Public Wi-Fi PM-WANI: ಯೋಜನೆಯಿಂದ ಸುಮಾರು 2 ಕೋಟಿ ನೌಕರಿ ಹಾಗೂ ಉದ್ಯಮಶೀಲತೆಯ ಅವಕಾಶ

Public Wi-Fi PM-WANI: ಕಾರ್ಯಶೈಲಿಯ ಕುರಿತು ಹರಡಿಸಲಾಗುತ್ತಿರುವ ತಪ್ಪು ತಿಳುವಳಿಕೆಗಳನ್ನು BIF ಖಂಡಿಸಿದೆ.

Last Updated : Dec 18, 2020, 02:04 PM IST
  • ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ PM-WANI ಯೋಜನೆಗೆ ಅನುಮೋದನೆ ನೀಡಿದೆ.
  • ಈ ಯೋಜನೆ ಸುಮಾರು 2 ಕೋಟಿ ಉದ್ಯೋಗ ಮತ್ತು ಉದ್ಯಮ ಶೀಲತೆಯ ಅವಕಾಶಗಳನ್ನು ಸೃಷ್ಟಿಸಲಿದೆ.
  • ಇದು ದೇಶದಲ್ಲಿ ವೈಫೈ ಕ್ರಾಂತಿ ತರಲಿದ್ದು, ಎಲ್ಲರಿಗೂ ಕೂಡ ಇಂಟರ್ನೆಟ್ ಅಗ್ಗದ ದರದಲ್ಲಿ ಸಿಗಲಿದೆ ಎಂದ BIF
Public Wi-Fi PM-WANI: ಯೋಜನೆಯಿಂದ ಸುಮಾರು 2 ಕೋಟಿ ನೌಕರಿ ಹಾಗೂ ಉದ್ಯಮಶೀಲತೆಯ ಅವಕಾಶ title=
Public Wi-Fi PM-WANI

ನವದೆಹಲಿ:Public Wi-Fi PM-WANI: ಡಿಸೆಂಬರ್ ತಿಂಗಳಿನ ಆರಂಭದಲ್ಲಿ ಘೋಷಿಸಲಾದ PM-WANI ಯೋಜನೆ ಉದ್ಯೋಗ ಮತ್ತು ಉದ್ಯಮಶೀಲತೆಯ  2 ಕೋಟಿಗೂ ಅಧಿಕ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಬ್ರಾಡ್‌ಬ್ಯಾಂಡ್ ಇಂಡಿಯಾ ಫೋರಂ (BIF) ಗುರುವಾರ ಹೇಳಿದೆ. ಸಾರ್ವಜನಿಕ ವೈಫೈ ಮಾಡೆಲ್ ಪಿಎಂ ವಾನಿಯ ಕಾರ್ಯಶೈಲಿಯ ಕುರಿತು ತಪ್ಪು ಮಾಹಿತಿ ಹರಡುತ್ತಿರುವುದನ್ನು ಬಿಐಎಫ್ ಖಂಡಿಸಿದೆ ಮತ್ತು ಹೊಸ ಕರಡಿನಲ್ಲಿ ಎರಡು ಕೋಟಿಗೂ ಹೆಚ್ಚು ಉದ್ಯೋಗಗಳು ಮತ್ತು ಉದ್ಯಮಶೀಲತೆಯ ಅವಕಾಶಗಳಿವೆ ಎಂದು ಅದು ಹೇಳಿದೆ.

ಡಿಸೆಂಬರ್ 9 ರಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ PM-WANI ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು. PM-WANI ಅಂದರೆ PM Wi-Fi Access Network Interface. PM-WANI ದೇಶದಲ್ಲಿ ವೈ-ಫೈ ಕ್ರಾಂತಿಯನ್ನು ತರಲಿದೆ ಮತ್ತು ಇಂಟರ್ನೆಟ್ ಎಲ್ಲರಿಗೂ ಲಭ್ಯವಾಗಲಿದೆ ಎಂದು ಸರ್ಕಾರ ಹೇಳಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಯಾವುದೇ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಪಡೆಯಲು ಸಾಧ್ಯವಾಗಲಿದೆ.

ಶೇ.40ರಷ್ಟು ದುಬಾರಿಯಾಗಲಿದೆ ಮೊಬೈಲ್ ಡೇಟಾ
ಈ ಕುರಿತು ಹೇಳಿಕೆ ನೀಡಿರುವ BIF ಒಂದೆಡೆ ಮೊಬೈಲ್ ಡೇಟಾ ದುಬಾರಿಯಾಗುತ್ತಿರುವ ಸನ್ನಿವೇಶದಲ್ಲಿ ಜನರಿಗೆ ಆಗ್ಗದ ದರದಲ್ಲಿ ವೈ-ಫೈ ಡೇಟಾ ಸಿಗಲಿದೆ. ಇದೊಂದು ಅಗ್ಗದ ಆಯ್ಕೆಯಾಗಿರುವ ಜೊತೆಗೆ ಮೊಬೈಲ್ ಡೇಟಾ ಶುಲ್ಖ ನಿರಂತರ ಏರಿಕೆಯಾಗುತ್ತಿದೆ ಎಂದು BIF ಅಧ್ಯಕ್ಷ ಟಿ.ವಿ ರಾಮಚಂದ್ರನ್ ಹೇಳಿದ್ದಾರೆ.  ಅಷ್ಟೇ ಅಲ್ಲ ಭವಿಷ್ಯದಲ್ಲಿ ಇದು ಶೇ.30 ರಿಂದ ಶೇ.40 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- ಚಿಲ್ಹಟಿ-ಹಲ್ಡಿಬಾರಿ ಮಾರ್ಗದಲ್ಲಿ 55 ವರ್ಷಗಳ ನಂತರ ಚಲಿಸಿದ ರೈಲು

ಸಾರ್ವಜನಿಕ ವೈ-ಫೈ ಸೇವೆ ಹೇಗೆ ಲಾಭಕಾರಿ
ಸಾರ್ವಜನಿಕ ವೈಫೈಗೆ ಸಂಬಂಧಿಸಿದಂತೆ ಕೆಲವರು ಹರಡುತ್ತಿರುವ ತಪ್ಪು ಮಾಹಿತಿಗೆ ಪ್ರತಿಕ್ರಿಯಿಸಿದ ಬಿಐಎಫ್, ಕಳೆದ ಹಲವಾರು ವರ್ಷಗಳಲ್ಲಿ, ಸರ್ಕಾರವು ಅದರ ಕಾರ್ಯಶೀಲತೆಯ ಬಗ್ಗೆ ಹಲವು ಪುರಾವೆಗಳನ್ನು ನೀಡಿದೆ ಎಂದು ಹೇಳಿದೆ. ಸರ್ಕಾರದ ಪ್ರಧಾನ ಸಂಶೋಧನೆ ಮತ್ತು ಸಂಶೋಧನಾ ಸಂಸ್ಥೆ ಸಿ-ಡಾಟ್ ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಆರಂಭಿಕ ಮತ್ತು ಉದ್ಯಮಿಗಳೊಂದಿಗೆ ವ್ಯಾಪಕ ಪ್ರಯೋಗಗಳನ್ನು ನಡೆಸಿದೆ. "ವೈಫೈ ಹಾಟ್‌ಸ್ಪಾಟ್‌ಗಳು ಸಾಮಾನ್ಯ ಜನರಿಗೆ ಹೆಚ್ಚು ಕೈಗೆಟುಕುವ ಆಯ್ಕೆಗಳನ್ನು ನೀಡುತ್ತಲೇ ಇರುತ್ತವೆ ಮತ್ತು ಅವು ದೊಡ್ಡ ಪ್ರಮಾಣದ ಸಾರ್ವಜನಿಕ ಸಂಪರ್ಕಕ್ಕೆ ಆರ್ಥಿಕ ಸಾಧನವಾಗಬಹುದು" ಎಂದು ರಾಮಚಂದ್ರನ್ ಹೇಳಿದ್ದಾರೆ. ಇದು ಡಿಜಿಟಲ್ ಇಂಡಿಯಾ ಮತ್ತು ಸ್ವಾವಲಂಬಿ ಭಾರತಕ್ಕೆ ಭಾರಿ ಒತ್ತು ನೀಡಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.

ಇದನ್ನು ಓದಿ-Mann Ki Baat: ನೂತನ ಕೃಷಿ ಕಾಯ್ದೆಯ ಲಾಭ ಹೇಳಿದ PM Modi, 10 ಪ್ರಮುಖ ಅಂಶಗಳು

PM-WANI ಹೇಗೆ ಕಾರ್ಯನಿರ್ವಹಿಸಲಿದೆ
PM-ವಾಣಿ ಯೋಜನೆಯಡಿ ಮೂರು ಪ್ರಮುಖ ಘಟಕಗಳು ಇರಲಿವೆ. ಮೊದಲ ಘಟಕ ಸಾರ್ವಜನಿಕ ದತ್ತಾಂಶ ಕಚೇರಿ ಅಂದರೆ ಪಿಡಿಒ ಆಗಿರುತ್ತದೆ. PM-WANI ಗಾಗಿ ದೇಶದಲ್ಲಿ ಸಾರ್ವಜನಿಕ ದತ್ತಾಂಶ ಕಚೇರಿಗಳನ್ನು ತೆರೆಯಲಾಗುವುದು ಮತ್ತು ಇದಕ್ಕಾಗಿ ಯಾವುದೇ ಪರವಾನಗಿ, ಶುಲ್ಕ ಅಥವಾ ನೋಂದಣಿ ಅಗತ್ಯವಿಲ್ಲ. ಎರಡನೆಯ ಘಟಕವು ಸಾರ್ವಜನಿಕ ದತ್ತಾಂಶ ಸಂಗ್ರಾಹಕವಾಗಲಿದೆ, ಇದು ಸಾರ್ವಜನಿಕ ದತ್ತಾಂಶ ಕಚೇರಿಯ ಲೆಕ್ಕಪತ್ರ ನಿರ್ವಹಣೆ ಮತ್ತುದೃಢೀಕರಣವನ್ನು ಪರಿಶೀಲಿಸಲಿದೆ. ಮೂರನೇ ಘಟಕವು ಅಪ್ಲಿಕೇಶನ್ ಒದಗಿಸುವವರಗಿದ್ದಾರೆ. ಇವರು  ವಿಶೇಷ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಲಿದ್ದಾರೆ ಮತ್ತು ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ, ಅದರ ಡಿಜಿಟಲ್ ದೃಢೀಕರಣ ಇರಲಿದೆ. ಆಪ್ ಸ್ಟೋರ್ ಹೊರತುಪಡಿಸಿ ಸರ್ಕಾರವು ಅದನ್ನು ತನ್ನ ವೆಬ್‌ಸೈಟ್‌ಗಳಲ್ಲಿ ಬಿತ್ತರಿಸಲಿದೆ. ಅದರ ಜಾಹೀರಾತು ಮತ್ತು ಲಿಂಕ್ ಅನ್ನು ಸಾರ್ವಜನಿಕಗೊಳಿಸಲಾಗುತ್ತದೆ. ಇದರ ನಂತರ, ನಾಗರಿಕರು ದೇಶದ ಯಾವುದೇ ಸಾರ್ವಜನಿಕ ದತ್ತಾಂಶ ಕಚೇರಿಯಿಂದ PM Wi-Fi ಅನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಸಾರ್ವಜನಿಕ ಡೇಟಾ ಅಗ್ರಿಗೇಟರ್ ಮತ್ತು ಅಪ್ಲಿಕೇಶನ್ ಪೂರೈಕೆದಾರರಿಗೆ 7 ದಿನಗಳಲ್ಲಿ ನೋಂದಣಿ ನೀಡಲಾಗುವುದು, ಆದರೆ ಇವುಗಳಿಗೆ ಯಾವುದೇ ಪರವಾನಗಿ ಇರುವುದಿಲ್ಲ.

Trending News