ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ SSLV (ಸಣ್ಣ ಉಪಗ್ರಹ ಉಡ್ಡಯನ ವಾಹನ)ವನ್ನು ಉಡಾವಣೆ ಮಾಡುತ್ತಿದೆ.

Written by - Prashobh Devanahalli | Edited by - Manjunath N | Last Updated : Aug 3, 2022, 05:05 PM IST
  • ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್ 7 ರಂದು ಬೆಳಗ್ಗೆ 9:18 ಕ್ಕೆ ಉಡಾವಣೆ ಆಗಲಿದೆ ಎಂದು ತಿಳಿಸಿದೆ.
ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ? title=

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ SSLV (ಸಣ್ಣ ಉಪಗ್ರಹ ಉಡ್ಡಯನ ವಾಹನ)ವನ್ನು ಉಡಾವಣೆ ಮಾಡುತ್ತಿದೆ.

ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್  7 ರಂದು ಬೆಳಗ್ಗೆ 9:18 ಕ್ಕೆ ಉಡಾವಣೆ ಆಗಲಿದೆ ಎಂದು ತಿಳಿಸಿದೆ.

SSLV ವಿಶೇಷತೆ ಏನು? ಭಾರತೀಯ ಅಂತರಿಕ್ಷ ಚರಿತ್ರೆಯಲ್ಲಿ SSLV ಪ್ರಾಮುಖ್ಯತೆ ಏನು?

SSLV ಅಂದರೆ, ಸಣ್ಣ ಉಪಗ್ರಹ ಉಡ್ಡಯನ ವಾಹನ.ಇಸ್ರೋದಲ್ಲಿ ಈ ವರೆಗೆ  PSLV (ಪೋಲಾರ್ ಉಪಗ್ರಹ ಉಡ್ಡಯನ ವಾಹನ) ಹಾಗೂ GSLV (Geosynchronous ಉಪಗ್ರಹ ಉಡ್ಡಯನ ವಾಹನ) ಹೊಂದಿತ್ತು. ಈಗ ಮೂರನೇ ಉಪಗ್ರಹ ಉಡ್ಡಯನ ವಾಹನವಾದ SSLV ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಸೇರ್ಪಡೆಗೊಂಡಿದೆ.No description available.

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!

SSLV ವಿಶೇಷತೆ ಅಂದರೆ, ಸಣ್ಣ ಉಪಗ್ರಹಗಳನ್ನ ಭೂಮಿಯ ಕಡಿಮೆ ಅಂತರದಲ್ಲಿ ಕಕ್ಷಗೆ (LEO: Low earth orbit) ತಲುಪಿಸಲು ಸಹಕಾರಿ ಆಗಲಿದೆ. ಹಾಗಾಗಿ ಈ ಉಪಗ್ರಹ ಉಡ್ಡಯನ ವಾಹನ ಬಳಸಿಕೊಂಡು ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು ತಮಗೆ ಬೇಕಿರುವ ಉಪಗ್ರಹಗಳನ್ನ ISRO ಸಹಾಯದೊಂದಿಗೆ ಉಡಾವಣೆ ಮಾಡಬಹುದು. ಇದರಿಂದ ವಿಶ್ವ ಅಂತರಿಕ್ಷಗಳ ಸ್ಪರ್ಧೆಯಲ್ಲಿ ಭಾರತ ಬಲಿಷ್ಠ ಆಗಲು ಸಹಕಾರಿ ಆಗಲಿದೆ.

SSLV ವಿಶೇಷತೆಗಳೇನು?

SSLV ತೂಕ : 110.ಟನ್

ಉಪಗ್ರಹ ಹೊರುವ ಸಾಮರ್ಥ್ಯ : 500.ಕೆಜಿ

ಎಷ್ಟು ಉಪಗ್ರಹ ಹೊರುವ ಸಾಮರ್ಥ್ಯ: ಒಂದಕ್ಕಿಂತ ಹೆಚ್ಚು

ಬೆಲೆ : ₹30 ಕೋಟಿ |

ಎಸ್ ಎಸ್ ಎಲ್ ವಿ, ಕೇವಲ 110 ಟನ್ ತೂಕವಿದ್ದು, 500 ಕೆಜಿಯ ಉಪಗ್ರಹವನ್ನು ಭೂಮಿಯ ಕಡಿಮೆ ಅಂತರದ ಕಕ್ಷಗೆ ತಲುಪಿಸಬಹುದು. SSLV ರಾಕೆಟ್ ನಲ್ಲಿ ಒಂದಕ್ಕಿಂತ ಹೆಚ್ಚು ಉಪಗ್ರಹಗಳನ್ನ ಏಕಕಾಲದಲ್ಲಿ ಉಡಾವಣೆ ಮಾಡಬಹುದು.

ಕಡಿಮೆ ಖರ್ಚಿನಲ್ಲಿ ಸಾಧನೆ ಮಾಡುವುದಕ್ಕೆ ISRO ಹೆಸರುವಾಸಿ, ಅದೇ ರೀತಿ SSLV ಕೂಡ ಕೇವಲ ₹ 30 ಕೋಟಿ ರೂಪಾಯಿಗೆ ತಯಾರಾಗಳಿದ್ದು, ಕೇವಲ 6 ಜನರಿಂದ ಈ ರಾಕೆಟ್ ಜೋಡಣೆ ಆಗಲಿದೆ.

SSLV ಭಾರತೀಯ ಬಾಹ್ಯಾಕಾಶ ಚರಿತ್ರೆಯಲ್ಲಿ ಪ್ರಮುಖ ಘಟ್ಟ ಆಗಲಿದೆ, ಬೆಳೆಯುತ್ತಿರುವ ಭಾರತದಲ್ಲಿ ಅನೇಕ ಸ್ಟಾರ್ಟ್ ಅಪ್ ಗಳು, ವಿಜ್ಞಾನಿಗಳು ವಿಶ್ವಕ್ಕೆ ಮಾದರಿ ಆಗುತ್ತಿದ್ದಾರೆ. ಇವರಿಗೆ ಉಪಗ್ರಹ ಅಗತ್ಯತೆಯನ್ನ ಅರಿತ ISRO ಕಡಿಮೆ ಖರ್ಚಿನಲ್ಲಿ ಉಪಗ್ರಹ ಉಡಾವಣೆ ಮಾಡುತ್ತಿದೆ.

ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..!

ಮೊದಲ SSLV ಪಯಣದಲ್ಲಿ,  750 ವಿದ್ಯಾರ್ಥಿನಿಯರು 75 ಶಾಲೆಗಳಿಂದ ವಿನ್ಯಾಸ ಮಾಡಿದ "AzaadiSat" ಉಪಗ್ರಹ ಉಡಾವಣೆ ಆಗಲಿದೆ. ಇದರ ಜೊತೆಗೆ ಭೂಮಿ ವೀಕ್ಷಣಾ ಉಪಗ್ರಹ (EOS-2:Earth Observation Sattelites) ಕೂಕಾ ಭೂ ಕಕ್ಷೆ ಸೇರುವ ನಿರೀಕ್ಷೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News