Omicron Updates: ಭಾರತದ ಪಾಲಿಗೆ Omicron ಎಷ್ಟೊಂದು ಅಪಾಯಕಾರಿ, Vaccine ಎಷ್ಟು ಪರಿಣಾಮಕಾರಿ? AIIMS ವೈದ್ಯರು ಹೇಳಿದ್ದೇನು?

Omicron Updates - ಕರೋನಾ ವೈರಸ್‌ನ (Codronavirus) ಹೊಸ ರೂಪಾಂತರಿ 'ಓಮಿಕ್ರಾನ್' (Omicron) ಬಗ್ಗೆ ವಿಶ್ವಾದ್ಯಂತ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಭಾರತದಲ್ಲಿ ಸರ್ಕಾರ ಮತ್ತು ವಿವಿಧ ಏಜೆನ್ಸಿಗಳು ಕೂಡ ಅಲರ್ಟ್ ಆಗಿವೆ. 

Written by - Nitin Tabib | Last Updated : Nov 28, 2021, 04:49 PM IST
  • ಕೊರೊನಾ ವೈರಸ್ ಹೊಸ ರೂಪಾಂತರಿ ವಿಶ್ವಾದ್ಯಂತ ಭಾರಿ ಆತಂಕಕ್ಕೆ ಕಾರಣವಾಗಿದೆ.
  • ಭಾರತದ ಪಾಲಿಗೆ ಇದು ಎಷ್ಟೊಂದು ಅಪಾಯಕಾರಿ, ಭಾರತದಲ್ಲಿನ ಲಸಿಕೆಗಳು ಇದರ ವಿರುದ್ಧ ಎಷ್ಟೊಂದು ಪರಿಣಾಮಕಾರಿಯಾಗಿವೆ?
  • AIIMS ತಜ್ಞರು ಈ ಕುರಿತು ಹೇಳಿದ್ದೇನು? ತಿಳಿಯಲು ವರದಿ ಓದಿ
Omicron Updates: ಭಾರತದ ಪಾಲಿಗೆ Omicron ಎಷ್ಟೊಂದು ಅಪಾಯಕಾರಿ, Vaccine ಎಷ್ಟು ಪರಿಣಾಮಕಾರಿ? AIIMS ವೈದ್ಯರು ಹೇಳಿದ್ದೇನು? title=
Omicron Updates (File Photo)

Omicron Updates - ಕರೋನಾ ವೈರಸ್‌ನ (Codronavirus) ಹೊಸ ರೂಪಾಂತರಿ 'ಓಮಿಕ್ರಾನ್' (Omicron) ಬಗ್ಗೆ ವಿಶ್ವಾದ್ಯಂತ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಭಾರತದಲ್ಲಿ ಸರ್ಕಾರ ಮತ್ತು ವಿವಿಧ ಏಜೆನ್ಸಿಗಳು ಕೂಡ ಅಲರ್ಟ್ ಆಗಿವೆ. ವೈರಸ್‌ನ ಹೊಸ ರೂಪದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ, ದೆಹಲಿಯ ಏಮ್ಸ್‌ನ (AIIMS) 'ಕಮ್ಯೂನಿಟಿ ಮೆಡಿಸಿನ್ ' ವಿಭಾಗದ ಮುಖ್ಯಸ್ಥ ಡಾ. ಸಂಜಯ್ ರೈ (Dr. Sanjay Rai) ಅದಕ್ಕೆ ಸಂಬಂಧಿಸಿದ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಡಾ ಸಂಜಯ್ ರೈ ಆಂಟಿ-ಕೊರೊನಾವೈರಸ್ ಲಸಿಕೆ (Anti-Coronavirus Vaccine) ಪ್ರಯೋಗದ ಮುಖ್ಯ ಸಂಶೋಧಕ  ಕೂಡ ಆಗಿದ್ದಾರೆ. ಓಮಿಕ್ರಾನ್ ಬಗ್ಗೆ ಡಾ.ಸಂಜಯ್ ರೈ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಪ್ರಶ್ನೆ: ಕರೋನಾ ವೈರಸ್‌ನ ಹೊಸ ರೂಪಾಂತರದ ಬಗ್ಗೆ ಬೆಳಕಿಗೆ ಬಂದಿರುವ ಸಂಗತಿಗಳ ಬಗ್ಗೆ ನೀವು ಏನು ಹೇಳುವಿರಿ?
ಉತ್ತರ:
ವೈರಸ್‌ನ ಸ್ವರೂಪ ಬದಲಾಗುತ್ತಲೇ ಇರುತ್ತದೆ. ಇದು ಮೊದಲ ಮತ್ತು ಕೊನೆಯ ರೂಪವಲ್ಲ. ಸಾವಿರಾರು ಬಾರಿ ರೂಪ ಬದಲಾಗುತ್ತಲೆ ಇರುತ್ತದೆ. ಇದುವರೆಗೆ ಬೆಳಕಿಗೆ ಬಂದ ಪುರಾವೆಗಳು ಈ ರೂಪವು ತ್ವರಿತ ಸೋಂಕಿಗೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ. ಇದು ಲಸಿಕೆಗಳನ್ನು ತಟಸ್ಥಗೊಳಿಸಬಹುದು. ಹಾಗಿದ್ದಲ್ಲಿ, ಇದು ಕಳವಳಕಾರಿ ವಿಷಯವಾಗಿದೆ. ಏಕೆಂದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಹೆಚ್ಚಿನ ಜನರು ಲಸಿಕೆಗಳಿಂದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಭಾರತದಲ್ಲಿ ಹೆಚ್ಚಿನ ಜನರು ಸೋಂಕಿನಿಂದ ನೈಸರ್ಗಿಕ ರೋಗನಿರೋಧಕ (Natural Immunity) ಶಕ್ತಿಯನ್ನು ಹೊಂದಿದ್ದಾರೆ.

ಪ್ರಶ್ನೆ: ಹಾಗಾದರೆ ಓಮಿಕ್ರಾನ್ ಭಾರತದ ಪಾಲಿಗೆ ಕಡಿಮೆ ಚಿಂತಾಜನಕ ಎಂದು ಏನು ಪರಿಗಣಿಸಬಹುದೇ?
ಉತ್ತರ:
ಈ ರೂಪವು ನೈಸರ್ಗಿಕ ಪ್ರತಿರಕ್ಷೆಯನ್ನು ತಟಸ್ಥಗೊಳಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಈಗ ನೋಡಬೇಕಾಗಿದೆ? ಇದುವರೆಗೆ ಬಂದ ಎಲ್ಲಾ ರೂಪಾಂತರಿಗಳಿಗೆ  ಈ 'ಪ್ರತಿರೋಧಕ'ತೆಯನ್ನು ತಟಸ್ಥಗೊಳಿಸಲು ಸಾಧ್ಯವಾಗಿಲ್ಲ. ಈ ರೂಪವು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ತಟಸ್ಥಗೊಳಿಸಲು ಸಾಧ್ಯವಾಗದಿದ್ದರೆ, ಭಾರತದ ಹೆಚ್ಚಿನ ಜನರು ಸುರಕ್ಷಿತವಾಗಿರುತ್ತಾರೆ.

ಪ್ರಶ್ನೆ: ಪ್ರಸ್ತುತ, ಭಾರತದಲ್ಲಿ ಎಷ್ಟು ಜನರು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ?
ಉತ್ತರ:
ನನ್ನ ಪ್ರಕಾರ, ದೇಶದ 60 ರಿಂದ 70 ಪ್ರತಿಶತದಷ್ಟು ಜನರು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಶೇ. 68 ರಷ್ಟು ಜನರಲ್ಲಿನ ನೈಸರ್ಗಿಕ ಪ್ರತಿರಕ್ಷೆಯ ಬಗ್ಗೆ ICMR ಮಾತನಾಡಿದೆ. ಡೆಲ್ಟಾ-ಟೈಪ್ ವೈರಸ್ ಸೋಂಕಿನ ನಂತರ ಚೇತರಿಸಿಕೊಂಡವರು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ದೆಹಲಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಜನರು ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಸೆರೋ-ಸರ್ವೆಯಲ್ಲಿ ಬಹಿರಂಗಪಡಿಸಲಾಗಿದೆ.

ಇದನ್ನೂ ಓದಿ-ಓಮಿಕ್ರಾನ್ 'ಎಚ್ಚರಿಕೆಯ ಗಂಟೆ' ಯಾಗಿರಬಹುದು: WHO ವಿಜ್ಞಾನಿ

ಪ್ರಶ್ನೆ: ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಪರಿಗಣಿಸಿದರೆ, ಭಾರತದಲ್ಲಿ ತಯಾರಿಸಲಾದ ಲಸಿಕೆ ಓಮಿಕ್ರಾನ್ ವಿರುದ್ಧ ಎಷ್ಟು ಪರಿಣಾಮಕಾರಿಯಾಗಿದೆ?
ಉತ್ತರ:
ಭಾರತದ ಕೋವಾಕ್ಸಿನ್ ಮತ್ತು ಚೀನಾದ ಲಸಿಕೆ (ಸಿನೋವಾಕ್) ಹೆಚ್ಚು ಪರಿಣಾಮಕಾರಿಯಾಗಿ ಸಾಬೀತಾಗಬಹುದು. ಸೋಂಕಿನ ನಂತರ ದೇಹದಲ್ಲಿ ನೈಸರ್ಗಿಕ ಪ್ರತಿಕಾಯಗಳನ್ನು ಹೇಗೆ ತಯಾರಿಸಲಾಗುತ್ತದೆ, ಅದೇ ರೀತಿಯಲ್ಲಿ ಈ ಎರಡೂ ಲಸಿಕೆಗಳು ಸಹ ಪ್ರತಿಕಾಯಗಳನ್ನು ತಯಾರಿಸುತ್ತವೆ. ಉಳಿದ ಲಸಿಕೆಗಳು 'ಸ್ಪೈಕ್ ಪ್ರೊಟೀನ್' ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸುತ್ತವೆ. 'ಸ್ಪೈಕ್ ಪ್ರೊಟೀನ್' ತುಂಬಾ ಬದಲಾಗಿದ್ದರೆ, ವೈರಸ್ನ ಈ ರೂಪವು ಈ ಲಸಿಕೆಗಳಿಂದ ತಯಾರಿಸಿದ ಪ್ರತಿಕಾಯಗಳನ್ನು ತಟಸ್ಥಗೊಳಿಸುತ್ತದೆ. ಮತ್ತೊಂದೆಡೆ, ಕೋವಾಕ್ಸಿನ್ ಸಂಪೂರ್ಣ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೋಂಕು ಇದ್ದರೆ, ನಂತರ ವ್ಯಕ್ತಿಯು ಗಂಭೀರ ಸ್ಥಿತಿಗೆ ಹೋಗುವುದಿಲ್ಲ. ಆದರೆ, ಈ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ.

ಇದನ್ನೂ ಓದಿ-ಆತಂಕ ಹೆಚ್ಚಿಸುತ್ತಿದೆ 'ಓಮಿಕ್ರಾನ್', ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿದ ಭಾರತ, COVID ನೆಗೆಟಿವ್ ವರದಿ ಕಡ್ಡಾಯ

ಪ್ರಶ್ನೆ: ಓಮಿಕ್ರಾನ್ ಬಗ್ಗೆ ಸರ್ಕಾರ ಮತ್ತು ಜನರ ಮಟ್ಟದಲ್ಲಿ ಏನು ಮಾಡಬೇಕು?
ಉತ್ತರ:
ಸದ್ಯಕ್ಕೆ ಭಯಭೀತರಾಗದಿರುವುದು ಮುಖ್ಯ. ಅನಗತ್ಯ ಭಯಪಡುವ ಅಗತ್ಯವಿಲ್ಲ. ಜಾಗೃತರಾಗಬೇಕು. ಈ ಕೆಲಸ ಸರ್ಕಾರದ ಮಟ್ಟದಲ್ಲಿ ನಡೆಯಬೇಕು. ಇದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಅದರ ಸೋಂಕಿನ ಮಟ್ಟ, ಅದರ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಬೇಕು. ಜನರು ಕೊರೊನೊ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

ಇದನ್ನೂ ಓದಿ-ರೂಪ ಬದಲಿಸುವ ಮೂಲಕ ವಿನಾಶವನ್ನುಂಟು ಮಾಡುತ್ತಿರುವ ಕೊರೊನಾ ವೈರಸ್!: ಕೇಂದ್ರದ ಸಿದ್ಧತೆ ಹೇಗಿದೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News