Google Pay ನಿಂದ ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡುವ ಸಿಂಪಲ್‌ ಟ್ರಿಕ್‌ ಇಲ್ಲಿದೆ ನೋಡಿ

Google Pay transaction history: ಗೂಗಲ್‌ ಪೇ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಸುರಕ್ಷಿತ ಮತ್ತು ಸುಲಭವಾದ ರೀತಿಯಲ್ಲಿ ಹಣ ಕಳಿಸಬಹುದು.

Written by - Chetana Devarmani | Last Updated : Aug 11, 2024, 03:28 PM IST
  • Google Pay ನಿಂದ ಟ್ರಾನ್ಸಾಕ್ಷನ್‌ ಹಿಸ್ಟರಿ
  • ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡುವುದು ಹೇಗೆ?
  • ಗೂಗಲ್‌ ಪೇ ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡುವ ವಿಧಾನ
Google Pay ನಿಂದ ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡುವ ಸಿಂಪಲ್‌ ಟ್ರಿಕ್‌ ಇಲ್ಲಿದೆ ನೋಡಿ  title=

Google Pay transaction history: ಭಾರತದಲ್ಲಿ ಅನೇಕ ಜನರು Google Pay ಬಳಸುತ್ತಾರೆ. ಇದರೊಂದಿಗೆ ನೀವು ಸುಲಭವಾಗಿ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಆದರೆ ಇದು ನಿಮ್ಮ ಟ್ರಾನ್ಸಾಕ್ಷನ್‌ ಹಿಸ್ಟರಿ ಗಳನ್ನು ಇಡುತ್ತದೆ. ಇದರಿಂದಾಗಿ ಕೆಲವು ಜನರು ಸಮಸ್ಯೆಗಳನ್ನು ಎದುರಿಸಬಹುದು. ಹಲವರಿಗೆ ಇದನ್ನು ಡಿಲೀಟ್‌ ಮಾಲು ತಿಳಿದಿಲ್ಲ. ನೀವು ಈ ದಾಖಲೆಯನ್ನು ಡಿಲೀಟ್‌ ಮಾಡಲು ಇರುವ ವಿಧಾನವನ್ನು ಇಂದು ತಿಳಯೋಣ.

Google Pay ಒಂದು ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್ ಆಗಿದೆ. ಇದನ್ನು ಕೋಟಿಗಟ್ಟಲೆ ಜನರು ಬಳಸುತ್ತಾರೆ. ಇದು ತುಂಬಾ ಉಪಯುಕ್ತವಾದ ಅಪ್ಲಿಕೇಶನ್ ಆಗಿದೆ. ಈ ಆಪ್ ಸಹಾಯದಿಂದ ಯುಪಿಐ ಮೂಲಕ ಹಣದ ಆನ್ ಲೈನ್ ವಹಿವಾಟು ನಡೆಸಬಹುದಾಗಿದೆ. ಈ ಆ್ಯಪ್‌ನ ಸಹಾಯದಿಂದ ಬಳಕೆದಾರರು ತಮ್ಮ ಬಳಿ ನಗದು ಇಲ್ಲದಿದ್ದಲ್ಲಿ ಆನ್‌ಲೈನ್‌‌ ಮೂಲಕ ಹಣವನ್ನು ವರ್ಗಾಯಿಸಬಹುದು. ಇದರಿಂದಾಗಿ ಬ್ಯಾಂಕ್ ಅಥವಾ ಎಟಿಎಂಗೆ ಹೋಗಬೇಕಾಗಿಲ್ಲ.

Google Pay ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಸುರಕ್ಷಿತ ಮತ್ತು ಸುಲಭವಾದ ರೀತಿಯಲ್ಲಿ ಹಣ ಕಳಿಸಬಹುದು. Google Pay ನಿಮ್ಮ ಪ್ರತಿಯೊಂದು ವಹಿವಾಟನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ: LPG Cylinder: ಗ್ಯಾಸ್‌ ಸಿಲಿಂಡರ್‌ ಬೆಲೆ ತಲೆನೋವಾಗಿ ಕಾಡಿದೆಯಾ..? ಹೀಗೆ ಮಾಡಿ.. ಜಸ್ಟ್‌ 450 ರೂ. ಗೆ ಸಿಲಿಂಡರ್‌ ಪಡೆದುಕೊಳ್ಳಿ..!

ಇದರ ಪ್ರಯೋಜನಗಳು ಕೇವಲ ಆನ್‌ಲೈನ್ ಪೇಮೆಂಟ್‌ಗೆ ಸೀಮಿತವಾಗಿಲ್ಲ. ಈ ಅಪ್ಲಿಕೇಶನ್‌ನ ಸಹಾಯದಿಂದ ನೀವು ಮೊಬೈಲ್ ರೀಚಾರ್ಜ್, ವಿದ್ಯುತ್ ಬಿಲ್, ಡಿಟಿಎಚ್ ಕೇಬಲ್ ರೀಚಾರ್ಜ್ ಹೀಗೆ ಹಲವಾರು ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು. ಈ ಅಪ್ಲಿಕೇಶನ್ ಮೂಲಕ ವಹಿವಾಟು ಮಾಡಿದಾಗ ಪೇಮೆಂಟ್‌ ಹಿಸ್ಟರಿ ಉಳಿಯುತ್ತದೆ. ಇದರಿಂದ ಕೆಲವರಿಗೆ ಸಮಸ್ಯೆ ಉಂಟಾಗಬಹುದು. 

Google Pay ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡಲು, ನಿಮ್ಮ ಫೋನ್‌ನಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ. ನಿಮ್ಮ ಪ್ರೊಫೈಲ್‌ಗೆ ಹೋಗಿ. ಇಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಸೆಟ್ಟಿಂಗ್‌ಗಳು" ಮೇಲೆ ಟ್ಯಾಪ್ ಮಾಡಿ, ನಂತರ "ಗೌಪ್ಯತೆ ಮತ್ತು ಭದ್ರತೆ" ಆಯ್ಕೆಯನ್ನು ಆರಿಸಿ. "ಡೇಟಾ ಮತ್ತು ವೈಯಕ್ತೀಕರಣ" ಮತ್ತು ನಂತರ "Google ಖಾತೆ" ಮೇಲೆ ಕ್ಲಿಕ್ ಮಾಡಿ. ಇದರ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಭದ್ರತಾ ಪಿನ್ ಅನ್ನು ಇಲ್ಲಿ ನಮೂದಿಸಿ.

ಇಲ್ಲಿ ನೀವು ನಿಮ್ಮ ಎಲ್ಲಾ ಟ್ರಾನ್ಸಾಕ್ಷನ್‌ ಹಿಸ್ಟರಿ ನೋಡುತ್ತೀರಿ. ಟ್ರಾನ್ಸಾಕ್ಷನ್‌ ಹಿಸ್ಟರಿ ಡಿಲೀಟ್‌ ಮಾಡಲು ಪಕ್ಕದಲ್ಲಿರುವ ಕ್ರಾಸ್ ಬಟನ್ ಅನ್ನು ಟ್ಯಾಪ್ ಮಾಡಿ. ಎಲ್ಲಾ ಟ್ರಾನ್ಸಾಕ್ಷನ್‌ ಹಿಸ್ಟರಿ ಒಂದೇ ಬಾರಿಗೆ ಅಳಿಸಲು "ಡಿಲೀಟ್" ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಎಷ್ಟು ಸಮಯದವರೆಗೆ ಟ್ರಾನ್ಸಾಕ್ಷನ್‌ ‌ಡಿಲೀಟ್‌ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬಹುದು.  

ಇದನ್ನೂ ಓದಿ:  ಗ್ರಾಹಕರಿಗಾಗಿ '4' ಪೈಸಾ ವಸೂಲ್ ಯೋಜನೆಗಳನ್ನು ಪರಿಚಯಿಸಿದ ಮುಖೇಶ್ ಅಂಬಾನಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News