ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಪಿ‌ ತಪ್ಪಿಯೂ ಈ ಕೆಲಸ ಮಾಡಬೇಡಿ, ಜೈಲು ಸೇರಬೇಕಾದೀತು!

Smartphone Mistakes that can land you in Jail: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸುತ್ತಾರೆ. ಇಂದು ನಾವು ನಿಮ್ಮ ಫೋನ್‌ನಲ್ಲಿ ಮಾಡಬಾರದಂತಹ ಕೆಲವು ವಿಷಯಗಳ ಬಗ್ಗೆ ಹೇಳಲಿದ್ದೇವೆ. ಇದರ ಬಗ್ಗೆ ಜಾಗೃತ ವಹಿಸದಿದ್ದರೆ ನೀವು ಜೈಲಿಗೆ ಹೋಗಬೇಕಾಗಬಹುದು.  

Written by - Chetana Devarmani | Last Updated : Jul 9, 2022, 02:07 PM IST
  • ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸುತ್ತಾರೆ
  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಪಿ‌ ತಪ್ಪಿಯೂ ಈ ಕೆಲಸ ಮಾಡಬೇಡಿ
  • ಸ್ಮಾರ್ಟ್‌ಫೋನ್‌ನಲ್ಲಿ ಈ ವಿಷಯವನ್ನು ಹುಡುಕಬೇಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಪಿ‌ ತಪ್ಪಿಯೂ ಈ ಕೆಲಸ ಮಾಡಬೇಡಿ, ಜೈಲು ಸೇರಬೇಕಾದೀತು! title=
ಜೈಲು

Smartphone Mistakes that can land you in Jail: ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಳಸದ ವ್ಯಕ್ತಿಯೇ ಇಲ್ಲ ಎಂಬಂತಾಗಿದೆ. ಶಾಲಾ-ಕಾಲೇಜು, ಕಚೇರಿಯಿಂದ ಹಿಡಿದು ವಿಡಿಯೋ ಗೇಮ್‌ಗಳು, ಚಲನಚಿತ್ರಗಳು ಮತ್ತು ವಿಡಿಯೋ ಕರೆಗಳವರೆಗೆ ಎಲ್ಲವನ್ನೂ ನಾವು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಡುತ್ತೇವೆ. ಆದರೆ ಇಂದು ನಾವುನಿಮಗೆ ಸ್ಮಾರ್ಟ್‌ ಫೋನ್‌ನಲ್ಲಿ ಮಾಡಲೇಬಾರದ ವಿಷಯಗಳ ಬಗ್ಗೆ ಹೇಳಲಿದ್ದೇವೆ. ಅದನ್ನು ನೀವು ಎಂದಿಗೂ ಮಾಡಬಾರದು. ಸ್ಮಾರ್ಟ್‌ಫೋನ್ ಬಳಕೆದಾರರು ತಪ್ಪಿಸಬೇಕಾದ ಕೆಲವು ತಪ್ಪುಗಳು ಇವು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಈ ಕೆಲಸವನ್ನು ಮಾಡಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು. 

ಸ್ಮಾರ್ಟ್‌ಫೋನ್‌ನಲ್ಲಿ ಈ ವಿಷಯವನ್ನು ಹುಡುಕಬೇಡಿ:

ಗೂಗಲ್ ಸರ್ಚ್ ಸೇರಿದಂತೆ ಹಲವು ವಿಷಯಗಳಿಗೆ ಸ್ಮಾರ್ಟ್ ಫೋನ್ ಬಳಸುತ್ತೇವೆ. Google ನಲ್ಲಿ ನೀವು ಎಂದಿಗೂ ಸೂಕ್ಷ್ಮ ವಿಚಾರಗಳನ್ನು ಹುಡುಕಬಾರದು. ಉದಾಹರಣೆಗೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಾಂಬ್‌ ಮತ್ತು ಶಸ್ತ್ರಾಸ್ತ್ರಗಳನ್ನು ಹುಡುಕಬೇಡಿ, ನೀವು ಜೈಲಿಗೆ ಹೋಗಬಹುದು.

ಇದನ್ನೂ ಓದಿ: Earthquake: ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ, ಬೆಚ್ಚಿದ ಜನರು!

ಈ ರೀತಿಯ ಸಂದೇಶಗಳನ್ನು ಕಳುಹಿಸುವುದನ್ನು ತಪ್ಪಿಸಿ:

ಸ್ಮಾರ್ಟ್‌ಫೋನ್ ನಮ್ಮದು ಎಂದು ಭಾವಿಸೋಣ ಮತ್ತು ನಾವು ಅದನ್ನು ಹೇಗೆ ಬೇಕಾದರೂ ಬಳಸಬಹುದು ಎಂದುಕಂಡರೆ ಅದು ತಪ್ಪು. ಆದರೆ ಯಾವುದೇ ಸಂದರ್ಭದಲ್ಲಿ ಇತರರ ಭಾವನೆಗಳನ್ನು ನೋಯಿಸುವ ಹಕ್ಕು ನಮಗಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಆಗಿರುವ ಸಂದೇಶಗಳನ್ನು ನೋಡದೆಯೇ ಹಲವು ಬಾರಿ ಫಾರ್ವರ್ಡ್ ಮಾಡುತ್ತೇವೆ. ಈ ಸಂದೇಶಗಳಲ್ಲಿ ಯಾವುದೇ ಜಾತಿ, ಧರ್ಮ ಅಥವಾ ಯಾರೊಬ್ಬರ ಬಣ್ಣ ಮತ್ತು ಲಿಂಗದ ಬಗ್ಗೆ ತಮಾಷೆ ಮಾಡಿರುವುದು ಕೆಲವೊಮ್ಮೆ ಸಂಭವಿಸುತ್ತದೆ. ಅಂತಹ ನಕಾರಾತ್ಮಕ ಸಂದೇಶಗಳನ್ನು ಕಳುಹಿಸುವ ಮೂಲಕ, ನೀವು ಕಂಬಿ ಎಣಿಸುವಂತಾಗಬಹುದು. ಆದ್ದರಿಂದ ಸ್ಮಾರ್ಟ್‌ಫೋನ್ ಬಳಸುವಾಗ ಜಾಗರೂಕರಾಗಿರಿ.

ಖಾಸಗಿ ಫೋಟೋಗಳು ಮತ್ತು ವಿಡಿಯೋ ಹಂಚಿಕೊಳ್ಳುವಾಗ ಕಾಳಜಿ ವಹಿಸಿ:

ಇದು ನಮ್ಮ ಸ್ಮಾರ್ಟ್‌ಫೋನ್ ಆಗಿದೆ, ಅದರ ಮೂಲಕ ನಾವು ನಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಅನೇಕ ಬಾರಿ ನಮಗೆ ಜನರ ಖಾಸಗಿ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸಲಾಗುತ್ತದೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ಅಥವಾ ವೈಯಕ್ತಿಕವಾಗಿ ಬೇರೊಬ್ಬರ ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳನ್ನು ಸೋರಿಕೆ ಮಾಡಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು. ಯಾರೊಬ್ಬರ ಖಾಸಗಿ ಚಿತ್ರಗಳನ್ನು ಸೋರಿಕೆ ಮಾಡುವುದು ನಿಮ್ಮನ್ನು ಜೈಲಿಗೆ ತಳ್ಳುವ ಅಪರಾಧವಾಗಿದೆ.

ಇದನ್ನೂ ಓದಿ: ಅಮರನಾಥದಲ್ಲಿ ಮೇಘಸ್ಪೋಟ: ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ, ಹೆಲ್ಪ್‌ಲೈನ್‌ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News