ಒಂದೇ ದಿನದಲ್ಲಿ 10 ಸಾವಿರ ಬುಕ್ಕಿಂಗ್ ಆದ Tata Tiago EV: ಅಬ್ಬಬ್ಬಾ ಈ ಕಾರಿನ ವೈಶಿಷ್ಟ್ಯ ಕೇಳಿದ್ರೆ ದಂಗಾಗ್ತೀರಿ

ಇದು ದೇಶದಲ್ಲಿಯೇ ಅಗ್ಗದ ಎಲೆಕ್ಟ್ರಿಕ್ ಕಾರಾಗಿದ್ದು, ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಮೀ ಓಡುವ ಸಾಮಾರ್ಥ್ಯ ಈ ಕಾರಿಗಿದೆ. ಈ ಕಾರಿನ ಮೌಲ್ಯ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂಪಾಯಿ.

Written by - Bhavishya Shetty | Last Updated : Oct 11, 2022, 04:25 PM IST
    • ಟಾಟಾ ಮೋಟಾರ್ಸ್ ದೇಶದಲ್ಲಿ ಅಗ್ಗದ ಎಲೆಕ್ಟ್ರಿಕ್ ಕಾರು
    • ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಮೀ ಓಡುವ ಸಾಮಾರ್ಥ್ಯವಿದೆ
    • ಈ ಕಾರಿನ ಮೌಲ್ಯ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂಪಾಯಿ
ಒಂದೇ ದಿನದಲ್ಲಿ 10 ಸಾವಿರ ಬುಕ್ಕಿಂಗ್ ಆದ Tata Tiago EV: ಅಬ್ಬಬ್ಬಾ ಈ ಕಾರಿನ ವೈಶಿಷ್ಟ್ಯ ಕೇಳಿದ್ರೆ ದಂಗಾಗ್ತೀರಿ title=
Tata Motors

Tata Tiago EV: ಟಾಟಾ ಮೋಟಾರ್ಸ್ ದೇಶದಲ್ಲಿ ಅಗ್ಗದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಕಳೆದ ದಿನ ಬುಕ್ಕಿಂಗ್ ಆರಂಭವಾಗಿದೆ. ಇನ್ನು ಬುಕ್ಕಿಂಗ್ ಆರಂಭವಾಗುತ್ತಿದ್ದಂತೆ ಜಮಾಯಿಸಿದ ಜನರು ಭರ್ಜರಿಯಾಗಿ ಖರೀದಿ ಮಾಡಿದ್ದಾರೆ. ಇದರ ಪರಿಣಾಮ ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 10 ಸಾವಿರ ಬುಕ್ಕಿಂಗ್ ಆಗಿವೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bumper Offer: ಕೇವಲ 550 ರೂ.ಗೆ ಖದೀದಿಸಿ Redmi 9i Sport ಸ್ಮಾರ್ಟ್‌ಫೋನ್

ಇದು ದೇಶದಲ್ಲಿಯೇ ಅಗ್ಗದ ಎಲೆಕ್ಟ್ರಿಕ್ ಕಾರಾಗಿದ್ದು, ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಮೀ ಓಡುವ ಸಾಮಾರ್ಥ್ಯ ಈ ಕಾರಿಗಿದೆ. ಈ ಕಾರಿನ ಮೌಲ್ಯ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂಪಾಯಿ.

ಇನ್ನು ಈ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶೈಲೇಶ್ ಚಂದ್ರ ಅವರು, "Tiago EVಗೆ ಅಗಾಧ ಪ್ರತಿಕ್ರಿಯೆ ಲಭಿಸಿದ್ದು, ಈ ಬಗ್ಗೆ ನಾವು ಸಂತೋಷಪಡುತ್ತೇವೆ. ನಮ್ಮ ಗ್ರಾಹಕರಿಗೆ ಧನ್ಯವಾದಗಳು. EV ಪ್ರಯಾಣವನ್ನು ದೃಢವಾಗಿ ಬೆಂಬಲಿಸಲು ನಾವು ಹೆಚ್ಚುವರಿ 10,000 ಗ್ರಾಹಕರಿಗೆ ಪರಿಚಯಾತ್ಮಕ ಬೆಲೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ” ಎಂದರು.

ಇದನ್ನೂ ಓದಿ: Tallest Tree: ಕೊನೆಗೂ ಸಿಕ್ತು ವಿಶ್ವದ ಅತ್ಯಂತ ಎತ್ತರದ ಗಿಡ! ವಯಸ್ಸು ಕೇಳಿ ನೀವೂ ದಂಗಾಗುವಿರಿ

ಆಸಕ್ತ ಗ್ರಾಹಕರು Tiago EV ಅನ್ನು ಟೋಕನ್ ಮೊತ್ತಕ್ಕೆ ಬುಕ್ ಮಾಡಬಹುದು. ಅಕ್ಟೋಬರ್ 2022 ರಲ್ಲಿ ಪ್ರಮುಖ ನಗರಗಳಾದ್ಯಂತ ಪ್ರಮುಖ ಮಾಲ್‌ಗಳಲ್ಲಿ ಕಾರು ಪ್ರದರ್ಶನಗೊಳ್ಳಲಿದೆ ಎಂದು ಕಂಪನಿ ಹೇಳಿದೆ. ಗ್ರಾಹಕರ ಟೆಸ್ಟ್ ಡ್ರೈವ್‌ಗಳು ಡಿಸೆಂಬರ್ 2022 ರ ಅಂತ್ಯವರೆಗೆ ಲಭ್ಯವಿರುತ್ತವೆ. ವಿತರಣೆಗಳು ಜನವರಿ 2023 ರಿಂದ ಮಾತ್ರ ಪ್ರಾರಂಭವಾಗುತ್ತವೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News