ದೆಹಲಿ : ಸ್ಯಾಮ್ಸಂಗ್ ಶೀಘ್ರದಲ್ಲೇ Samsung Galaxy M02 ಎಂಬ ಸ್ಮಾರ್ಟ್ ಫೋನ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಗೆಲಾಕ್ಸಿ ಎಂ ಸೀರಿಸ್ ನಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಈ ಸ್ಮಾರ್ಟ್ ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆ ಪ್ರವೇಶ ಮಾಡಲಿದೆ ಎಂದು ಹೇಳಲಾಗಿದೆ. Samsung Galaxy M02 ಏನೆಲ್ಲಾ ಫೀಚರ್ ಇರುತ್ತವೆ ಅನ್ನೋದು ಇಲ್ಲಿಯ ತನಕ ದೃಢಪಟ್ಟಿಲ್ಲ. ಆದರೆ, ಈ ಸ್ಮಾರ್ಟ್ ಫೋನ್ ಬಗ್ಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಕುತೂಹಲ ಸೃಷ್ಟಿಯಾಗಿದೆ.
ಫೋನ್ ಬೆಲೆ 7ಸಾವಿರಕ್ಕಿಂತಲೂ ಕಡಿಮೆ :
Samsung Galaxy M02 ಫೋನ್ ಈಗ ಸುದ್ದಿಯಲ್ಲಿರೋದು ಅದರ ಮೌಲ್ಯದ ಬಗ್ಗೆ. ಈ ಫೋನಿನ ಬೆಲೆ 7 ಸಾವಿರಕ್ಕಿಂತಲೂ ಕಡಿಮೆ ಇರಬಹುದೆಂದು ಊಹಿಸಲಾಗಿದೆ. ಸ್ಯಾಮ್ಸಂಗ್ ಈ ಮೊದಲು ಕೂಡಾ ಲೋ ಬಜೆಟ್ ಪೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. Galaxy M02s ಹೆಸರಿನಲ್ಲಿ ಫೋನ್ (Phone) ಮಾರುಕಟ್ಟೆಗೆ ಬಂದಿತ್ತು. ಅದರ ಬೆಲೆ 8,999 ರೂಪಾಯಿ ನಿಗದಿಯಾಗಿತ್ತು. ಈಗ ಮತ್ತೊಂದು ಲೋ ಬಜೆಟ್ ಫೋನನ್ನು ಹೊರತರುತ್ತಿದೆ ಸ್ಯಾಮ್ಸಂಗ್. Samsung Galaxy M02 ಫೋನಿನಲ್ಲಿ 6.5” ಇನ್ಫಿನಿಟಿ – ವಿ ಡಿಸ್ ಪ್ಲೆ ಮತ್ತು ಡುವೆಲ್ ರಿಯರ್ ಕೆಮೆರಾ ಕೂಡಾ ಇದೆ.
ಇದನ್ನೂಓದಿ : Data Leak: Telegram Bot App 50 ಕೋಟಿ ಬಳಕೆದಾರರ ದತ್ತಾಂಶ ಸೋರಿಕೆ, ನಿಮ್ಮ ಮಾಹಿತಿ ಎಷ್ಟು ಸುರಕ್ಷಿತ?
10 ಸಾವಿರಕ್ಕಿಂತ ಕಡಿಮೆ ಬೆಲೆಯ ಈ ಹ್ಯಾಂಡ್‌ಸೆಟ್‌ನ ಮಾಡೆಲ್ ನಂಬರನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ (Website) ನೋಡಬಹುದಾಗಿದೆ. ಈ ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ (Market) ಬರಲಿದೆ ಎನ್ನಲಾಗಿದೆ. ಇದರ ಮಾಡೆಲ್ ನಂಬರ್ SM-M022G / DS..
Geekbench ಲಿಸ್ಟಿಂಗ್ ಪ್ರಕಾರ, ಗ್ಯಾಲಕ್ಸಿ ಎಂ 02 ಫೋನಿನಲ್ಲಿ ಆಂಡ್ರಾಯ್ಡ್ 10, 3 ಜಿಬಿ RAM ಇರಬಹುದು. 1.8 GHz ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿರಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ M02ನಲ್ಲಿ ಸ್ನ್ಯಾಪ್‌ಡ್ರಾಗನ್ 450 ಚಿಪ್ ಸೆಟ್ ಇರಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02ಎಸ್ ನಲ್ಲೂ ಇದೇ ಚಿಪ್ ಇತ್ತು.
Samsung Galaxy M02s ಫೋನಿನಲ್ಲಿ 6.5 ಇಂಚು ಹೆಚ್ ಡಿ + ಇನ್ಫಿನಿಟಿ ವಿ ಡಿಸ್ ಪ್ಲೇ ಕಾಲ್ಕಾಂ ಸ್ನಾಪ್ ಡ್ರ್ಯಾಗನ್ 450 ಚಿಪ್ ಸೆಟ್ ಇತ್ತು. ಅಂಡ್ರಾಯಿಡ್ 10 ಕೂಡಾ ಇತ್ತು. Galaxy M02s ಸೆಟ್ ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸಪೋರ್ಟ್ (13 ಎಂಪಿ + 2 ಎಂಪಿ + 2 ಎಂಪಿ) ಹೊಂದಿದೆ. ಸೆಲ್ಪೀಗಾಗಿ ತುಂಬಾ ಒಳ್ಳೆಯ ಫೋನ್ ಎಂದು ಹೇಳಲಾಗಿದೆ.
ಇದನ್ನೂಓದಿ : ಶಾಕಿಂಗ್ ನ್ಯೂಸ್..! 500 ಮಿಲಿಯನ್ Facebook ಬಳಕೆದಾರರ ಪೋನ್ ನಂಬರ್ ಮಾರಾಟಕ್ಕೆ
M02 ಮತ್ತು M02s ಹ್ಯಾಂಡ್ ಸೆಟ್ ಗಳಲ್ಲಿ ವ್ಯತ್ಯಾಸ ಏನು..?
Samsung Galaxy M02 ಮತ್ತು M02s ಹಾಗೆ ನೋಡಿದರೆ ಯಾವುದೇ ಅಂತರ ಇರುವುದಿಲ್ಲ. ಆದರೆ ರಿಯರ್ ಕೆಮೆರಾ (Camera) ವಿಚಾರದಲ್ಲಿ M02 ಮತ್ತು M02s ಸೆಟ್ ಗಳಲ್ಲಿ ವ್ಯತ್ಯಾಸ ಇದೆ. ಹಾಗಾಗಿ ದರದಲ್ಲೂ ವ್ಯತ್ಯಾಸ ಇದೆ. ಡಿಸ್ ಪ್ಲೆ, ಪ್ರೊಸೆಸರ್, ಬ್ಯಾಟರಿ ವಿಚಾರದಲ್ಲಿ ಎರಡೂ ಫೋನಿನ ನಡುವೆ ಯಾವುದೇ ವ್ಯತ್ಯಾಸ ಇಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.