ಎಲ್ಲೆಡೆ ಕೆಲಸದಿಂದ ವಜಾ ಮಾಡುತ್ತಿದ್ದರೆ ಟಾಟಾ ಗ್ರೂಪ್‌ನ ಈ ಕಂಪನಿ ಮಾಡಿರುವ ಘೋಷಣೆ ಏನು ಗೊತ್ತಾ ?

TCS Layoff:  ಉದ್ಯೋಗಿಗಳನ್ನು ವಜಾಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್  ಸ್ಪಷ್ಟಪಡಿಸಿದೆ. TCS ನಲ್ಲಿ ನಾವು ಸುದೀರ್ಘ ವೃತ್ತಿಜೀವನಕ್ಕಾಗಿ ಪ್ರತಿಭೆಯನ್ನು ಬೆಳೆಸುತ್ತೇವೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Written by - Ranjitha R K | Last Updated : Feb 22, 2023, 01:15 PM IST
  • ಎಲ್ಲರಿಗೂ ಮಾದರಿಯಾದ ಟಿಸಿಎಸ್
  • ಉದ್ಯೋಗಿಗಳನ್ನು ವಜಾಗೊಳಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟನೆ
  • ಕೆಲಸ ಕಳೆದುಕೊಂಡಿರುವ ನೌಕರರು ಇಲ್ಲಿ ನೇಮಕ
ಎಲ್ಲೆಡೆ ಕೆಲಸದಿಂದ ವಜಾ ಮಾಡುತ್ತಿದ್ದರೆ ಟಾಟಾ ಗ್ರೂಪ್‌ನ ಈ ಕಂಪನಿ  ಮಾಡಿರುವ ಘೋಷಣೆ ಏನು ಗೊತ್ತಾ ?  title=

TCS Layoff : ವಿಶ್ವದಾದ್ಯಂತ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಬೆನ್ನಲ್ಲೇ  ದೇಶದ ಅತಿದೊಡ್ಡ ಐಟಿ ಕಂಪನಿ ಟಿಸಿಎಸ್ ಎಲ್ಲರಿಗೂ  ಮಾದರಿಯಾಗಿದೆ. ಉದ್ಯೋಗಿಗಳನ್ನು ವಜಾಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್  ಸ್ಪಷ್ಟಪಡಿಸಿದೆ. TCS ನಲ್ಲಿ ನಾವು ಸುದೀರ್ಘ ವೃತ್ತಿಜೀವನಕ್ಕಾಗಿ ಪ್ರತಿಭೆಯನ್ನು ಬೆಳೆಸುತ್ತೇವೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಕೆಲಸ ಕಳೆದುಕೊಂಡಿರುವ ನೌಕರರು ಇಲ್ಲಿ ನೇಮಕ :
ಕಂಪನಿಯು ಉದ್ಯೋಗ ಕಳೆದುಕೊಂಡಿರುವ ಸ್ಟಾರ್ಟಪ್ ಕಂಪನಿಗಳ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಟಿಸಿಎಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಪಂಚದಾದ್ಯಂತದ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ಸಂದರ್ಭದಲ್ಲಿ   TCSನ ಈ ಧೋರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  

ಇದನ್ನೂ ಓದಿ : Tejas Mk1A : ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಡಲಿದೆ ʼಭಾರತʼದ ನಾಲ್ಕನೇ ತಲೆಮಾರಿನ ʼಯುದ್ಧ ವಿಮಾನʼ

 ಉದೊಗಿಗಳನ್ನು ಕೆಲಸದಿಂದ ತೆಗೆಯುವ ಉದ್ದೇಶ ನಮಗಿಲ್ಲ. ನಾವು ಪ್ರತಿಭೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಲಕ್ಕರ್ ಸ್ಪಷ್ಟಪಡಿಸಿದ್ದಾರೆ.  ಹಲವು ಕಂಪನಿಗಳು ಅಗತ್ಯಕ್ಕಿಂತ ಹೆಚ್ಚಿನ  ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಂಡಿರುವುದು ವಜಾದಂಥಹ ಕ್ರಮಕ್ಕೆ ಕಾರಣ ಎಂದು ಹೇಳಿದೆ. 

ಮೊದಲಿನಂತೆಯೇ ಸಿಗಲಿದೆ ಇಂಕ್ರಿಮೆಂಟ್ :
ನೌಕರನ ಬಳಿ ಇರುವ ದಕ್ಷತೆ  ಅಗತ್ಯಕ್ಕಿಂತ ಕಡಿಮೆಯಾದಾಗ ಕೆಲವೊಮ್ಮೆ ಇಂತಹ ಪರಿಸ್ಥಿತಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಉದ್ಯೋಗಿಗೆ ಸಮಯಾವಕಾಶ ನೀಡುತ್ತೇವೆ ಮತ್ತು ಅವರಿಗೆ ತರಬೇತಿ ನೀಡುತ್ತೇವೆ ಎಂದು ಲಕ್ಕರ್ ಹೇಳಿದ್ದಾರೆ. ಟಿಸಿಎಸ್‌ನ ಉದ್ಯೋಗಿಗಳ ಸಂಖ್ಯೆ 6 ಲಕ್ಷಕ್ಕೂ ಹೆಚ್ಚು. ಈ ಬಾರಿಯೂ ಕಂಪನಿಯು ಹಿಂದಿನ ವರ್ಷಗಳಿಗೆ ಸಮಾನವಾಗಿ ನೌಕರರಿಗೆ ಸಂಬಳವನ್ನು ಹೆಚ್ಚಿಸಲಿದೆ ಎಂದು ಲಕ್ಕರ್ ತಿಳಿಸಿದ್ದಾರೆ. 

ಇದನ್ನೂ ಓದಿ : ಮನೆಯಲ್ಲಿನ ವೈಫೈ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಸಿಂಪಲ್ ಉಪಾಯ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News