Jupiter-Saturn Reunite: 800 ವರ್ಷಗಳ ಸುದೀರ್ಘ ಅವಧಿಯ ಬಳಿಕ ನಾಳೆ ಸಂಭವಿಸಲಿದೆ ಈ ಖಗೋಳ ಘಟನೆ

Jupiter-Saturn Reunite:ಗುರುಗ್ರಹವು ಪ್ರತಿ 20 ವರ್ಷಗಳಿಗೊಮ್ಮೆ ಶನಿ ಗ್ರಹದ ಹತ್ತಿರದಿಂದ ಹಾದುಹೋಗುತ್ತದೆ. ಈ ಬಾರಿ ಈ ಘಟನೆ ಬಹಳ ವಿಶೇಷತೆಯಿಂದ ಕೂಡಿದೆ. ಈ ಖಗೋಳ ಘಟನೆ ಡಿಸೆಂಬರ್ 21, 2020 ರಂದು ನಡೆಯಲಿದೆ.

Written by - Nitin Tabib | Last Updated : Dec 20, 2020, 05:58 PM IST
  • 800 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ಖಗೋಳ ಘಟನೆ ಸಂಭವಿಸಲಿದೆ.
  • ಇದನ್ನು ಕ್ರಿಸ್ತ್ಮಸ್ ಸ್ಟಾರ್ ಅಥವಾ ಸ್ಟಾರ್ ಆಫ್ ಬೆಥ್ ಹೆಲ್ಮ್ ಎಂದೂ ಕೂಡ ಕರೆಯಲಾಗುತ್ತದೆ.
  • 1226ರಲ್ಲಿ ನಡೆದ ಈ ಘಟನೆಯನ್ನು ಭೂಮಿಯಿಂದ ವಿಕ್ಷೀಸಲಾಗಿತ್ತು
Jupiter-Saturn Reunite: 800 ವರ್ಷಗಳ ಸುದೀರ್ಘ ಅವಧಿಯ ಬಳಿಕ ನಾಳೆ ಸಂಭವಿಸಲಿದೆ ಈ ಖಗೋಳ ಘಟನೆ title=
Jupiter-Saturn Reunite (File Photo)

ನವದೆಹಲಿ: Jupiter-Saturn Reunite: ಸೋಮವಾರ, ಗುರು ಮತ್ತು ಶನಿ (Jupiter and Saturn), ಸೌರ ಮಂಡಲದ ಈ  ಎರಡು ದೊಡ್ಡ ಗ್ರಹಗಳು ಪರಸ್ಪರ ಹತ್ತಿರ ಬರಲಿವೆ. ಇದನ್ನು ಸೌರವ್ಯೂಹದ ಪ್ರಮುಖ ಖಗೋಳ ಘಟನೆಯನ್ನಾಗಿ ನೋಡಲಾಗುತ್ತಿದೆ. ಭೂಮಿಯಿಂದ ನೋಡಿದಾಗ, ಈ ಎರಡು ಒಂದೇ ಗ್ರಹದಂತೆ ಕಾಣುತ್ತವೆ ಏಕೆಂದರೆ ಅವುಗಳ ನಡುವಿನ ಅಂತರವು ಬಹಳ ಕಡಿಮೆ ಇರುತ್ತದೆ. ಈ ಎರಡು ಗ್ರಹಗಳು 17 ನೇ ಶತಮಾನದ ಮಹಾನ್ ಖಗೋಳ ವಿಜ್ಞಾನಿ ಗೆಲಿಲಿಯೊ ಅವರ ಜೀವಿತಾವಧಿಯಲ್ಲಿ ತುಂಬಾ ಹತ್ತಿರಕ್ಕೆ ಬಂದಿದ್ದವು. ಪಾಶ್ಚಿಮಾತ್ಯ ದೇಶಗಳಲ್ಲಿ ಇದನ್ನು ಕ್ರಿಸ್‌ಮಸ್ ಸ್ಟಾರ್ ಅಥವಾ ಸ್ಟಾರ್ ಆಫ್ ಬೆಥ್ ಲೆಹೆಮ್ ಎಂದೂ ಕರೆಯಲಾಗುತ್ತದೆ.

ಇದನ್ನು ಓದಿ- Burj Khalifa ಗಾತ್ರದ ಈ Asteroid ಭೂಮಿಗೆ ಡಿಕ್ಕಿ ಹೊಡೆಯಲಿದೆಯೇ? ಇಲ್ಲಿದೆ ವಿವರ

1226ರಲ್ಲಿ ಈ ಎರಡೂ ಗ್ರಹಗಳು ಹತ್ತಿರಕ್ಕೆ ಬಂದಿದ್ದವು.
ಮಾರ್ಚ್ 1226 ರಲ್ಲಿಯೂ ಕೂಡ ಈ ಎರಡೂ ಗ್ರಹಗಳು ಪರಸ್ಪರ ಹತ್ತಿರ ಬಂದಿದ್ದವು.  ಈ ಘಟನೆಯನ್ನು ಭೂಮಿಯಿಂದ ವಿಕ್ಷೀಸಲಾಗಿತ್ತು. ಆದರೆ, ಆ ಬಳಿಕ ಈ ಘಟನೆಯನ್ನು ಡಿಸೆಂಬರ್ 21 ರಂದು ನಡೆಯುತ್ತಿದ್ದು, ಇದನ್ನು ಸಹ ಭೂಮಿಯಿಂದ ವಿಕ್ಷೀಸಬಹುದು. NASA ಹೇಳುವ ಪ್ರಕಾರ ಗುರು ಮತ್ತು ಶನಿಯು ಪರಸ್ಪರ 400 ದಶಲಕ್ಷ ಮೈಲಿ ದೂರದಲ್ಲಿವೆ. ಈ ಎರಡು ಗ್ರಹಗಳು 21 ರ ರಾತ್ರಿ ಬೆಳಕಿನ ಒಂದು ಸ್ಪಷ್ಟ ಬಿಂದುವಂತೆ ಗೋಚರಿಸಲಿವೆ ಹಾಗೂ ಈ ಘಟನೆಯನ್ನು ನಾವು ಭೂಮಿಯಿಂದ ವಿಕ್ಷೀಸಬಹುದಾಗಿದೆ. ಜನಸಾಮಾನ್ಯರಿಗಾಗಿ ಇದೊಂದು ಜೀವನ್ಮಾನದ ಖಗೋಲೀಯ ಘಟನೆಯಾಗಿರಲಿದೆ.
ಇದನ್ನು ಓದಿ-ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA

ಸೂರ್ಯನಿಗೆ ತುಂಬಾ ಹತ್ತಿರವಿರುವ ಕಾರಣ ನೋಡುವುದು ಬಹುತೇಕ ಅಸಂಭವ
ಈ ಮೊದಲೂ ಕೂಡ 1623 ರಲ್ಲಿ ಈ ಎರಡೂ ಗ್ರಹಗಳು ಪರಸ್ಪರ ಹತ್ತಿರಕ್ಕೆ ಬಂದಿದ್ದವು. ಆದರೆ ಆಗ, ಈ ಎರಡೂ ಗ್ರಹಗಳು ಸೂರ್ಯನಿಗೆ ಹತ್ತಿರವಿದದ ಕಾರಣ ಅವುಗಳ ಈ ಸ್ಥಿತಿ ನೋಡುವುದು ಬಹುತೇಕ ಅಸಂಭವವಾಗಿತ್ತು.

ಇದನ್ನು ಓದಿ-ಎಚ್ಚರ! ಭೂಮಿ ಬಗ್ಗೆ ಹೊಸ ಭವಿಷ್ಯ ನುಡಿದ ನಾಸಾ

ಇದು ವರ್ಷದ ಅತ್ಯಂತ ಚಿಕ್ಕ ದಿನವಾಗಿದೆ
ಡಿಸೆಂಬರ್ 21ನ್ನು ವರ್ಷದ ಅತ್ಯಂತ ಚಿಕ್ಕ ದಿನ ಎಂದು ಪರಿಗಣಿಸಲಾಗುತ್ತದೆ. ಈ ಘಟನೆಯ ಕುರಿತು ಹೇಳುವ ವಾಂದರ್ಬಿಲ್ ವಿಶ್ವವಿದ್ಯಾಲಯದ ಖಗೋಳ ಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಡೇವಿಡ್ ವೆಂಟ್ರಾಬ್ , 'ಈ ಖಗೋಲಿಯ ಘಟನೆ ವ್ಯಕ್ತಿಯೊಬ್ಬರ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತದೆ' ಎನ್ನುತ್ತಾರೆ.
ಇದನ್ನು ಓದಿ-ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ

ಎರಡೂ ಗ್ರಹಗಳ ನಡುವಿನ ಅಂತರ ಅತ್ಯಂತ ಕಡಿಮೆ ಇರಲಿದೆ
ವಿಜ್ಞಾನಿಗಳು ಹೇಳುವ ಪ್ರಕಾರ ಡಿಸೆಂಬರ್ 21 ರಂದು ಈ ಎರಡೂ ಗ್ರಹಗಳ ನಡುವಿನ ಅಂತರ ಕೇವಲ 0.1 ಡಿಗ್ರಿ ಮಾತ್ರ ಇರಲಿದೆ. ಒಂದು ವೇಳೆ ಹವಾಮಾನ ಸರಿಯಾಗಿದ್ದರೆ, ವಿಶ್ವಾದ್ಯಂತ ಎಲ್ಲ ಕಡೆಗಳಲ್ಲಿ ಸೂರ್ಯಾಸ್ತದ ನಂತರ ಈ ಖಗೋಲೀಯ ಘಟನೆ ಗೋಚರಿಸಲಿದೆ.

Trending News