Smartphone: ನಿಮ್ಮ ಹಳೆಯ ಫೋನ್ ಬಿಸಾಡಬೇಡಿ ಬದಲಿಗೆ ಸೆಕ್ಯೂರಿಟಿ ಕ್ಯಾಮೆರಾವನ್ನಾಗಿ ಮಾಡಿ..!

Old Smartphone: ನಿಮ್ಮ ಹಳೆಯ ಫೋನ್ ಅನ್ನು ನೀವು ಸೆಕ್ಯೂರಿಟಿ ಕ್ಯಾಮರಾ ಆಗಿ ಪರಿವರ್ತಿಸಿಬಹುದು? ಇದಕ್ಕಾಗಿ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಇದನ್ನು ನೀವು ಮಾಡಬಹುದು. ಅದು ಹೇಗೆ ಎಂದು ತಿಳಿಯಿರಿ.

Written by - Zee Kannada News Desk | Last Updated : Feb 17, 2024, 12:57 PM IST
  • ಸಿಸಿಟಿವಿ ಕ್ಯಾಮೆರಾ ಅಳವಡಿಕೆ ದುಬಾರಿಯಾಗಿದೆ. ಅದಕ್ಕಾಗಿಯೇ ನಿಮ್ಮ ಹಳೆಯ ಫೋನ್ ಅನ್ನು ನೀವು ಸೆಕ್ಯೂರಿಟಿ ಕ್ಯಾಮರಾ ಆಗಿ ಪರಿವರ್ತಿಸಿಬಹುದು.
  • ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಜೊತೆಗೆ ನಿಮ್ಮ ಪ್ರಸ್ತುತ ಸ್ಮಾರ್ಟ್‌ಫೋನ್‌ನಲ್ಲಿ ಸೆಕ್ಯೂರಿಟಿ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
  • ಅಪ್ಲಿಕೇಶನ್ ಅನ್ನು ಒಪನ್‌ ಮಾಡಿ ಅಗತ್ಯ ಅನುಮತಿಗಳೊಂದಿಗೆ Google ಖಾತೆಗೆ ಸೈನ್ ಇನ್ ಮಾಡಬೇಕು.
Smartphone: ನಿಮ್ಮ ಹಳೆಯ ಫೋನ್ ಬಿಸಾಡಬೇಡಿ ಬದಲಿಗೆ ಸೆಕ್ಯೂರಿಟಿ ಕ್ಯಾಮೆರಾವನ್ನಾಗಿ ಮಾಡಿ..! title=

Old Smartphone Tips: ಸದ್ಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಫೋನ್ ಸದ್ದು ಮಾಡುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಫೋನ್ ಬದಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಫೋನ್‌ ತೆಗೆಕೊಂಡಲ್ಲಿ ಹಳೆಯ ಫೋನ್‌ನೊಂದಿಗೆ ಏನು ಮಾಡುತ್ತೀರಿ? ಅದನ್ನು ಬಿಸಾಡಲು ಯೋಚಿಸುತ್ತೀರಿ ಇಲ್ಲ ಅಂದ್ರೆ ಮೂಲೆಯಲ್ಲೇ ಹಾಗೆ ಇಡುತ್ತೀರಿ, ಇದರ ಬದಲಿಗೆ ನಿಮ್ಮ ಫೋನ್‌ ಅನ್ನು ನೀವು ಮರು ಬಳಕೆ ಮಾಡಬಹುದು. ಹೇಗೆ ಎಂದು ಯೋಚಿಸುತ್ತೀದ್ದೀರಾ..! ಹೌದು, ನಿಮ್ಮ ಹಳೆಯ ಫೋನ್ ಅನ್ನು ಸೆಕ್ಯೂರಿಟಿ ಕ್ಯಾಮೆರಾದ ರೀತಿಯಲ್ಲಿ ಬಳಸಬಹುದು. ಹಾಗಾದರೆ ಹಳೆಯ ಸ್ಮಾರ್ಟ್‌ಫೋನ್ ಅನ್ನು ಸೆಕ್ಯುರಿಟಿ ಕ್ಯಾಮೆರಾ ಆಗಿ ಪರಿವರ್ತಿಸುವುದು ಹೇಗೆ ಎಂದು ಇಲ್ಲಿ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಬಳಕೆ ಸಾಕಷ್ಟು ಹೆಚ್ಚಾಗಿದೆ. ಒಂದು ಕಾಲದಲ್ಲಿ ಅಂಗಡಿಗಳಿಗೆ ಸೀಮಿತವಾಗಿತ್ತು, ಆದರೆ ಈಗ ಪ್ರತಿ ಮನೆಗಳಿಗೂ ಅಳವಡಿಸಲಾಗುತ್ತಿದೆ. ಆದರೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ದುಬಾರಿಯಾಗಿದೆ. ಅದಕ್ಕಾಗಿಯೇ ನಿಮ್ಮ ಹಳೆಯ ಫೋನ್ ಅನ್ನು ನೀವು ಸೆಕ್ಯೂರಿಟಿ ಕ್ಯಾಮರಾ ಆಗಿ ಪರಿವರ್ತಿಸಿಬಹುದು? ಇದಕ್ಕಾಗಿ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಇದನ್ನು ನೀವು ಮಾಡಬಹುದು. ಅದು ಹೇಗೆ ಎಂದು ತಿಳಿಯಿರಿ.

ಇದನ್ನೂ ಓದಿ: ವಾಟ್ಸಾಪ್ ವೆಬ್ ಬಳಕೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಹೊಸ ಫೀಚರ್

ಇದಕ್ಕಾಗಿ ನೀವು ಮೊದಲು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಜೊತೆಗೆ ನಿಮ್ಮ ಪ್ರಸ್ತುತ ಸ್ಮಾರ್ಟ್‌ಫೋನ್‌ನಲ್ಲಿ ಸೆಕ್ಯೂರಿಟಿ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಅದರ ನಂತರ, ನೀವು ಅಪ್ಲಿಕೇಶನ್ ಅನ್ನು ಒಪನ್‌ ಮಾಡಿ  ಅಗತ್ಯ ಅನುಮತಿಗಳೊಂದಿಗೆ Google ಖಾತೆಗೆ ಸೈನ್ ಇನ್ ಮಾಡಬೇಕು. ಎರಡೂ ಫೋನ್‌ಗಳಲ್ಲಿ ಸೈನ್ ಇನ್ ಮಾಡಿ. ನಂತರ ಸೆಟ್ಟಿಂಗ್‌ಗಳಿಗೆ ಹೋಗಿ ಅಲ್ಲಿ ತೋರಿಸಲಾದ ಅಧಿಸೂಚನೆ ಆನ್/ಆಫ್ ಮಾಡಿಕೊಳ್ಳಿ, ಕಡಿಮೆ ಬೆಳಕಿನ ಫಿಲ್ಟರ್‌ನಂತಹ ವೈಶಿಷ್ಟ್ಯಗಳನ್ನು ಸಹ ಸಕ್ರಿಯಗೊಳಿಸಬಹುದು.

ಇದನ್ನೂ ಓದಿ: Tech Facts: ಫೋನ್ ನಲ್ಲಿ ನೀವು ಮಾತನಾಡುವ ಎಲ್ಲಾ ಸಂಗತಿಗಳನ್ನು ಗೂಗಲ್ ಸಂಗ್ರಹಿಸುತ್ತೆ ನಿಮಗೆ ಗೊತ್ತಾ!

ನಂತರ, ನೀವು ಸೆಕ್ಯೂರಿಟಿ ಕ್ಯಾಮರಾವಾಗಿ ಬಳಸಲು ಬಯಸುವ ಕ್ಯಾಮರಾವನ್ನು ಅಳವಡಿಸೊಕೊಳ್ಳಿ. ನೀವು ಒಂದಕ್ಕಿಂತ ಹೆಚ್ಚು ಫೋನ್‌ಗಳನ್ನು ಹೊಂದಿದ್ದರೆ, ಅವುಗಳನ್ನು  ಬಹು ದಿಕ್ಕುಗಳಲ್ಲಿ ಅಳವಡಿಸಿಕೊಳ್ಳಬಹುದು. ಅದರ ನಂತರ, ಹಳೆಯ ಫೋನ್‌ನಲ್ಲಿ ಸೆಕ್ಯೂರಿಟಿ ಕ್ಯಾಮೆರಾ ಅಪ್ಲಿಕೇಶನ್ ಅನ್ನು ತೆರೆದು ಒಕೆ ಅನ್ನು ಒತ್ತಿರಿ. ಇದರೊಂದಿಗೆ ನೀವು ಹಳೆಯ ಮತ್ತು ಹೊಸ ಫೋನ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಇದು ನಿಮ್ಮ ಹಳೆಯ ಅನುಪಯುಕ್ತ ಫೋನ್ ಅನ್ನು ಸೆಕ್ಯೂರಿಟಿ ಕ್ಯಾಮೆರಾವನ್ನಾಗಿ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News