SMS Scrubbing Policy ಜಾರಿ, OTP ಸಿಗದ ಕಾರಣ ಬ್ಯಾಂಕಿಂಗ್, ಇ-ಕಾಮರ್ಸ್ ಗ್ರಾಹಕರ ಪರದಾಟ

SMS Scrubbing Policy - SMS ಸ್ಕ್ರಬ್ಬಿಂಗ್ ಪಾಲಸಿ ಜಾರಿಯಾದ ಬಳಿಕ ಯಾವ ಕಂಪನಿಗಳು ತಮ್ಮ ಪಾಲಸಿಯನ್ನು ಬದಲಾಯಿಸಿಲ್ಲವೋ ಆ ಕಂಪನಿಗಳ ಗ್ರಾಹಕರಿಗೆ OTP ಸಿಗುತ್ತಿಲ್ಲ. ಹೀಗಾಗಿ ಗ್ರಾಹಕರೂ ಕೂಡ ಪರೆಶಾನ್ ಆಗಿದ್ದಾರೆ.  

Written by - Nitin Tabib | Last Updated : Mar 9, 2021, 03:07 PM IST
  • SMS ಸ್ಕ್ರಬ್ಬಿಂಗ್ ಪಾಲಸಿ ಬಿಡುಗಡೆಗೊಳಿಸಿದ TRAI.
  • ಬ್ಯಾಂಕಿಂಗ್, ಇ-ಕಾಮರ್ಸ್ ಗ್ರಾಹಕರಿಗೆ ಸಿಗುತ್ತಿಲ್ಲ OTP
  • ಗ್ರಾಹಕರ ಪರದಾಟಕ್ಕೆ ನೀತಿ ಜಾರಿ ಪ್ರಕ್ರಿಯೆಯೇ ಕಾರಣ ಎಂದು ದೂರಿದ ಕಂಪನಿಗಳು.
SMS Scrubbing Policy ಜಾರಿ, OTP ಸಿಗದ ಕಾರಣ ಬ್ಯಾಂಕಿಂಗ್, ಇ-ಕಾಮರ್ಸ್ ಗ್ರಾಹಕರ ಪರದಾಟ title=
SMS Scrubbing Policy (File Photo)

SMS Scrubbing Policy - SMS ಸ್ಕ್ರಬ್ಬಿಂಗ್ ಸೋಮವಾರ ಬಿಡುಗಡೆಯಾದಾಗಿನಿಂದ ಮೊಬೈಲ್ ವಹಿವಾಟಿನಲ್ಲಿ ಅಡಚಣೆಗಳು ಎದುರಾಗುತ್ತಿವೆ. ಇವುಗಳಲ್ಲಿ ಇ-ಕಾಮರ್ಸ್ ಕಂಪನಿಗಳು ಹಾಗೂ ಬ್ಯಾಂಕ್ ಗಳಿಂದ OTP ಕಳುಹಿಸಲಾಗಿಲ್ಲ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳು ನಡೆದಿಲ್ಲ. ಗ್ರಾಹಕರೂ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಕುರಿತು ದೂರಿ ಟ್ವೀಟ್ ಮಾಡಿದ್ದಾರೆ. ವಾಸ್ತವದಲ್ಲಿ TRAI ಜಾರಿಗೊಳಿಸಿರುವ ನೂತನ ನಿಯಮದ ಕಾರಣ ಈ ಅಡಚಣೆ ಎದುರಾಗಿದೆ. ಇದನ್ನು ಸ್ಕ್ರಬ್ಬಿಂಗ್ ಪಾಲಸಿ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಪ್ರತಿಯೊಂದು SMS ರವಾನೆಯಾಗುವ ಮೊದಲು ವೇರಿಫಿಕೇಶನ್ ಪ್ರೋಸೆಸ್ ಪೂರ್ಣಗೊಳಿಸಬೇಕು. ಸೋಮವಾರದಿಂದ ಈ ಗೈಡ್ ಲೈನ್ಸ್ ಜಾರಿಗೆ ಬಂದಿವೆ. ಈ ಕಾರಣದಿಂದ ವೆರಿಫೈ ಇಲ್ಲದ ಹಾಗೂ ನೋಂದಣಿಯಾಗದ SMSಗಳನ್ನು ಕಳುಹಿಸಲಾಗಿಲ್ಲ.

ಇದನ್ನೂ ಓದಿ-ಹಲೋ..ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿರಬಹುದು.! ಹೀಗೆ ಪತ್ತೆ ಮಾಡಿ..!

OTP ಸಿಗದ ಕಾರಣ ವಹಿವಾಟುಗಳು ನಡೆಯುತ್ತಿಲ್ಲ
ಆದರೆ ಹೊಸ SMS ರೆಗ್ಯೂಲೇಶನ್ಸ್ ಜಾರಿಗ ಬಂದ ಬಳಿಕ ದೊಡ್ಡ ಪ್ರಮಾಣದಲ್ಲಿ OTP ಗಳನ್ನು ಕಳುಹಿಸಲಾಗಿಲ್ಲ. ಈ ಕಾರಣದಿಂದ ಬ್ಯಾಂಕ್ ಗಳಿಗೆ ದೂರುಗಳ ಮಹಾಪೂರವೇ ಹರಿದುಬಂದಿದೆ. ಫಂಡ್ ಟ್ರಾನ್ಸ್ಫರ್ ಮಾಡಬಯಸುವ ಗ್ರಾಹಕರಿಗೆ OTP ಸಿಗದ ಕಾರಣ ಅವರು ಅಡಚಣೆ ಎದುರಿಸಬೇಕಾಗಿ ಬಂದಿದೆ. ಈ ನೀತಿಯನ್ನು ಸರಿಯಾಗಿ ಜಾರಿಗೊಳಿಸದ ಕಾರಣ ಈ ಅಡಚಣೆ ಎದುರಾಗಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ. ಇಂಟರ್ನೆಟ್ ಫ್ರಾಡ್ ನಿಂದ ಬಚಾವಾಗಲು ಈ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು TRAI ಇನ್ನೊಂದೆಡೆ ಸ್ಪಷ್ಟೀಕರಣ ನೀಡಿದೆ. ವಾಸ್ತವದಲ್ಲಿ ಟೆಲಿಮಾರ್ಕೆಟಿಂಗ್ ಕಂಪನಿಗಳು ಗ್ರಾಹಕರಿಗೆ ಕಳುಹಿಸಲಾಗುವ OTPಯನ್ನು ಅನುಮತಿ ಪಡೆಯದೇ ಅವುಗಳನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಗ್ರಾಹಕರು ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗತೊಡಗಿದ್ದವು. ಇದನ್ನು ತಡೆಗಟ್ಟಲು SMS ವೇರಿಫಿಕೇಶನ್ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ, ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದ ಕಾರಣದಿಂದ ವಹಿವಾಟುಗಳಲ್ಲಿ ಅಡಚಣೆಗಳು ಎದುರಾಗುತ್ತಿವೆ.

ಇದನ್ನೂ ಓದಿ-WhatsApp Scam - ಎಚ್ಚರ! WhatsApp ನಲ್ಲಿ ನಿಮಗೂ ಈ ಸಂದೇಶ ಬಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ

ಈ ಕುರಿತು ಇತರೆ ಕಂಪನಿಗಳಿಗೆ ಟೆಲಿಕಾಂ ಕಂಪನಿಗಳು ಈ ಮೊದಲೇ ಸೂಚನೆ ನೀಡಿದ್ದವು
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೆಲಿಕಾಂ ಕಂಪನಿಗಳು, ಈ ಮೊದಲೇ ತಾವು ವಿಭಿನ್ನ ಇ-ಕಾಮರ್ಸ್ ಕಂಪನಿಗಳಿಗೆ ಹಾಗೂ ಬ್ಯಾಂಕ್ ಗಳಿಗೆ ಮಾರ್ಚ್ 7 ರೊಳಗೆ ಕಂಟೆಂಟ್ ಕಂಟಪ್ಲೇಟ್ ನೋಂದಣಿ ಮಾಡಲು ಸೂಚಿಸಿರುವುದಾಗಿ ಹೇಳಿವೆ. ಆದರೆ, ಕಂಪನಿಗಳು ಇದನ್ನು ಪೂರ್ಣಗೊಳಿಸಿಲ್ಲ. ಈ ಕಾರಣದಿಂದ ಅವುಗಳ ಗ್ರಾಹಕರಿಗೆ OTP ಕಳುಹಿಸಲಾಗಲಿಲ್ಲ ಎಂಬ ಸ್ಪಷ್ಟೀಕರಣ ನೀಡಿವೆ. ಅದೇನೇ ಇದ್ದರೂ ಕೂಡ ಪ್ರಸ್ತುತ ಗ್ರಾಹಕರಿಗೆ ಮಾತ್ರ ಪರದಾಡಬೇಕಾದ ಸ್ಥಿತಿ ಬಂದೊದಗಿದೆ ಎಂಬುದು ಮಾತ್ರ ನಿಜ. ಈ ಸಮಸ್ಯೆಗೆ ಯಾವಾಗ ಪರಿಹಾರ ಸಿಗಲಿದೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ-ತಕ್ಷಣವೇ ಬದಲಾಯಿಸಿ ನಿಮ್ಮ WhatsApp ಸೆಟ್ಟಿಂಗ್, ಇಲ್ದಿದ್ರೆ ಖಾತೆ ಹ್ಯಾಕ್ ಆಗುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News