ಭಾರತದಲ್ಲಿ ಯಾವಾಗ ಪ್ರಾರಂಭವಾಗುತ್ತೆ 5G? ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ!

ಇನ್ನು ಇದೇ ಸಂದರ್ಭದಲ್ಲಿ ಭಾರತದಲ್ಲಿ ಎಂದು 5ಜಿ ಸೇವೆ ಪ್ರಾರಂಭವಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವನ್ನು ನೀಡಿದರು. ಅತೀ ಶೀಘ್ರದಲ್ಲಿ ದೇಶದಲ್ಲಿ 5ಜಿ ಸೇವೆ ಶುರುವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತದ ನಾಗರಿಕರಿಗೆ ಭರವಸೆ ನೀಡಿದ್ದಾರೆ.

Written by - Bhavishya Shetty | Last Updated : Aug 15, 2022, 02:49 PM IST
    • 'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವನ್ನು ಬೆಂಬಲಿಸಿದ ಪ್ರಧಾನಿ ಮೋದಿ
    • ಅತೀ ಶೀಘ್ರದಲ್ಲಿ ದೇಶದಲ್ಲಿ 5ಜಿ ಸೇವೆ ಶುರುವಾಗಲಿದೆ ಎಂದ ಪ್ರಧಾನಿ
    • ದೇಶವಾಸಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಭಿನಂದನೆ ತಿಳಿಸಿದರು
ಭಾರತದಲ್ಲಿ ಯಾವಾಗ ಪ್ರಾರಂಭವಾಗುತ್ತೆ 5G? ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ!  title=
5g In India

ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ಸತತ 9 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಜೊತೆಗೆ ದೇಶವಾಸಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಭಿನಂದನೆ ತಿಳಿಸಿದರು.  

ಇದನ್ನೂ ಓದಿ: ಅಂಬಾನಿ ಕುಟುಂಬಕ್ಕೆ ಬೆದರಿಕೆ: ರಿಲಯನ್ಸ್ ಆಸ್ಪತ್ರೆಗೆ ಬಂತು ಎಂಟು ಬೆದರಿಕೆ ಕರೆಗಳು!

ಇನ್ನು ಇದೇ ಸಂದರ್ಭದಲ್ಲಿ ಭಾರತದಲ್ಲಿ ಎಂದು 5ಜಿ ಸೇವೆ ಪ್ರಾರಂಭವಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವನ್ನು ನೀಡಿದರು. ಅತೀ ಶೀಘ್ರದಲ್ಲಿ ದೇಶದಲ್ಲಿ 5ಜಿ ಸೇವೆ ಶುರುವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತದ ನಾಗರಿಕರಿಗೆ ಭರವಸೆ ನೀಡಿದ್ದಾರೆ.

'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವನ್ನು ಬೆಂಬಲಿಸಿದ ಪ್ರಧಾನಿ ಮೋದಿ, ಇದು ಭಾರತದ ತಂತ್ರಜ್ಞಾನದ ಸಮಯ ಎಂದು ಹೇಳಿದರು. ಭಾರತ ಸರ್ಕಾರವು ಗ್ರಾಮೀಣ ಮತ್ತು ನಗರ ಭಾರತದ ನಡುವಿನ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತಿದೆ. 5G, OFC (ಆಪ್ಟಿಕಲ್ ಫೈಬರ್ ಕೇಬಲ್) ಮತ್ತು ಸೆಮಿ ಕಂಡಕ್ಟರ್ ತಯಾರಿಕೆಯೊಂದಿಗೆ, ತಳಮಟ್ಟದಲ್ಲಿ ಡಿಜಿಟಲ್ ಇಂಡಿಯಾ ಮೂಲಕ ಕ್ರಾಂತಿಯೊಂದು ಬರುತ್ತಿದೆ ಎಂದು ಮೋದಿ ಹೇಳಿದ್ದಾರೆ.

5G ನೆಟ್‌ವರ್ಕ್‌ಗಳು ಮತ್ತು OFC ಗಳು ಮೂರು ವಿಭಾಗಗಳಲ್ಲಿ ಭಾರತದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ - ಶಿಕ್ಷಣ, ಆರೋಗ್ಯ ಮತ್ತು ಸಾಮಾನ್ಯ ಜನರ ಜೀವನವನ್ನು ಪರಿವರ್ತಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಇದಲ್ಲದೆ, ಭಾರತದಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮಗಳು ಮತ್ತು ಸ್ಟಾರ್ಟ್‌ಅಪ್‌ಗಳು ಬೆಳೆಯುತ್ತಿರುವುದರಿಂದ ಭಾರತದಲ್ಲಿ ಬಹಳಷ್ಟು ಪ್ರತಿಭೆಗಳು ಟೈರ್ -2 ಮತ್ತು ಟೈರ್ -3 ನಗರಗಳಿಂದ ಬರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಎಲ್ಲಾ ಟೆಲಿಕಾಂ ಕಂಪನಿಗಳು 5G ನೆಟ್‌ವರ್ಕ್‌ಗಳನ್ನು ಪ್ರಾರಂಭಿಸಲು ಅಗತ್ಯವಿರುವ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್‌ಗೆ ಪ್ರವೇಶವನ್ನು ಹೊಂದಿವೆ. ಇವತ್ತೋ ಅಥವಾ ತಿಂಗಳ ನಂತರವೋ ಎಂಬುದು ಕಾದು ನೋಡಬೇಕಿದೆ ಎಂದರು.

ಇದನ್ನೂ ಓದಿ: 6 ಗಂಟೆ ತಡವಾಗಿ ವಿಮಾನ ಹಾರಾಡಲು ಕಾರಣವಾಗಿದ್ದು ಜೋಡಿಯ ಮೊಬೈಲ್ ಚಾಟ್!

'ಜೈ ಜವಾನ್, ಜೈ ಕಿಸಾನ್...' ಬಳಿಕ 'ಜೈ ಅನುಸಂಧಾನ' ಎಂದ ಪ್ರಧಾನಿ

ಕೆಂಪು ಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನವನ್ನು ಸೇರಿಸಿದರು. ಈಗ ನಾನು ಇದಕ್ಕೆ ಜೈ ಅನುಸಂಧಾನವನ್ನು ಸೇರಿಸುತ್ತೇನೆ. ಅಮೃತಕಲ್‌ಗೆ ನಾವೀನ್ಯತೆ ಬಹಳ ಮುಖ್ಯ” ಎಂದು ನುಡಿದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News