Smartphone Ban: ಶೀಘ್ರದಲ್ಲಿಯೇ ಚೈನಾ ಕಂಪನಿಯ ಈ ಮೊಬೈಲ್ ನಿಷೇಧಕ್ಕೆ ಒಳಗಾಗಲಿದೆ! ನಿಮ್ಮ ಬಳಿಯೂ ಇದೆಯಾ?

Smartphone Ban:  ನಿಮ್ಮ ಬಳಿಯೂ ಕೂಡ ಚೈನಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳಿವೆಯಾ? ನೀವೂ ಕೂಡ ಶಾವೊಮಿ ಬ್ರಾಂಡ್ ನ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು, ಎಂದಾದರೆ, ಶೀಘ್ರದಲ್ಲಿಯೇ ನಿಮ್ಮ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆ ಇದೆ. 

Written by - Nitin Tabib | Last Updated : Aug 8, 2022, 09:00 PM IST
  • ಇಂದು ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿವೆ ಮತ್ತು
  • ಮಧ್ಯಮ-ಬಜೆಟ್ ಫೋನ್‌ಗಳನ್ನು ಬಹುತೇಕ ಚೈನೀಸ್ ಬ್ರಾಂಡ್‌ಗಳು ತಯಾರಿಸುತ್ತವೆ.
  • ಇತ್ತೀಚೆಗಷ್ಟೇ ಚೈನೀಸ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು,
  • ಮತ್ತೊಮ್ಮೆ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಮಾತು ಕೇಳಿಬರತೊಡಗಿದೆ,
Smartphone Ban: ಶೀಘ್ರದಲ್ಲಿಯೇ ಚೈನಾ ಕಂಪನಿಯ ಈ ಮೊಬೈಲ್ ನಿಷೇಧಕ್ಕೆ ಒಳಗಾಗಲಿದೆ! ನಿಮ್ಮ ಬಳಿಯೂ ಇದೆಯಾ? title=
Smartphone Ban

Chinese Brand Smartphone Ban in India: ಸ್ಮಾರ್ಟ್ ಫೋನ್ ಗಳ ಈ ಯುಗದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡದೆ ಇರುವವರು ಸಿಗುವುದು ತುಂಬಾ ವಿರಳ. ಇಂದು ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿವೆ ಮತ್ತು ಮಧ್ಯಮ-ಬಜೆಟ್ ಫೋನ್‌ಗಳನ್ನು ಬಹುತೇಕ ಚೈನೀಸ್ ಬ್ರಾಂಡ್‌ಗಳು ತಯಾರಿಸುತ್ತವೆ. ಇತ್ತೀಚೆಗಷ್ಟೇ ಚೈನೀಸ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ಮತ್ತೊಮ್ಮೆ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಮಾತು ಕೇಳಿಬರತೊಡಗಿದೆ, ಈ ಬಾರಿ ಈ ಉತ್ಪನ್ನಗಳು ಸ್ಮಾರ್ಟ್‌ಫೋನ್‌ಗಳಾಗಿವೆ. ಚೀನಾದ ಬ್ರಾಂಡ್‌ಗಳು ಭಾರತದಲ್ಲಿ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಕುರಿತು ಇತ್ತೀಚಿಗೆ ಪ್ರಕಟಗೊಂಡ ಮಾಹಿತಿ ಏನು ತಿಳಿದುಕೊಳ್ಳೋಣ ಬನ್ನಿ.

ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ನಿಷೇಧ!
ವರದಿಗಳ ಪ್ರಕಾರ, ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಭಾರತದಲ್ಲಿ ತನ್ನ ಅಗ್ಗದ ಫೋನ್‌ಗಳ ಮಾರಾಟ ಮಾಡುವುದನ್ನು ತಡೆಯಲು ಭಾರತ ಯತ್ನಿಸುತ್ತಿದೆ. ಭಾರತವು ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಫೋನ್‌ಗಳನ್ನು ನಿಷೇಧಿಸಿದರೆ, ಅದು Xiaomi ನಂತಹ ಬ್ರಾಂಡ್‌ಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. 12 ಸಾವಿರ ರೂಪಾಯಿಗಳಿಗಿಂತ ಕಡಿಮೆ (ಸುಮಾರು $ 150) ಬೆಲೆಗೆ ಮಾರಾಟವಾಗುವ ಸ್ಮಾರ್ಟ್ ಫೋನ್ ಗಳ ಕುರಿತು ನಾವು ಇಲ್ಲಿ ಮಾತನಾಡುತ್ತಿದ್ದೇವೆ. 

ಇದನ್ನೂ ಓದಿ-GPay ಬಳಸುವಾಗ ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್​ಬ್ಯಾಕ್​ ಪಡೆಯಬಹುದು!

ಸ್ಮಾರ್ಟ್‌ಫೋನ್‌ಗಳನ್ನು ಏಕೆ ನಿಷೇಧಿಸಲಾಗುತ್ತಿದೆ?
ಈಗ ಭಾರತ ಕೈಗೊಳ್ಳುತ್ತಿರುವ ನಿರ್ಧಾರದ ಹಿಂದಿನ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಚೈನೀಸ್ ಬ್ರ್ಯಾಂಡ್ ಗಳ ಮುಂದೆ ನಮ್ಮ ದೇಶದ ಸ್ಮಾರ್ಟ್ ಫೋನ್ ಉದ್ಯಮ ತತ್ತರಿಸಿಹೋಗಿದೆ, ಭಾರತೀಯ ಸ್ಮಾರ್ಟ್ ಫೋನ್ ಬ್ರಾಂಡ್ ಗಳಿಗೆ  ಶಕ್ತಿಯನ್ನು ತುಂಬಲು ಈ ಹೆಜ್ಜೆ ಇಡಲಾಗುತ್ತಿದೆ. ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತವು ತನ್ನ ಲೋವರ್ ಸೆಗ್ಮೆಂಟ್ ನಿಂದ ಚೀನಾದ ಬ್ರ್ಯಾಂಡ್‌ಗಳನ್ನು ಹೊರಹಾಕಲು ಯತ್ನಿಸುತ್ತಿದೆ.

ಇದನ್ನೂ ಓದಿ-iPhone 14 ಕ್ಕೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್, iPhone 13 ಕ್ಕಿಂತ ಬೆಲೆ ಕಡಿಮೆ ಇರಲಿದೆಯೇ?

ಯಾವ ಬ್ರಾಂಡ್‌ಗಳ ಫೋನ್ ಗಳು ನಿಷೇಧಕ್ಕೆ ಒಳಗಾಗಬಹುದು?
ಒಂದು ವೇಳೆ ಎಲ್ಲವು ಅಂದುಕೊಂಡಂತೆ ನಡೆದರೆ ಮತ್ತು ಭಾರತ ಇಂತಹದ್ದೊಂದು ನಿದ್ರ್ಧಾರವನ್ನು ಕೈಗೊಂಡರೆ,  ಅದು Xiaomi, Vivo, Oppo ಮತ್ತು Realme ನಂತಹ  ಬ್ರಾಂಡ್‌ಗಳ ಸ್ಮಾರ್ಟ್ ಫೋನ್‌ಗಳನ್ನು ಹೊಂದಿರುವ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನೀವು ಆಪಲ್ ಅಥವಾ ಸ್ಯಾಮ್‌ಸಂಗ್ ಬಳಕೆದಾರರಾಗಿದ್ದರೆ, ಭಾರತದ ಈ ನಿರ್ಧಾರ ಅಂದರೆ ಸ್ಮಾರ್ಟ್‌ಫೋನ್ ನಿಷೇಧ ನಿಮ್ಮ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News