ಸರ್ಕಾರದ ಒತ್ತಡಕ್ಕೆ ಮಣಿದ Google, Playstore ಮರಳಿದ Bharat Matrimony ಸೇರಿದಂತೆ ಭಾರತದ ಜನಪ್ರಿಯ ಆಪ್ ಗಳು!

Popular Indian Apps Back On Playstore: ಭಾರತ ಸರ್ಕಾರದ ಒತ್ತಡಕ್ಕೆ ಮಣಿದ Google ತನ್ನ Playstore ನಲ್ಲಿ ಮತ್ತೆ ಭಾರತದ ಜನಪ್ರಿಯ ಆಪ್ಗಳಿಗೆ ಅವುಗಳ ಸ್ಥಾನ ಕಲ್ಪಿಸಿದೆ. ಆದರೆ, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಭಾರತೀಯ ಕಂಪನಿಗಳ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದನ್ನು ಟೀಕಿಸಿ, ನಂತರ ತೆಗೆದುಹಾಕಲಾದ ಅಪ್ಲಿಕೇಶನ್‌ಗಳನ್ನು ತನ್ನ ಪ್ಲೇ ಸ್ಟೋರ್‌ನಲ್ಲಿ ಮರುಸ್ಥಾಪಿಸಲು Google ಗೆ ಮನವಿ ಮಾಡಿಕೊಂಡಿತ್ತು. (Technology News In Kannada)  

Written by - Nitin Tabib | Last Updated : Mar 3, 2024, 04:06 PM IST
  • ತೆಗೆದುಹಾಕಲಾದ ಅಪ್ಲಿಕೇಶನ್‌ಗಳನ್ನು ತಕ್ಷಣ ಮರುಸ್ಥಾಪಿಸಲು IAMAI Google ಗೆ ಒತ್ತಾಯಿಸಿದೆ.
  • ವಿಷಯ ಬಾಕಿ ಇರುವಾಗ ಪರಸ್ಪರ ಒಪ್ಪಿಗೆಯಾಗುವ ಪರಿಹಾರವನ್ನು ಕಂಡುಕೊಳ್ಳಲು ಉದ್ಯಮ ಸಂಸ್ಥೆಗಳು
  • ಅಥವಾ ಸದಸ್ಯ ಕಂಪನಿಗಳೊಂದಿಗೆ ಸಮಾಲೋಚಿಸಬೇಕು ಎಂದು ಹೇಳಿದೆ.
ಸರ್ಕಾರದ ಒತ್ತಡಕ್ಕೆ ಮಣಿದ Google, Playstore ಮರಳಿದ Bharat Matrimony ಸೇರಿದಂತೆ ಭಾರತದ ಜನಪ್ರಿಯ ಆಪ್ ಗಳು! title=

Google Play Store Policy: ಭಾರತ ಸರ್ಕಾರದ ಒತ್ತಡಕ್ಕೆ ಮಣಿದ Google ತನ್ನ Playstore ನಲ್ಲಿ ಮತ್ತೆ ಭಾರತದ ಜನಪ್ರಿಯ ಆಪ್ಗಳಿಗೆ ಅವುಗಳ ಸ್ಥಾನ ಕಲ್ಪಿಸಿದೆ, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಭಾರತೀಯ ಕಂಪನಿಗಳ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದನ್ನು ಖಂಡಿಸಿತ್ತು. ಅಲ್ಲದೆ, ತೆಗೆದುಹಾಕಲಾದ ಅಪ್ಲಿಕೇಶನ್‌ಗಳನ್ನು ತನ್ನ ಪ್ಲೇ ಸ್ಟೋರ್‌ನಲ್ಲಿ ಮರುಸ್ಥಾಪಿಸಲು Google ಅನ್ನು ಮನವಿ ಮಾಡಿತ್ತು. ಭಾರತ್ ಮ್ಯಾಟ್ರಿಮೋನಿ (Bharat Matrimony), ಇನ್ಫೋ ಎಡ್ಜ್, ಶಾದಿ ಡಾಟ್ ಕಾಮ್ (Shaadi Dot Com) ಮತ್ತು ಟ್ರೂಲಿ ಮ್ಯಾಡ್ಲಿ (Truly Madlyl) ಸೇರಿದಂತೆ ಕೆಲವು ಪ್ರಮುಖ ಗ್ರಾಹಕ ಡಿಜಿಟಲ್ ಕಂಪನಿಗಳ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ (Google Paly Store)ನಿಂದ ತೆಗೆದುಹಾಕಿರುವುದನ್ನು ಸಂಘ ಬಲವಾಗಿ ಖಂಡಿಸಿತ್ತು.

ಅಪ್ ಗಳ ಡಿಲಿಸ್ಟಿಂಗ್ ಸರಿಯಾದ ಕ್ರಮವಲ್ಲ ಎಂದ ಅಸೋಸಿಯೇಷನ್.
ಈ ಕುರಿತು ಹೇಳಿಕೆ ನೀಡಿದ IAMAI, "ಅಸೋಸಿಯೇಶನ್‌ನ ಆಡಳಿತ ಮಂಡಳಿಯು ಅಪ್ಲಿಕೇಶನ್‌ಗಳನ್ನು ಡಿಲಿಸ್ಟಿಂಗ್ ಮಾಡುವುದು ಅನ್ಯಾಯ" ಎಂದು ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಖ್ಚಂದಾನಿ ತಮ್ಮ ಎಕ್ಸ್ ಖಾತೆಯಲ್ಲಿ ಭಾರತೀಯ ಕಂಪನಿಗಳು ಇನ್ಮುಂದೆ ನಿಯಮಗಳ ಪರಿಪಾಲನೆ ಮಾಡಲಿವೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ UPI ಮತ್ತು ONDC ಯಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಭಾಗವಾಗಿರುವ ಆಪ್ ಸ್ಟೋರ್/ಪ್ಲೇ ಸ್ಟೋರ್ ಭಾರತಕ್ಕೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಈ ಪ್ರತಿಕ್ರಿಯೆಯು ಕಾರ್ಯತಂತ್ರದ ಭಾಗವಾಗಿರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-WhatsApp ನಲ್ಲಿ ಇನ್ಮುಂದೆ ನೀವು ಥರ್ಡ್ ಪಾರ್ಟಿ ಚಾಟ್ ಗಳನ್ನು ನಿರ್ವಹಿಸಬಹುದು, ಬರಲಿದೆ ಹೊಸ ವೈಶಿಷ್ಯ!

ಆ್ಯಪ್‌ಗಳನ್ನು ತಕ್ಷಣ ಮರುಸ್ಥಾಪಿಸಲು ಆದೇಶ ನೀಡಲಾಗಿದೆ
ತೆಗೆದುಹಾಕಲಾದ ಅಪ್ಲಿಕೇಶನ್‌ಗಳನ್ನು ತಕ್ಷಣ ಮರುಸ್ಥಾಪಿಸಲು IAMAI Google ಗೆ ಒತ್ತಾಯಿಸಿದೆ. ವಿಷಯ ಬಾಕಿ ಇರುವಾಗ ಪರಸ್ಪರ ಒಪ್ಪಿಗೆಯಾಗುವ ಪರಿಹಾರವನ್ನು ಕಂಡುಕೊಳ್ಳಲು ಉದ್ಯಮ ಸಂಸ್ಥೆಗಳು ಅಥವಾ ಸದಸ್ಯ ಕಂಪನಿಗಳೊಂದಿಗೆ ಸಮಾಲೋಚಿಸಬೇಕು ಎಂದು ಹೇಳಿದೆ. ಹಲವಾರು ದೊಡ್ಡ ಕಂಪನಿಗಳು ಸೇರಿದಂತೆ ಕನಿಷ್ಠ 10 ಕಂಪನಿಗಳು ನ್ಯಾಯಾಲಯದಿಂದ ಮಧ್ಯಂತರ ರಕ್ಷಣೆ ಪಡೆದ ನಂತರ Google Play Store ಗೆ ಪಾವತಿಸಿಲ್ಲ ಎಂಬ Google ಹೇಳಿಕೆಯ ನಂತರ ಉದ್ಯಮ ಸಂಸ್ಥೆಯ ಈ ಪ್ರತಿಕ್ರಿಯೆ ಬಂದಿದೆ.

ಇದನ್ನೂ ಓದಿ-Google Play Store: ಈ ಜನಪ್ರಿಯ ಭಾರತೀಯ ಆಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದ ಗೂಗಲ್, ಕಾರಣ ಇಲ್ಲಿದೆ!

ಥಿಂಕ್-ಟ್ಯಾಂಕ್ ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಖಂಡಿಸಿದೆ
ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ (ADIF), ದೇಶೀಯ ಸ್ಟಾರ್ಟ್‌ಅಪ್‌ಗಳನ್ನು ಪ್ರತಿನಿಧಿಸುವ ನೀತಿ ಥಿಂಕ್-ಟ್ಯಾಂಕ್ ಆಗಿದ್ದು, ಗೂಗಲ್ ನ ಈ ಕ್ರಮವನ್ನು ಖಂಡಿಸಿದೆ, ಅಪ್ಲಿಕೇಶನ್‌ಗಳನ್ನು ಡಿಲಿಸ್ಟಿಂಗ್ ಮಾಡುವ ಮೂಲಕ, ಈ ಶೋಷಣೆಯ ನೀತಿಗಳನ್ನು ಪ್ರಶ್ನಿಸಿ ಧೈರ್ಯ ತೋರಿದ ಡೆವಲಪರ್‌ಗಳನ್ನು ಬೆದರಿಸಲು ಮತ್ತು ಬಲವಂತಪಡಿಸಲು Google ಪ್ರಯತ್ನಿಸುತ್ತಿದೆ ಎಂದು ಅದು ಹೇಳಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News