ತೆರೆಯಲ್ಪಟ್ಟ ಚಂದ್ರ ರಹಸ್ಯಗಳ ಕೀಲಿ: ಅನಾಗ್ಲಿಫ್ ಛಾಯಾಚಿತ್ರಗಳ ಮೂಲಕ ಚಂದ್ರನ 3ಡಿ ಜಗತ್ತಿನ ಅನ್ವೇಷಣೆ

Chandrayaan-3: ಅನಾಗ್ಲಿಫ್ ಚಿತ್ರಗಳು ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ ಚಂದ್ರನ ಮೇಲ್ಮೈಯನ್ನು 3ಡಿಯಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಕೆಂಪು ಮತ್ತು ಸಯಾನ್ ಗಾಜುಗಳುಳ್ಳ ಕನ್ನಡಕವನ್ನು ಬಳಸಿ, ಅವರು ಚಂದ್ರನ ಮೇಲ್ಮೈಯ ಆಳ ಮತ್ತು ಟೋಪೋಗ್ರಫಿಯನ್ನು ಗಮನಿಸಿ, ಚಂದ್ರನ ಭೂವಿಜ್ಞಾನ ಮತ್ತು ರಚನೆಯನ್ನು ತಿಳಿಯಬಹುದು.

Written by - Girish Linganna | Edited by - Yashaswini V | Last Updated : Sep 6, 2023, 12:52 PM IST
  • ಅನಾಗ್ಲಿಫ್ ಚಿತ್ರಗಳು ಶೈಕ್ಷಣಿಕ ಉದ್ದೇಶಗಳಿಗೆ ಹೆಚ್ಚು ಮೌಲ್ಯಯುತವಾಗಿವೆ.
  • ಅನಾಗ್ಲಿಫ್ ಚಿತ್ರಗಳು ಯೋಜನಾ ನಿರ್ಮಾತೃಗಳಿಗೆ ಚಂದ್ರನ ಮೇಲ್ಮೈಯನ್ನು ತಿಳಿಯಲು, ಅಲ್ಲಿರುವ ಅಡಚಣೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.
  • ಈ ಮಾಹಿತಿಗಳು ರೋವರ್ ಹೇಗೆ ಚಲಿಸಬೇಕೆಂದು ನಿರ್ಧಾರ ಕೈಗೊಳ್ಳಲು ಮತ್ತು ಹೆಚ್ಚಿನ ಅನ್ವೇಷಣೆಗಳಿಗೆ ಸ್ಥಳವನ್ನು ನಿರ್ಣಯಿಸಲು ನೆರವಾಗುತ್ತವೆ.
ತೆರೆಯಲ್ಪಟ್ಟ ಚಂದ್ರ ರಹಸ್ಯಗಳ ಕೀಲಿ: ಅನಾಗ್ಲಿಫ್ ಛಾಯಾಚಿತ್ರಗಳ ಮೂಲಕ ಚಂದ್ರನ 3ಡಿ ಜಗತ್ತಿನ ಅನ್ವೇಷಣೆ title=

Chandrayaan-3: ಅನಾಗ್ಲಿಫ್ ಎನ್ನುವುದು ಒಂದು ಛಾಯಾಚಿತ್ರ ಚಪ್ಪಟೆಯಾಗಿ ಕಾಣುವ ಬದಲು, ಆಳವನ್ನು ಹೊಂದಿರುವಂತೆ, ಅಥವಾ ಮೂರು ಆಯಾಮಗಳನ್ನು ಹೊಂದಿರುವಂತೆ ಕಾಣುವಂತೆ ಮಾಡುವ ವಿಧಾನವಾಗಿದೆ. ಇದು ಎರಡು ವಿಭಿನ್ನ ಬಣ್ಣಗಳನ್ನು, ಸಾಮಾನ್ಯವಾಗಿ ಕೆಂಪು ಮತ್ತು ಸಯಾನ್ ಬಣ್ಣಗಳನ್ನು ಉಪಯೋಗಿಸಿಕೊಂಡು, ಒಂದೇ ದೃಶ್ಯವನ್ನು ಕೊಂಚ ವಿಭಿನ್ನ ಕೋನದಿಂದ ಕಾಣುವಂತೆ ಮಾಡುತ್ತದೆ. ಅನಾಗ್ಲಿಫ್ ಚಿತ್ರವನ್ನು ಕೆಂಪು ಮತ್ತು ಸಯಾನ್ ಬಣ್ಣಗಳ ಗಾಜನ್ನು ಹೊಂದಿರುವ ವಿಶಿಷ್ಟ ಕನ್ನಡಕದ ಮೂಲಕ ನೋಡಿದಾಗ, ನಮ್ಮ ಕಣ್ಣುಗಳು ಆ ಚಿತ್ರದ ಬೇರೆ ಬೇರೆ ಭಾಗಗಳನ್ನು ನೋಡುತ್ತವೆ ಮತ್ತು ನಮ್ಮ ಮೆದುಳು, ಆ ಸ್ಕ್ರೀನ್‌ನಿಂದ ಹೊರ ಬರುತ್ತಿರುವಂತೆ ಕಾಣುವ, ಕಣ್ಣುಗಳ ಗಮನಿಸುವ ಎರಡು ಭಾಗಗಳನ್ನು ಒಂದಾಗಿಸಿ ಗಮನಿಸುತ್ತದೆ.

ನಾವ್‌ಕ್ಯಾಮ್ ಸ್ಟೀರಿಯೋ ಛಾಯಾಚಿತ್ರಗಳು ಚಂದ್ರನ ಮೇಲ್ಮೈಯನ್ನು ಅನ್ವೇಷಿಸುವ ಪ್ರಗ್ಯಾನ್ ರೋವರ್‌ನ ಎರಡು ಕ್ಯಾಮರಾಗಳು ತೆಗೆದ ಜೋಡಿ ಛಾಯಾಚಿತ್ರಗಳಾಗಿವೆ. ಈ ಕ್ಯಾಮರಾಗಳು ರೋವರ್‌ನ ಎಡ ಮತ್ತು ಬಲ ಭಾಗಗಳಲ್ಲಿದ್ದು, ಒಂದೇ ದೃಶ್ಯವನ್ನು ಕೊಂಚ ವಿಭಿನ್ನವಾಗಿ ವೀಕ್ಷಿಸುತ್ತವೆ. ಎಡ ಭಾಗದ ಚಿತ್ರವನ್ನು ಕೆಂಪು ಬಣ್ಣದಲ್ಲಿ ಮತ್ತು ಬಲಭಾಗದ ಚಿತ್ರವನ್ನು ನೀಲಿ ಮತ್ತು ಹಸಿರು ಬಣ್ಣಗಳ ಚಾನೆಲ್‌ನಲ್ಲಿ (ಅವೆರಡರ ಮಿಶ್ರಣವಾಗಿ ಸಯಾನ್ ಬಣ್ಣ ಲಭಿಸುತ್ತದೆ) ತೆಗೆದು, ಅನಾಗ್ಲಿಫ್ ಚಿತ್ರವನ್ನು ತಯಾರಿಸಲಾಗುತ್ತದೆ. ಈ ಚಿತ್ರವನ್ನು ಕೆಂಪು ಮತ್ತು ಸಯಾನ್ ಗಾಜುಗಳ ಕನ್ನಡಕದ ಮೂಲಕ ನೋಡಿ, ಚಂದ್ರನ ಮೇಲ್ಮೈಯನ್ನು ಮೂರು ಆಯಾಮಗಳಲ್ಲಿ (3D) ಗಮನಿಸಲಾಗುತ್ತದೆ.

ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ತೆಗೆದ ನಾವ್‌ಕ್ಯಾಮ್ ಸ್ಟೀರಿಯೋ ಛಾಯಾಚಿತ್ರಗಳ ಅನಾಗ್ಲಿಫ್ ಚಿತ್ರಣ ನಿರ್ಮಿಸುವುದರಿಂದ ಆಗುವ ಪ್ರಯೋಜನಗಳು:
1. 3ಡಿ ಮೇಲ್ಮೈ ಚಿತ್ರಣ: 

ಅನಾಗ್ಲಿಫ್ ಚಿತ್ರಗಳು ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ ಚಂದ್ರನ ಮೇಲ್ಮೈಯನ್ನು 3ಡಿಯಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಕೆಂಪು ಮತ್ತು ಸಯಾನ್ ಗಾಜುಗಳುಳ್ಳ ಕನ್ನಡಕವನ್ನು ಬಳಸಿ, ಅವರು ಚಂದ್ರನ ಮೇಲ್ಮೈಯ ಆಳ ಮತ್ತು ಟೋಪೋಗ್ರಫಿಯನ್ನು ಗಮನಿಸಿ, ಚಂದ್ರನ ಭೂವಿಜ್ಞಾನ ಮತ್ತು ರಚನೆಯನ್ನು ತಿಳಿಯಬಹುದು.

ಇದನ್ನೂ ಓದಿ- ಮೊದಲು ಚಂದ್ರನಲ್ಲಿ ಚಮತ್ಕಾರ ! ಈಗ ಸೂರ್ಯನಿಗೆ ನಮಸ್ಕಾರ; ಹ್ಯಾಲೊ ಆರ್ಬಿಟ್‌ ಗೆ ಆದಿತ್ಯ ಎಲ್1

2. ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ: 
ಅನಾಗ್ಲಿಫ್ ಮೂಲಕ ಪಡೆಯುವ  3ಡಿ ದೃಷ್ಟಿಕೋನ ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈ ವೈಶಿಷ್ಟ್ಯಗಳಾದ ಕುಳಿಗಳು, ಬಂಡೆಗಳು ಹಾಗೂ ಭೂವೈಜ್ಞಾನಿಕ ರಚನೆಗಳನ್ನು ಹೆಚ್ಚಿನ ಮಾಹಿತಿಗಳೊಡನೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಇದು ಚಂದ್ರನ ಕುರಿತ ಮಾಹಿತಿಗಳನ್ನು ಇನ್ನಷ್ಟು ವಿಶ್ಲೇಷಿಸಿ, ವೈಜ್ಞಾನಿಕ ವೀಕ್ಷಣೆ ನಡೆಸಲು ನೆರವಾಗುತ್ತದೆ.

3. ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ: 
ಅನಾಗ್ಲಿಫ್ ಚಿತ್ರಗಳು ವೀಕ್ಷಕರಲ್ಲಿ ಆಸಕ್ತಿ ಮೂಡಿಸಿ, ಅವರನ್ನು ತೊಡಗಿಸಿಕೊಳ್ಳುತ್ತವೆ. ಆದ್ದರಿಂದ ಅವುಗಳು ಜನರಲ್ಲಿ ಚಂದ್ರನ ಅನ್ವೇಷಣೆಯ ಕುರಿತು ಆಸಕ್ತಿ ಮೂಡಿಸಬಲ್ಲವು. ಅವುಗಳು ಬಾಹ್ಯಾಕಾಶ ಸಂಸ್ಥೆಗಳಿಗೆ ಸಾಮಾನ್ಯ ನಾಗರಿಕರಲ್ಲಿ ಚಂದ್ರ ಅನ್ವೇಷಣಾ ಯೋಜನೆಗಳ ಕುರಿತು ಆಸಕ್ತಿ ಮೂಡಿಸಲು ಪೂರಕವಾಗಿದ್ದು, ಬಾಹ್ಯಾಕಾಶ ವಿಜ್ಞಾನ ಎಲ್ಲರನ್ನೂ ತಲುಪುವಂತೆ ಮಾಡುತ್ತವೆ.

4. ಶಿಕ್ಷಣ ಕ್ಷೇತ್ರ: 
ಅನಾಗ್ಲಿಫ್ ಚಿತ್ರಗಳು ಶೈಕ್ಷಣಿಕ ಉದ್ದೇಶಗಳಿಗೆ ಹೆಚ್ಚು ಮೌಲ್ಯಯುತವಾಗಿವೆ. ಅವುಗಳನ್ನು ತರಗತಿಗಳಲ್ಲಿ ಮತ್ತು ಸಾರ್ವಜನಿಕ ಪ್ರಸ್ತುತಿಗಳಲ್ಲಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಚಂದ್ರನ ಮೇಲ್ಮೈಯ ಕುರಿತು ತಿಳಿಸಲು ಮತ್ತು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಬಳಸುವ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- ADITYA L1 MISSION LAUNCH: ಸೂರ್ಯನ ಮೇಲೆ ಆದಿತ್ಯ ಲ್ಯಾಂಡ್ ಆಗುವುದೇ..?

5. ರೋವರ್ ಚಲನೆಯ ಯೋಜನೆಗಳು: 
ಅನಾಗ್ಲಿಫ್ ಚಿತ್ರಗಳು ಯೋಜನಾ ನಿರ್ಮಾತೃಗಳಿಗೆ ಚಂದ್ರನ ಮೇಲ್ಮೈಯನ್ನು ತಿಳಿಯಲು, ಅಲ್ಲಿರುವ ಅಡಚಣೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಈ ಮಾಹಿತಿಗಳು ರೋವರ್ ಹೇಗೆ ಚಲಿಸಬೇಕೆಂದು ನಿರ್ಧಾರ ಕೈಗೊಳ್ಳಲು ಮತ್ತು ಹೆಚ್ಚಿನ ಅನ್ವೇಷಣೆಗಳಿಗೆ ಸ್ಥಳವನ್ನು ನಿರ್ಣಯಿಸಲು ನೆರವಾಗುತ್ತವೆ.

ಒಟ್ಟಾರೆಯಾಗಿ, ನಾವ್‌ಕ್ಯಾಮ್ ಸ್ಟೀರಿಯೋ ಇಮೇಜಸ್ ಕ್ಯಾಮರಾಗಳು ಒದಗಿಸಿರುವ ಅನಾಗ್ಲಿಫ್ ಚಿತ್ರಗಳು ವೈಜ್ಞಾನಿಕ ಸಂಶೋಧನೆಗಳು ಮತ್ತು ಸಾರ್ವಜನಿಕರ ಒಳಗೊಳ್ಳುವಿಕೆಗೆ ಕೊಡುಗೆ ನೀಡಲಿವೆ. ಆ ಮೂಲಕ ಚಂದ್ರನ ಮೇಲ್ಮೈಯನ್ನು ಮೂರು ಆಯಾಮಗಳಲ್ಲಿ ಅಧ್ಯಯನ ನಡೆಸಲು ನೆರವಾಗಲಿವೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ ವಿಶ್ಲೇಷಕರು)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News