Honor 70 5G: ಉತ್ತಮ ಕ್ಯಾಮೆರಾ & ಬ್ಯಾಟರಿ ಹೊಂದಿರುವ ಸ್ಟೈಲಿಶ್ 5G ಸ್ಮಾರ್ಟ್‌ಫೋನ್!

ಸ್ಮಾರ್ಟ್‌ಫೋನ್ ಬ್ರಾಂಡ್ Honor ಹೊಸ 5G ಸ್ಮಾರ್ಟ್‌ಫೋನ್ Honor 70 5Gಯನ್ನು ಬಿಡುಗಡೆ ಮಾಡಿದೆ. ಇದು ಪ್ರಚಂಡ ಕ್ಯಾಮೆರಾಗಳು ಮತ್ತು ದೀರ್ಘ ಬಾಳಿಕೆಯ ಬ್ಯಾಟರಿ ಜೊತೆಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.  

Written by - Puttaraj K Alur | Last Updated : Aug 26, 2022, 02:25 PM IST
  • Honor ಹೊಸ 5G ಸ್ಮಾರ್ಟ್‌ಫೋನ್ Honor 70 5G ಬಿಡುಗಡೆ ಮಾಡಿದೆ
  • ಉತ್ತಮ ಕ್ಯಾಮೆರಾ ಮತ್ತು ದೀರ್ಘ ಬಾಳಿಕೆಯ ಬ್ಯಾಟರಿ ಹೊಂದಿರುವ ಫೋನ್
  • ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿರುವ ಸ್ಮಾರ್ಟ್‍ಫೋನ್
Honor 70 5G: ಉತ್ತಮ ಕ್ಯಾಮೆರಾ & ಬ್ಯಾಟರಿ ಹೊಂದಿರುವ ಸ್ಟೈಲಿಶ್ 5G ಸ್ಮಾರ್ಟ್‌ಫೋನ್! title=
Honor 70 5G smartphon

ನವದೆಹಲಿ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರತಿದಿನ ಹೊಸ ಹೊಸ ಫೋನ್‍ಗಳು ಬಿಡುಗಡೆಯಾಗುತ್ತವೆ. ನೀವು ಹೊಸ ಫೋನ್‌ ಖರೀದಿಸಬಯಸಿದರೆ ಇಲ್ಲಿದೆ ನೋಡಿ ಉತ್ತಮ ಸ್ಮಾರ್ಟ್‌ಫೋನ್. Honor ಕಂಪನಿಯು ಹೊಸ 5G ಸ್ಮಾರ್ಟ್‌ಫೋನ್ Honor 70 5G ಬಿಡುಗಡೆ ಮಾಡಿದೆ. ಇದು ಅನೇಕ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ನಿಮ್ಮ ಬಜೆಟ್‍ಗೆ ತಕ್ಕುದಾದ ಸ್ಮಾರ್ಟ್‍ಫೋನ್ ಆಗಿದೆ. ಕಡಿಮೆ ಬೆಲೆಗೆ ಹಲವಾರು ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ತಿಳಿದುಕೊಳ್ಳಿರಿ.

Honor 70 5G ಬಿಡುಗಡೆ ದಿನಾಂಕ

ವರದಿಗಳ ಪ್ರಕಾರ ಇಂಗ್ಲೆಂಡಿನಲ್ಲಿ Honor 70 5G ರಿಲೀಸ್ ಆಗಿದೆ. ಈ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಬಿಡುಗಡೆಯಾಗಿದ್ದು, ಈಗ ಇದನ್ನು ಯುಕೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಕೇವಲ ಒಂದೇ ಒಂದು ಸ್ಟೋರೇಜ್ ರೂಪಾಂತರದ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಗೆ ಇದು ಮುಂಗಡ-ಆರ್ಡರ್‌ಗೆ ಸಹ ಲಭ್ಯವಿದೆ.

ಇದನ್ನೂ ಓದಿ: ಮೊಟೊರೊಲಾದ ಮತ್ತೊಂದು ಅದ್ಭುತ ಸ್ಮಾರ್ಟ್‌ಫೋನ್: ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

Honor 70 5G ಬೆಲೆ

ಈಗಾಗಲೇ ಹೇಳಿದಂತೆ Honor 70 5G ಸ್ಮಾರ್ಟ್‍ಫೋನ್ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ರೂಪಾಂತರಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ರೂಪಾಂತರದ ಬೆಲೆ ಇಂಗ್ಲೆಂಡಿನಲ್ಲಿ ಅಂದಾಜು 45,300 ರೂ.(479.99 GBP) ಆಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕ್ರಿಸ್ಟಲ್ ಸಿಲ್ವರ್, ಎಮರಾಲ್ಡ್ ಗ್ರೀನ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ 3 ಬಣ್ಣಗಳಲ್ಲಿ ನೀವು ಖರೀದಿಸಬಹುದಾಗಿದೆ.

Honor 70 5G ವಿಶೇಷತೆಗಳು

Honor 70 5G ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು 6.67-ಇಂಚಿನ OLED ಡಿಸ್ಪ್ಲೇ, 1080 x 2400 ಪಿಕ್ಸೆಲ್‌ಗಳ ಪೂರ್ಣ HD+ ರೆಸಲ್ಯೂಶನ್, 20:9 ಆಕಾರ ಅನುಪಾತ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ. ಈ ಸ್ಮಾರ್ಟ್‌ಫೋನ್ Qualcomm Snapdragon 778G+ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 8GB RAM ಮತ್ತು 128GB ಸ್ಟೋರೇಜ್ ನೀಡಲಾಗುತ್ತಿದೆ.

ಇದನ್ನೂ ಓದಿ: Jio Double Dhamaka: ರಿಲಯನ್ಸ್ ಜಿಯೋ 5G ಸೇವೆ ಹಾಗೂ ಅಗ್ಗದ 5G ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

54MP ಸೋನಿ IMX800 ಪ್ರಾಥಮಿಕ ಸೆನ್ಸಾರ್, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಈ ಫೋನ್ ಹೊಂದಿದೆ. Honor 70 5Gಯ ​​ಪ್ರಾಥಮಿಕ ಹಿಂಭಾಗದ ಕ್ಯಾಮರಾ 4K ರೆಸಲ್ಯೂಶನ್ ವೀಡಿಯೊ ರೆಕಾರ್ಡಿಂಗ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸಪೋರ್ಟ್ (EIS) ನೊಂದಿಗೆ ಬರುತ್ತದೆ. ಈ ಫೋನ್ 32MP ಮುಂಭಾಗದ ಕ್ಯಾಮೆರಾ ಹೊಂದಿದೆ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಈ ಫೋನ್ 4800mAh ಬ್ಯಾಟರಿ ಮತ್ತು 66W ಸೂಪರ್‌ಚಾರ್ಜ್ ಚಾರ್ಜರ್‌ನೊಂದಿಗೆ ಬರುತ್ತದೆ ಮತ್ತು ಚಾರ್ಜ್ ಮಾಡಲು ಇದು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಶೀಘ್ರವೇ ಈ ಸ್ಮಾರ್ಟ್‍ಫೋನ್‍ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News