Edge 20 Fusion ) ಅನ್ನು ಬಿಡುಗಡೆ ಮಾಡಲಿದೆ. ಅದೇ ಸಮಯದಲ್ಲಿ, ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಮೊಟೊರೊಲಾ ಎಡ್ಜ್ 20 ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಗಸ್ಟ್ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಇದು ಭಾರತದಲ್ಲಿ ಲಭ್ಯವಿರುವ ಅತ್ಯಂತ ತೆಳುವಾದ 5G ಸ್ಮಾರ್ಟ್‌ಫೋನ್‌ ಆಗಲಿದೆ ಎಂದು ತಿಳಿದುಬಂದಿದೆ.

ಮೊಟೊರೊಲಾ ಎಡ್ಜ್ 20 ಲಾಂಚಿಂಗ್:
ಮೊಟೊರೊಲಾ ಎಡ್ಜ್ 20 (Motorola Edge 20) ಕ್ಕೆ ಸಂಬಂಧಿಸಿದಂತೆ, ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಆಗಸ್ಟ್ 17 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಭಾರತದಲ್ಲಿ ಇದು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಪ್ರತ್ಯೇಕವಾಗಿ ಮಾರಾಟಕ್ಕೆ ಲಭ್ಯವಿರುವುದು ಸ್ಪಷ್ಟವಾಗಿದೆ. 

ಇದನ್ನೂ ಓದಿ -  ಎರಡು ದಿನಗಳವರೆಗೆ ಬರುತ್ತದೆ ಈ ಫೋನಿನ್ ಚಾರ್ಜ್, 3D ಬ್ಯೂಟಿ ಮೋಡ್ ನಲ್ಲಿ ಫೋಟೋ ತೆಗೆಯಬಹುದು Infinix ಬಿಡುಗಡೆ ಮಾಡಿದೆ ಹೊಸ Smartphone,

ಮೊಟೊರೊಲಾ ಎಡ್ಜ್ 20: ಹಲವು ವಿಶೇಷತೆಗಳನ್ನು ಹೊಂದಿದೆ:
ಫ್ಲಿಪ್‌ಕಾರ್ಟ್‌ನಲ್ಲಿ (Flipkart) ನೀಡಿರುವ ಮಾಹಿತಿಯ ಪ್ರಕಾರ, ಮೊಟೊರೊಲಾ ಎಡ್ಜ್ 20 ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ತೆಳುವಾದ 5G ಸ್ಮಾರ್ಟ್ ಫೋನ್ ಆಗಿರುತ್ತದೆ. ಸ್ಮಾರ್ಟ್‌ಫೋನ್‌ನ ಬಾಡಿ 6.99mm ಸ್ಲಿಮ್ ಆಗಿರುತ್ತದೆ. ವಿಶೇಷವೆಂದರೆ ಇದನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778 ಜಿ ಪ್ರೊಸೆಸರ್‌ನಲ್ಲಿ ನೀಡಲಾಗುವುದು ಮತ್ತು ಇದು ಬಳಕೆದಾರರಿಗೆ ಶಕ್ತಿಯುತ ಕಾರ್ಯಕ್ಷಮತೆಯ ಅನುಭವವನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ HDR10+ ಬೆಂಬಲವನ್ನು 144Hz ರಿಫ್ರೆಶ್ ದರದಲ್ಲಿ ನೀಡಲಾಗುವುದು. ಸ್ಮಾರ್ಟ್‌ಫೋನ್‌ನಲ್ಲಿ, ಬಳಕೆದಾರರು 8GB RAM ಅನ್ನು ಪಡೆಯುತ್ತಾರೆ ಮತ್ತು ಫೋನ್‌ನಲ್ಲಿ AMOLED ಡಿಸ್‌ಪ್ಲೇಯನ್ನು ನೀಡಲಾಗುತ್ತದೆ.

ಇದನ್ನೂ ಓದಿ- Tokyo Olympics 2020: ಪದಕ ವಿಜೇತ ಭಾರತೀಯ ಆಟಗಾರಿಗೆ Xiaomi ನೀಡುತ್ತಿದೆ ಈ ಉಡುಗೊರೆ

ಫೋಟೊಗ್ರಫಿಗಾಗಿ ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಇದರ ಪ್ರಾಥಮಿಕ ಸೆನ್ಸಾರ್ 108MP ಆಗಿರುತ್ತದೆ. ಇದು 30X ಸೂಪರ್ ಜೂಮ್ ಬೆಂಬಲದೊಂದಿಗೆ ಬರುತ್ತದೆ ಮತ್ತು ಬಳಕೆದಾರರಿಗೆ ಉತ್ತಮ ಛಾಯಾಗ್ರಹಣದ ಅನುಭವವನ್ನು ನೀಡುತ್ತದೆ. ಇದಲ್ಲದೇ, 16MP ಅಲ್ಟ್ರಾ ವೈಡ್ ಆಂಗಲ್ ಶೂಟರ್ ಮತ್ತು 8MP ಟೆಲಿಫೋಟೋ ಲೆನ್ಸ್ ಅನ್ನು ಕೂಡ ಫೋನಿನಲ್ಲಿ ನೀಡಲಾಗುವುದು. ಫೋನಿನ ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಗಾಗಿ, ನೀವು ಫೋನ್ ಬಿಡುಗಡೆಗಾಗಿ ಕಾಯಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News