Public Charging Scam: ನೀವೂ ನಿಮ್ಮ ಫೋನ್ ಅನ್ನು ಎಲ್ಲೆಂದರಲ್ಲಿ ಚಾರ್ಜಿಂಗ್ ಹಾಕ್ತೀರಾ? ಹುಷಾರ್

Public Charging Scam: ನೀವೂ ಕೂಡ ಎಲ್ಲೆಂದರಲ್ಲಿ ನಿಮ್ಮ ಫೋನ್ ಚಾರ್ಜ್ ಹಾಕ್ತೀರಾ?  ಹಾಗಿದ್ದರೆ ಎಚ್ಚರ, ಎಚ್ಚರ! ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳ ಮೂಲಕ ಸ್ಕ್ಯಾಮ್‌ಸ್ಟರ್‌ಗಳು ನಿಮ್ಮ ಫೋನ್‌ ಹ್ಯಾಕ್ ಮಾಡಬಹುದು. 

Written by - Yashaswini V | Last Updated : Aug 8, 2023, 10:40 AM IST
  • ಜ್ಯೂಸ್ ಜಾಕಿಂಗ್ ಅನ್ನು ಪೋರ್ಟ್ ಜಾಕಿಂಗ್ ಎಂತಲೂ ಕರೆಯಲಾಗುತ್ತದೆ.
  • ಆಘಾತಕಾರಿ ವಿಷಯವೆಂದರೆ, ಇದು ಸೆಲ್ ಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ.
  • ಬದಲಿಗೆ, ಯುಎಸ್‌ಬಿ ಪ್ಲಗ್ ಮೂಲಕ ಚಾರ್ಜ್ ಮಾಡಬಹುದಾದ ಯಾವುದೇ ಸಾಧನದ ಮೇಲೆ ಇದು ಸುಲಭವಾಗಿ ದಾಳಿ ಮಾಡಬಲ್ಲದು.
Public Charging Scam: ನೀವೂ ನಿಮ್ಮ ಫೋನ್ ಅನ್ನು ಎಲ್ಲೆಂದರಲ್ಲಿ ಚಾರ್ಜಿಂಗ್ ಹಾಕ್ತೀರಾ? ಹುಷಾರ್  title=
Public Charging Scam

Public Charging Scam: ಸ್ಮಾರ್ಟ್‌ಫೋನ್‌ನಲ್ಲಿ ಚಾರ್ಜ್ ಕಡಿಮೆ ಆದರೆ ಸಾಕು ಕೆಲವರು ಆತಂಕಗೊಳ್ಳುತ್ತಾರೆ. ಇದಕ್ಕಾಗಿ, ಫೋನ್ ಬ್ಯಾಟರಿ ಕಡಿಮೆ ಆದಂತೆ ಎಲ್ಲೆಂದರಲ್ಲಿ ತಮ್ಮ ಫೋನ್ ಅನ್ನು ಚಾರ್ಜಿಂಗ್ ಹಾಕುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಿ. ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ನಿಮ್ಮ ಫೋನ್ ಚಾರ್ಜ್ ಮಾಡುವ ಮುನ್ನ ಎಚ್ಚರ, ಎಚ್ಚರ! 

ಎಲ್ಲಾದರೂ ಪ್ರಯಾಣಿಸುವಾಗ ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಇಲ್ಲವೇ, ಆಸ್ಪತ್ರೆಯಲ್ಲಿರುವಾಗ ಆಸ್ಪತ್ರೆಯಲ್ಲಿ ಎಲ್ಲರೂ ಬಳಸುವ ಸಾರ್ವಜನಿಕ ಪೋರ್ಟ್‌ಗಳಲ್ಲಿ ಫೋನ್ ಚಾರ್ಜಿಂಗ್ ಮಾಡಲು ಅವಕಾಶವಿರುತ್ತದೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಇದರ ಅಗತ್ಯತೆಯನ್ನು ಖಂಡಿತವಾಗಿಯೂ ತಳ್ಳಿಹಾಕುವಂತಿಲ್ಲ. ಆದರೆ, ಸಾರ್ವಜನಿಕ ಪೋರ್ಟ್‌ಗಳಲ್ಲಿ ಫೋನ್ ಚಾರ್ಜ್ ಹಾಕದಂತೆ ತಂತ್ರಜ್ಞರು ಸಲಹೆ ನೀಡುತ್ತಾರೆ. 

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳ ಮೂಲಕ ವಂಚಕರು ಫೋನ್ ಹ್ಯಾಕ್ ಮಾಡುವ ಹಗರಣಗಳು ಮುನ್ನಲೆಗೆ ಬರುತ್ತಿವೆ. ಇದನ್ನು  'ಜ್ಯೂಸ್ ಜಾಕಿಂಗ್' ಹಗರಣ ಎಂತಲೂ ಕರೆಯಲಾಗುತ್ತದೆ. ಏನಿದು  'ಜ್ಯೂಸ್ ಜಾಕಿಂಗ್' ಹಗರಣ? ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂಬುದನ್ನೂ ತಿಳಿಯುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ... 

ಏನಿದು 'ಜ್ಯೂಸ್ ಜಾಕಿಂಗ್' ಹಗರಣ? 
'ಜ್ಯೂಸ್ ಜಾಕಿಂಗ್' ಎನ್ನುವುದು ಒಂದು ರೀತಿಯ ಸೈಬರ್ ದಾಳಿಯಾಗಿದ್ದು, ವಂಚಕರು ಇದರಲ್ಲಿ ಕೊಂಪ್ರೊಮೈಸ್ಡ್ ಯುನಿವರ್ಸಲ್ ಸೀರಿಯಲ್ ಬಸ್ (USB)  ಚಾರ್ಜಿಂಗ್ ಸ್ಟೇಷನ್ ಮಾಲ್‌ವೇರ್ ಅನ್ನು ಬಳಸುತ್ತಾರೆ. ಈ ಮಾಲ್‌ವೇರ್ ಸಹಾಯದಿಂದ ಸಂಪರ್ಕಿತ ಸಾಧನದ ಮಾಹಿತಿಯನ್ನು ಅದರಲ್ಲೂ ವೈಯಕ್ತಿಕ ಮಾಹಿತಿಯನ್ನು ಕಳುವು ಮಾಡುತ್ತದೆ. 

ಇದನ್ನೂ ಓದಿ- ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುತ್ತಾ? ಇದು ಎಷ್ಟು ಅಪಾಯಕಾರಿ ಗೊತ್ತಾ?

ಯುಎಸ್ ಆರ್ಮಿ ಸೈಬರ್ ಕಮಾಂಡರ್ ನಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ,  ಜ್ಯೂಸ್ ಜಾಕಿಂಗ್ ಅನ್ನು ಪೋರ್ಟ್ ಜಾಕಿಂಗ್ ಎಂತಲೂ ಕರೆಯಲಾಗುತ್ತದೆ. ಆಘಾತಕಾರಿ ವಿಷಯವೆಂದರೆ, ಇದು ಸೆಲ್ ಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಯುಎಸ್‌ಬಿ ಪ್ಲಗ್ ಮೂಲಕ ಚಾರ್ಜ್ ಮಾಡಬಹುದಾದ ಯಾವುದೇ ಸಾಧನದ ಮೇಲೆ ಇದು ಸುಲಭವಾಗಿ ದಾಳಿ ಮಾಡಬಲ್ಲದು. ಹಾಗಾಗಿ, ಸ್ಮಾರ್ಟ್‌ಫೋನ್ ಬಳಕೆದಾರರು ನಿಮ್ಮ ಫೋನ್ ಅನ್ನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಹಾಕುವ ಮೊದಲು ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.  ಒಂದೊಮ್ಮೆ ಈಗಾಗಲೇ ನೀವು ನಿಮ್ಮ ಫೋನ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾದರೂ ಚಾರ್ಜ್ ಮಾಡಿದ್ದರೆ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂದು ಮೊದಲು ಪರಿಶೀಲಿಸುವುದು ಕೂಡ ಅಗತ್ಯವಾಗಿದೆ. 

ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬುದನ್ನೂ ಸೂಚಿಸುವ ಚಿಹ್ನೆಗಳಿವು: 
ಒಂದೊಮ್ಮೆ ನಿಮ್ಮ ಫೋನ್ ಹ್ಯಾಕ್ ಆಗಿದ್ದರೆ ನಿಮ್ಮ ಫೋನ್ ನಲ್ಲಿ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಕೆಲವು ಸಾಮಾನ್ಯ ಚಿಹ್ನೆಗಳೆಂದರೆ... 

* ಫೋನ್ ಕಾರ್ಯಕ್ಷಮತೆ: 
ನಿಮ್ಮ ಫೋನ್ ದಿಢೀರ್  ತಾನಾಗಿಯೇ ಆನ್ ಅಥವಾ ಆಫ್ ಆಗುತ್ತಿದ್ದರೆ, ಇಲ್ಲವೇ ಎಂದೂ ಇಲ್ಲದ್ದು ಇತ್ತೀಚೆಗೆ ಇದ್ದಕ್ಕಿದ್ದಂತೆ ತುಂಬಾ ಸ್ಲೋ ಆಗುತ್ತಿದ್ದರೆ ಇದು ನಿಮ್ಮ ಫೋನ್ ಹ್ಯಾಕ್ ಆಗಿರುವ ಸಂಕೇತವಾಗಿದೆ.  

* ಮಿಸ್ಟರಿ ಅಪ್ಲಿಕೇಶನ್‌ಗಳು: 
ಒಂದೊಮ್ಮೆ ನಿಮ್ಮ ಫೋನ್‌ನಲ್ಲಿ ನೀವು ಡೌನ್‌ಲೋಡ್ ಮಾಡದಿರುವ ಅಪ್ಲಿಕೇಶನ್‌ಗಳು, ಪಠ್ಯಗಳು ಮತ್ತು ನೀವು ಕಳುಹಿಸದ ಇಮೇಲ್‌ಗಳನ್ನು ನೀವು ನೋಡಿದರೆ ತುಂಬಾ ಜಾಗರೂಕರಾಗಿರಿ.

ಇದನ್ನೂ ಓದಿ- ಮನೆಯೊಳಗೆ ಕಾಲಿಡುತ್ತಿದ್ದಂತೆ ಫೋನ್ ನೆಟ್‌ವರ್ಕ್ ಹೋಗುತ್ತಾ? ಈ ಟಿಪ್ಸ್ ಅನುಸರಿಸಿ

* ಪಾಪ್-ಅಪ್‌ಗಳು: 
ನಿಮ್ಮ ಫೋನ್‌ನಲ್ಲಿ ಇದ್ದಕ್ಕಿದ್ದಂತೆ ಪಾಪ್-ಅಪ್‌ಗಳು ಹೆಚ್ಚಾದರೆ ಅದೂ ಕೂಡ ಫೋನ್ ಹ್ಯಾಕ್ ಆಗಿರುವ ಸಂಕೇತವಾಗಿದೆ. ವಾಸ್ತವವಾಗಿ, ಮಾಲ್‌ವೇರ್ ಅಥವಾ ಸ್ಪೈವೇರ್ ಹೆಚ್ಚಿದ ಪಾಪ್-ಅಪ್‌ಗಳಿಗೆ ಕಾರಣವಾಗಬಹುದು. ಹಾಗಾಗಿ, ಒಂದೊಮ್ಮೆ ನೀವು ನಿಮ್ಮ ಫೋನ್‌ನಲ್ಲಿ ಪಾಪ್-ಅಪ್‌ಗಳಲ್ಲಿ ಸ್ಪೈಕ್ ಆಗಿರುವುದನ್ನು ಗಮನಿಸಿದರೆ ಮತ್ತು ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ ಕೆಲವು ಬದಲಾವಣೆಗಳನ್ನು ನೋಡಿದರೆ ಕೂಡಲೇ ಎಚ್ಚೆತ್ತುಕೊಳ್ಳಿ. 

* ದಿಢೀರ್ ಬ್ಯಾಟರಿ ಖಾಲಿ ಆಗುವುದು: 
ಕೆಲವೊಮ್ಮೆ ಫೋನ್ ಅನ್ನು ಫುಲ್ ಚಾರ್ಜ್ ಮಾಡಿದರೂ, ಬ್ಯಾಟರ್ 100% ಆಗಿದ್ದರೂ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಪೂರ್ತಿಯಾಗಿ ಖಾಲಿಯಾಗುತ್ತದೆ. ಇಲ್ಲವೇ, ಹೆಚ್ಚಾಗಿ ಬಳಸದಿದ್ದರೂ ಕೂಡ ಫೋನ್ ತುಂಬಾ ಹೀಟ್ ಆಗುತ್ತದೆ. ಫೋನ್‌ನಲ್ಲಿ ಸ್ಪೈವೇರ್ ಮತ್ತು ಮಾಲ್ವೇರ್ ಉಪಸ್ಥಿತಿಯೂ ಕೂಡ ಇಂತಹ ಸಮಸ್ಯೆಗೆ ಪ್ರಮುಖ ಕಾರಣವಾಗಿರಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News