ಅಮೆಜಾನ್ನಲ್ಲಿ ನೋಕಿಯಾ ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಕೊಡುಗೆ : ಅಮೆಜಾನ್ ಪ್ರತಿದಿನ ಡೀಲ್ ಆಫ್ ದಿ ಡೇ ಅನ್ನು ಹೊರತರುತ್ತದೆ. ಇದರಲ್ಲಿ ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ಲಭ್ಯವಾಗುತ್ತದೆ. ಇಂದು ಅಮೆಜಾನ್ ನೋಕಿಯಾ ಸ್ಮಾರ್ಟ್ಫೋನ್ಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಹೊಸ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇದು ಸುವರ್ಣಾವಕಾಶವಾಗಿದೆ.
ಅಮೆಜಾನ್ನಲ್ಲಿ ಪ್ರಬಲ ಬ್ಯಾಟರಿಯೊಂದಿಗೆ ಲಭ್ಯವಿರುವ ನೋಕಿಯಾ ಸಿ21 ಪ್ಲಸ್ ಫೋನಿನ ಮೇಲೆ ಉತ್ತಮ ಕೊಡುಗೆ ಲಭ್ಯವಾಗುತ್ತಿದೆ. ಕಂಪನಿಯು ಈ ಫೋನ್ ಫುಲ್ ಚಾರ್ಜ್ನಲ್ಲಿ 3 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಈ ಫೋನ್ ಅನ್ನು ಅಮೆಜಾನ್ನಿಂದ ಕೇವಲ 599 ರೂಪಾಯಿಗೆ ಖರೀದಿಸಬಹುದು.
ನೋಕಿಯಾ ಸಿ21 ಪ್ಲಸ್ ಕೊಡುಗೆಗಳು:
ನೋಕಿಯಾ ಸಿ21 ಪ್ಲಸ್ ಬಿಡುಗಡೆ ಬೆಲೆ 12,999 ರೂ. ಆದರೆ, ಅಮೆಜಾನ್ನಲ್ಲಿ ಈ ಸ್ಮಾರ್ಟ್ಫೋನ್ 11,299 ರೂ.ಗಳಿಗೆ ಲಭ್ಯವಿದೆ. ಫೋನ್ ಮೇಲೆ 1,700 ರೂ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ಬ್ಯಾಂಕ್ ಆಫರ್ ಮತ್ತು ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ.
ಇದನ್ನೂ ಓದಿ- ಹತ್ತು ಸಾವಿರದೊಳಗೆ ಅತ್ಯುತ್ತಮ ಸ್ಮಾರ್ಟ್ಫೋನ್ ಪರಿಚಯಿಸಿದ ವಿವೋ
ನೋಕಿಯಾ ಸಿ21 ಪ್ಲಸ್ ಬ್ಯಾಂಕ್ ಆಫರ್:
ನೋಕಿಯಾ ಸಿ21 ಪ್ಲಸ್ ಫೋನ್ ಖರೀದಿಯಲ್ಲಿ ನಿಮಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ನೀವು ಫೋನ್ ಖರೀದಿಸುವಾಗ ಸಿಟಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಡ್ನೊಂದಿಗೆ ಪಾವತಿಸಿದರೆ ಇದರಲ್ಲಿ ಒಂದು ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಕೂಡ ಲಭ್ಯವಿದೆ.
ನೋಕಿಯಾ ಸಿ21 ಪ್ಲಸ್ ಎಕ್ಸ್ಚೇಂಜ್ ಆಫರ್:
ನೋಕಿಯಾ ಸಿ21 ಪ್ಲಸ್ ಸ್ಮಾರ್ಟ್ಫೋನ್ ಮೇಲೆ 10,700 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ನೀವು ಹಳೆಯ ಸ್ಮಾರ್ಟ್ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನಿಮಗೆ ಈ ಫೋನ್ ತುಂಬಾ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಆದರೆ ನಿಮ್ಮ ಹಳೆಯ ಫೋನ್ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಲೇಟೆಸ್ಟ್ ಆಗಿದ್ದರೆ ಮಾತ್ರ 10,700 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ನೀವು ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಈ ಫೋನ್ ಅನ್ನು ಕೇವಲ 599 ರೂ. ಗಳಿಗೆ ಖರೀದಿಸಬಹುದಾಗಿದೆ.
ಇದನ್ನೂ ಓದಿ- ನೀವು ಆನ್ಲೈನ್ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ
ನೋಕಿಯಾ ಸಿ21 ಪ್ಲಸ್ ಫೋನಿನ ವಿಶೇಷಣಗಳು:
ನೋಕಿಯಾ ಸಿ21 ಪ್ಲಸ್ ಫೋನ್ 6.517-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು ಅದು 2.5D ಕವರ್ ಗ್ಲಾಸ್ನೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ ಅನ್ನು 20: 9 ಆಕಾರ ಅನುಪಾತ ಮತ್ತು 720 x 1600 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ಆಕ್ಟಾ-ಕೋರ್ ಯುನಿಸೊಕ್ SC9863A ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬ್ಲೂಟೂತ್ 4.2 ಸಂಪರ್ಕ, 3.5 ಎಂಎಂ ಆಡಿಯೊ ಜಾಕ್, ಮೈಕ್ರೋ ಯುಎಸ್ಬಿ ಪೋರ್ಟ್ ಮತ್ತು ಯುಎಸ್ಬಿ 2.0 ಪೋರ್ಟ್ ಹೊಂದಿದೆ.
ನೋಕಿಯಾ ಸಿ21 ಪ್ಲಸ್ ಕ್ಯಾಮರಾ ಮತ್ತು ಬ್ಯಾಟರಿ:
ನೋಕಿಯಾ ಸಿ21 ಪ್ಲಸ್ ಸ್ಮಾರ್ಟ್ಫೋನ್ನಲ್ಲಿ 13MP ಪ್ರಾಥಮಿಕ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು ತೆಗೆಯಲಾಗದ ಬ್ಯಾಟರಿ ಅನ್ನು ಹೊಂದಿದ್ದು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಮೂರು ದಿನಗಳವರೆಗೆ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.