ಬೆಂಗಳೂರು: ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ಮೇ 25 ರಿಂದ ಮೇ 27 ರವರೆಗೆ 'ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್' (Amazon Smartphone Upgrade Days) ಸೆಲ್ ಅನ್ನು ಆಯೋಜಿಸಲಾಗಿದೆ. ಈ ಸೇಲ್ ಅಡಿಯಲ್ಲಿ, ಬಳಕೆದಾರರು ಅನೇಕ ಸ್ಮಾರ್ಟ್‌ಫೋನ್ ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.
ಈ ಸೇಲ್ ಅಡಿಯಲ್ಲಿ ಉತ್ತಮ ವ್ಯವಹಾರದ ಬಗ್ಗೆ ಹೇಳುವುದಾದರೆ, 108 ಎಂಪಿ ಕ್ಯಾಮೆರಾ ಸ್ಮಾರ್ಟ್ಫೋನ್ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ (Redmi Note 10 Pro Max) ಅನ್ನು ಬಂಪರ್ ರಿಯಾಯಿತಿ ಮತ್ತು ಆಕರ್ಷಕ ಕೊಡುಗೆಗಳಲ್ಲಿ ಖರೀದಿಸಲು ನಿಮಗೆ ಅವಕಾಶ ಸಿಗುತ್ತಿದೆ. ಈ ಫೋನ್‌ನಲ್ಲಿ ಸಿಗುವ ಕೊಡುಗೆಗಳ ಬಗ್ಗೆ ವಿವರವಾಗಿ ತಿಳಿಯೋಣ…
ಇದನ್ನೂ ಓದಿ- Amazon : ಭಾರತದಲ್ಲಿ ಸ್ಥಗಿತಗೊಂಡಿದೆ 'Prime Now' ಸೇವೆ; ಗ್ರಾಹಕರ ಮುಂದಿರುವ ಆಯ್ಕೆ ತಿಳಿಯಿರಿ
ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್‌ನಲ್ಲಿ ಬಂಪರ್ ರಿಯಾಯಿತಿ (Bumper discount on Redmi Note 10 Pro Max) :
ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ ಅಡಿಯಲ್ಲಿ ನೀವು 66GB+64GB ಮಾದರಿಯನ್ನು 18,999 ರೂ.ಗಳಿಗೆ ಮತ್ತು 6 ಜಿಬಿ + 128 ಜಿಬಿ ಸ್ಟೋರೇಜ್ ಮಾದರಿಯನ್ನು 19,999 ರೂಗಳಿಗೆ ಖರೀದಿಸಬಹುದು. 8 ಜಿಬಿ + 128 ಜಿಬಿ ಶೇಖರಣಾ ಮಾದರಿ 21,999 ರೂ.ಗಳಿಗೆ ಲಭ್ಯವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ಬಜಾಜ್ ಫಿನ್‌ಸರ್ವ್ ಕಾರ್ಡ್ ಮೂಲಕ ಖರೀದಿಸುವ ಬಳಕೆದಾರರು 6 ತಿಂಗಳ ಕಾಲ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಪಡೆಯುತ್ತಾರೆ. ಅದರ ನಂತರ 6 ಜಿಬಿ ಮಾದರಿಗೆ ತಿಂಗಳಿಗೆ 3,333 ರೂ.ಗಳ ಇಎಂಐ ಪಾವತಿಸಬೇಕಾಗುವುದು.
ಅದೇ ಸಮಯದಲ್ಲಿ, ಬಳಕೆದಾರರು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit Card) ಮತ್ತು ಡೆಬಿಟ್ ಕಾರ್ಡ್‌ನಲ್ಲಿ ಶೇಕಡಾ 10 ರಷ್ಟು ಅಂದರೆ 1,000 ರೂ. ಇನ್ಸ್ಟಾಂಟ್ ಡಿಸ್ಕೌಂಟ್ ಪಡೆಯಬಹುದು.
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ನ ಉತ್ತಮ ವೈಶಿಷ್ಟ್ಯಗಳು:
ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್‌ನಲ್ಲಿ ವಿಶೇಷ ಲಕ್ಷಣವಾಗಿ, 108 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಬಳಕೆದಾರರಿಗೆ ಉತ್ತಮ ಛಾಯಾಗ್ರಹಣದ ಅನುಭವವನ್ನು ನೀಡುತ್ತದೆ. ಪವರ್ ಬ್ಯಾಕಪ್‌ಗಾಗಿ, ಇದು 5020mAh ನ ಬಲವಾದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಫೋನ್ 6.67 ಇಂಚಿನ ಪೂರ್ಣ ಎಚ್ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು 120 Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಪ್ರೀಮಿಯಂ ಲುಕ್ ಹೊಂದಿರುವ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732 ಜಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸೆಲ್ಫಿಗಾಗಿ 16 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.