Pig Kidneys Transplant In Men: ಹೃದಯ ಬಳಿಕ ಇದೀಗ Brain Dead ಆಗಿರುವ ವ್ಯಕ್ತಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಿ ಇತಿಹಾಸ ಬರೆದ US ವೈದ್ಯರು

Pig Kidneys Transplant In Men - ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡು ಮೂತ್ರಪಿಂಡಗಳನ್ನು ರೋಗಿಗೆ ಕಸಿ ಮಾಡಲಾಗಿದೆ. ಅಷ್ಟೇ ಅಲ್ಲ ಈ ಕಸಿ ಪ್ರಕ್ರಿಯೆ ಬಳಿಕ ಎರಡೂ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಿವೆ ಎನ್ನಲಾಗಿದೆ.

Written by - Nitin Tabib | Last Updated : Jan 21, 2022, 05:43 PM IST
  • ಅಮೇರಿಕಾದ ವೈದ್ಯರಿಂದ ಮತ್ತೊಂದು ಮಹತ್ತರ ಸಾಧನೆ.
  • ಬ್ರೇನ್ ಡೆಡ್ ಮನುಷ್ಯನ ಶರೀರದಲ್ಲಿ ಹಂದಿ ಮೂತ್ರಪಿಂಡಗಳ ಯಶಸ್ವಿ ಕಸಿ.
  • 57 ವರ್ಷದ ಜಿಮ್ ಪಾರ್ಸನ್ಸ್ ಗೆ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಿದ ವೈದ್ಯರು
Pig Kidneys Transplant In Men: ಹೃದಯ ಬಳಿಕ ಇದೀಗ Brain Dead ಆಗಿರುವ ವ್ಯಕ್ತಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಿ ಇತಿಹಾಸ ಬರೆದ US ವೈದ್ಯರು  title=
Pig Kidneys Transplant In Men (File Photo)

ವಾಶಿಂಗ್ಟನ್: Pig Kidneys Transplant In Men - ಅಮೇರಿಕನ್ (America) ವೈದ್ಯರು ಮತ್ತೊಂದು ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಇತಿಹಾಸ ಸೃಷ್ಟಿಸಿರುವ ಅಲ್ಲಿನ ವೈದ್ಯರು ಈ ಬಾರಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು (Genetically-Modified Pig Kidneys) ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದ್ದಾರೆ. ಈ ಕಾರ್ಯಾಚರಣೆಯನ್ನು ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾಡಲಾಗಿದೆ.

ದೊರೆತ ಮಾಹಿತಿಯ ಪ್ರಕಾರ, ಅಲ್ಲಿ ವಾಸಿಸುವ 57 ವರ್ಷದ ಜಿಮ್ ಪಾರ್ಸನ್ಸ್  (Jim Parsons)  ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದರು, ನಂತರ ಅವರ ಮೆದುಳು ಡೆಡ್ ಆಗಿದೆ ಎಂದು ಘೋಷಿಸಲಾಗಿದೆ. ಇದರ ನಂತರ, ಪಾರ್ಸನ್ಸ್ ಕುಟುಂಬದ ಒಪ್ಪಿಗೆಯೊಂದಿಗೆ ರೋಗಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ. ಅಷ್ಟೇ ಅಲ್ಲ  ಕಸಿ ಪ್ರಕ್ರಿಯೆಯ ಬಳಿಕ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎನ್ನಲಾಗಿದೆ.

ಇದನ್ನೂ ಓದಿ-Time Is Money: ವೃದ್ಧಾಪ್ಯದಲ್ಲಿ ಸಹಾಯ ಮತ್ತು ಬೆಂಬಲಕ್ಕಾಗಿ Bank ನಲ್ಲಿ Time ಠೇವಣಿ ಮಾಡಿ ! ಏನಿದು ಹೊಸ ಯೋಜನೆ?

ಇದಕ್ಕೂ ಮುನ್ನ ಅಮೆರಿಕದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರು ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸಿ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದರು. ಇಲ್ಲಿ ವೈದ್ಯರ ತಂಡವೊಂದು ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು (Pig Heart) 57 ವರ್ಷದ ಬೆನೆಟ್ ಡೇವಿಡ್‌ಗೆ (David Bennett) ಯಶಸ್ವಿಯಾಗಿ ಕಸಿ ಮಾಡಿದ್ದರು. ಆದರೆ, ಈ ಯಶಸ್ಸಿನ ನಂತರವೂ, ಅದು ಕಾರ್ಯನಿರ್ವಹಿಸುತ್ತದೆಯೇ ಅಥವಾ ಪರಿಸ್ಥಿತಿಗಳು ಹದಗೆಡುತ್ತವೆಯೇ ಎಂಬುದನ್ನು ಹೇಳುವುದು ತುಂಬಾ ಅವಸರದ ಹೇಳಿಕೆಯಾಗಲಿದೆ ಎಂದು ವೈದ್ಯರು ಹೇಳಿದ್ದರು.

ಇದನ್ನೂ ಓದಿ-Pink Egg: ಮೊಟ್ಟೆಯ ಒಳಭಾಗದಲ್ಲಿ ಗುಲಾಬಿ ಬಣ್ಣದ ಮೊಟ್ಟೆ ಕಂಡು ಬೆಚ್ಚಿಬಿದ್ದ ಮಹಿಳೆ, ಕಾರಣ ಇಲ್ಲಿದೆ

ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡಲು ದೀರ್ಘಕಾಲದಿಂದ ಸಂಶೋಧನೆ ನಡೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಜಿಮ್ ಪಾರ್ಸನ್ಸ್ ಮತ್ತು ಬೆನೆಟ್ ಡೇವಿಡ್ನಲ್ಲಿ ಕಸಿ ಮಾಡಿದ ನಂತರ ಹಂದಿಗಳ ಮೂತ್ರಪಿಂಡ ಮತ್ತು ಹೃದಯವು ಸರಿಯಾಗಿ ಕೆಲಸ ಮಾಡಿದರೆ, ವೈದ್ಯಕೀಯ ಲೋಕದಲ್ಲಿ ಅದೊಂದು ಮಹತ್ತರ ಸಾಧನೆಯೇ ಎಂದು ಹೇಳಬಹುದು. 

ಇದನ್ನೂ ಓದಿ-Viral News: Corona ಸೋಂಕಿತನಾಗಲು ಬಯಸುತ್ತಿದ್ದಾನೆ ಓರ್ವ ವ್ಯಕ್ತಿ! ಅದಕ್ಕಾಗಿ ಹಣ ಕೂಡ ಖರ್ಚು ಮಾಡಲು ಸಿದ್ಧ ಅಂತಾನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News