Inverter Led Bulb Price: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಟೆನ್ಷನ್ ನಿಂದ ಮುಕ್ತರಾಗಿ, ವಿದ್ಯುತ್ ಇಲ್ಲದೆಯೇ ಮನೆಯಲ್ಲಿ ಈ ರೀತಿ ಬೆಳಕು ಬೆಳಗಿ!

Inverter Led Bulb Price:ಬೇಸಿಗೆ ಕಾಲದಲ್ಲಿ ನದಿಗಳ ನೀರು ಬತ್ತಿ ಹೋಗುವ ಕಾರಣ ಆಗ್ಗಾಗೆ ವಿದ್ಯುತ್ ಅಭಾವ ತಲೆದೂರಿ ಮನೆಗಳಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಹೆಚ್ಚಾಗುತ್ತದೆ. ನೀವೂ ಕೂಡ ವಿದ್ಯುತ್ ಕಡಿತದ ಸಮಸ್ಯೆಯಿಂದ ಕಂಗೆಟ್ಟಿದ್ದರೇ, ಇಲ್ಲಿ ನಾವು ನಿಮಗಾಗಿ ತಂದಿದ್ದೇವೆ ಒಂದು ವಿಶಿಷ್ಟ ರೀತಿಯ ಬಲ್ಬ್, ಇದು ವಿದ್ಯುತ್ ಕಡಿತದ ಸಂದರ್ಭಗಳಲ್ಲಿಯೂ ಕೂಡ ನಿಮ್ಮ ಮನೆಯನ್ನು ಬೆಳಗುತ್ತದೆ.  

Written by - Nitin Tabib | Last Updated : Apr 22, 2023, 07:12 PM IST
  • ಈ ಅದ್ಭುತ ತಂತ್ರಜ್ಞಾನದ ರೇಚಾರ್ಜೆಬಲ್ ಬಲ್ಬ್ ಇನ್ವರ್ಟರ್‌ನಂತೆ ಕಾರ್ಯನಿರ್ವಹಿಸುತ್ತದೆ,
  • ಇದು ವಿದ್ಯುತ್ ಇರುವಾಗ ತನ್ನಷ್ಟಕ್ಕೆ ತಾನೇ ಚಾರ್ಜ್ ಆಗುತ್ತದೆ,
  • ವಿದ್ಯುತ್ ಆಫ್ ಆದಾಗ ಅದು ಮನೆಯನ್ನು ಬೆಳಗಿಸುತ್ತದೆ.
Inverter Led Bulb Price: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಟೆನ್ಷನ್ ನಿಂದ ಮುಕ್ತರಾಗಿ, ವಿದ್ಯುತ್ ಇಲ್ಲದೆಯೇ ಮನೆಯಲ್ಲಿ ಈ ರೀತಿ ಬೆಳಕು ಬೆಳಗಿ! title=

Rechargeable Led Bulb: ಬೇಸಿಗೆಯಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ವೇಳೆ ಮನೆಯಲ್ಲಿ ಕತ್ತಲೆ ಆವರಿಸಿ ಹೆಚ್ಚಿನ ತೊಂದರೆಯಾಗುತ್ತದೆ. ನಿಮ್ಮ ಮನೆಯಲ್ಲಿ ಇನ್ವರ್ಟರ್ ಇಲ್ಲದೇ ಇದ್ದರೆ ಕರೆಂಟ್ ಹೋದ ಮೇಲೂ ಮನೆ ಬೆಳಗುವಂತೆ ಮಾಡುವ ಒಂದು ವಿಶಿಷ್ಟ ರೀತಿಯ ಬಲ್ಬ್ ಮಾರುಕಟ್ಟೆಗೆ ಬಂದಿದೆ. ಈ ಬಲ್ಬ್ ಅನ್ನು ಮನೆಯಲ್ಲಿ ಅಳವಡಿಸಿದ ನಂತರ, ನೀವು ಕತ್ತಲೆಗೆ ಹೆದರುವುದಿಲ್ಲ. ಈ ರೇಚಾರ್ಜ್ ಮಾಡಬಹುದಾದ ಬಲ್ಬ್ ಗಳು ಅನೇಕ ಕಂಪನಿಗಳಲ್ಲಿ ತಯಾರಾಗುತ್ತಿವೆ. ಬೆಳಕು ಆನ್ ಆಗಿರುವಾಗ ಅದು ಸ್ವತಃ ಚಾರ್ಜ್ ಆಗುತ್ತದೆ ಮತ್ತು ಪೂರ್ಣ ಚಾರ್ಜ್ ಆದ ಬಳಿಕ ಕರೆಂಟ್ ಹೋದ ಬಳಿಕವೂ  ಕೂಡ ಅದು 3 ರಿಂದ 5 ಗಂಟೆಗಳವರೆಗೆ ಬೆಳಗು ನೀಡುತ್ತದೆ. ನೀವು ಇಂತಹ ಬಲ್ಬ್ ಗಳನ್ನು ಆನ್‌ಲೈನ್‌ನಲ್ಲಿಯೂ ಆರ್ಡರ್ ಮಾಡಬಹುದು. ಇದನ್ನು Amazon-Flipkart ಅಥವಾ ಇತರ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಸುಲಭವಾಗಿ ಖರೀದಿಸಬಹುದು.

ಇದನ್ನೂ ಓದಿ-Girls Behaviour On Google: ವಿವಾಹಕ್ಕೂ ಮುನ್ನ ಗೂಗಲ್ ನಲ್ಲಿ ಹುಡ್ಗೀರು ಸರ್ಚ್ ಮಾಡುವುದು ಏನು ಗೊತ್ತಾ?

ಇದು ಹೇಗೆ ಕೆಲಸ ಮಾಡುತ್ತದೆ?
ಈ ಅದ್ಭುತ ತಂತ್ರಜ್ಞಾನದ ರೇಚಾರ್ಜೆಬಲ್ ಬಲ್ಬ್ ಇನ್ವರ್ಟರ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದು ವಿದ್ಯುತ್ ಇರುವಾಗ ತನ್ನಷ್ಟಕ್ಕೆ ತಾನೇ ಚಾರ್ಜ್ ಆಗುತ್ತದೆ, ವಿದ್ಯುತ್ ಆಫ್ ಆದಾಗ ಅದು ಮನೆಯನ್ನು ಬೆಳಗಿಸುತ್ತದೆ. ಇದರ ಬೆಲೆ ಸುಮಾರು 300 ರೂಪಾಯಿಗಳಿಂದ 1000 ರೂಪಾಯಿಗಳವರೆಗೆ ಇರಬಹುದು. ಅದರ ಬೆಲೆ ಬ್ರ್ಯಾಂಡ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಸಾಧನದ ವಿಶೇಷತೆಯೆಂದರೆ ನಿಮಗೆ ಓವರ್‌ಚಾರ್ಜಿಂಗ್ ರಕ್ಷಣೆಯನ್ನು ಇದು ನೀಡುತ್ತದೆ ಮತ್ತು ಅದರ ಬ್ಯಾಟರಿಯು ಬಲ್ಬ್‌ನೊಳಗೆ ಅಂತರ್ಗತವಾಗಿರುತ್ತದೆ.

ಇದನ್ನೂ ಓದಿ-Vastu Tips: ಮೊಬೈಲ್ ವಾಲ್ ಪೇಪರ್ ನಲ್ಲಡಗಿದೆ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ!

ಈ ರೀತಿಯ ಮೌಲ್ಯವನ್ನು ಅರ್ಥಮಾಡಿಕೊಳ್ಳಿ
ನೀವು ಮಾರುಕಟ್ಟೆಯಲ್ಲಿ ಸುಮಾರು ರೂ.998 ಕ್ಕೆ ಹ್ಯಾಲೊನಿಕ್ಸ್ ರೇಚಾರ್ಜೆಬಲ್  ಮಾಡಬಹುದಾದ ತುರ್ತು ಇನ್ವರ್ಟರ್ ಲೆಡ್ ಬಲ್ಬ್ (9W) ಅನ್ನು ಖರೀದಿಸುತ್ತಿದ್ದರೆ. ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಅವುಗಳನ್ನು ರಿಯಾಯಿತಿಯೊಂದಿಗೆ ಖರೀದಿಸಬಹುದು, ಇದು ನಿಮಗೆ ರೂ.552 ವರೆಗೆ ವೆಚ್ಚವಾಗುತ್ತದೆ. ನೀವು ಸಾಮಾನ್ಯವಾಗಿ 10W ಸ್ಟರ್ಲೈಟ್ ಇನ್ವರ್ಟರ್ ಬಲ್ಬ್ ಅನ್ನು ರೂ.880 ಕ್ಕೆ ಪಡೆಯಬಹುದು, ಆದರೆ ನೀವು ಅದನ್ನು ರೂ.515 ಕ್ಕೆ ರಿಯಾಯಿತಿಯೊಂದಿಗೆ ಸಹ ಆನ್ಲೈನ್ ನಲ್ಲಿ ಖರೀದಿಸಬಹುದು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಅದು ನಿಮಗೆ 4 ಗಂಟೆಗಳ ಪ್ರಚಂಡ ಬ್ಯಾಕಪ್ ನೀಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News