ನವದೆಹಲಿ: Nokia G20 Specifications - ನೋಕಿಯಾ ಕಂಪನಿಯ ಹೊಸ ಸ್ಮಾರ್ಟ್ ಫೋನ್ NOKIA G20 ಬಿಡುಗಡೆಯಾಗಿದೆ (Nokia New Phone). ಇದನ್ನು ನೀವು ಜುಲೈ 25ರಿಂದ ಅಮೆಜಾನ್ ಮೇಲೆ ಖರೀದಿಸಬಹುದು. ಈಗಾಗಲೇ ಈ ಫೋನ್ ನ ಪ್ರಿ ಬುಕ್ಕಿಂಗ್ ಆರಂಭಗೊಂಡಿದೆ. ಒಂದು ವೇಳೆ ನೀವೂ ಕೂಡ ಈ ಸ್ಮಾರ್ಟ್ ಫೋನ್ ಅನ್ನು ಮುಂಚಿತವಾಗಿ ಕಾಯ್ದಿರಿಸಿದರೆ (Nokia G20 Pre Booking), ನೀವು ರೂ.2100 ಉಳಿತಾಯ ಮಾಡಬಹುದು. ಅಂದರೆ ಮುಂಚಿತವಾಗಿ ಕಾಯ್ದಿರಿಸುವ ಮೂಲಕ ನೀವು ಈ ಫೋನ್ ಅನ್ನು ಎರಡು ಸಾವಿರ ಕಮ್ಮಿ ಬೆಲೆಗೆ ಖರೀದಿಸಬಹುದು.
ಈ ಫೋನ್ ಬೆಲೆಯ ಕುರಿತು ಹೇಳುವುದಾದರೆ, ಇದನ್ನು ನೀವು 12, 990 ರೂ.ಗಳಿಗೆ ಖರೀದಿಸಬಹುದು (Nokia G20 Price). ಪ್ರಿ ಬುಕ್ಕಿಂಗ್ ಮಾಡಿದರೆ ಈ ಫೋನ್ ನಿಮಗೆ ಇನ್ನೂ ಅಗ್ಗದ ಬೆಲೆಯಲ್ಲಿ ಸಿಗಲಿದೆ. ನೋಕಿಯಾ ಪಾವರ್ ಇಯರ್ ಬಡ್ ಲೈಟ್ ಖರೀದಿಸಿದಾಗ ನೀವು MUSICG20 ಕೋಡ್ ಪಡೆಯುವಾಗ ರೂ.2099 ಉಳಿತಾಯ ಮಾಡಬಹುದು.
ಇದನ್ನೂ ಓದಿ- Wi-Fi Password ಮರೆತಿರುವಿರಾ? ಈ ಸಿಂಪಲ್ ಟಿಪ್ಸ್ ಬಳಸಿ ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಿರಿ
ಎರಡು ಬಣ್ಣದ ಆಯ್ಕೆಗಳಲ್ಲಿ ಈ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಾಗಿದೆ (Nokia G20 Specifications)
NOKIA G20ಯನ್ನು ಒಟ್ಟು ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಬ್ಲೂ ಹಾಗೂ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಈ ಫೋನ್ ಬೆಲೆಯನ್ನು ರೂ.12,990 ನಿಗದಿಪಡಿಸಲಾಗಿದೆ. ಇದರ ಕ್ಯಾಮೆರಾ ಪ್ರೈಮರಿ ಲೆನ್ಸ್ 48 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿದೆ. ಇತರ ಲೆನ್ಸ್ ಗಳು 2-2 MP ಹಾಗೂ ನಾಲ್ಕನೇ ಲೆನ್ಸ್ 8MP ಅಲ್ಟ್ರಾ ವೈಡ್ ಆಂಗಲ್ ಗಾಗಿ ನೀಡಲಾಗಿದೆ. ಇನ್ನೊಂದೆಡೆ ಈ ಸ್ಮಾರ್ಟ್ ಫೋನ್ 8 MP ಸಾಮರ್ಥ್ಯದ ಸೇಲ್ಫಿ ಕ್ಯಾಮರಾ ಹೊಂದಿದೆ. ಈ ಫೋನ್ ಸುಮಾರು 6.5 ಇಂಚಿನ ದೊಡ್ಡ HD+ IPS ಡಿಸ್ಪ್ಲೇ ಇರುವ ಸ್ಕ್ರೀನ್ ಹೊಂದಿದೆ. ಈ ಸ್ಮಾರ್ಟ್ ಫೋನ್ ಜೋತೆಗೆ ನಿಮಗೆ ಮೂರು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಕೂಡ ಸಿಗಲಿದೆ.
ಇದನ್ನೂ ಓದಿ-Alert! ಇಂದು ಅಥವಾ ನಾಳೆ ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ, ಪರಿಣಾಮ ತಿಳಿಯಲು ವರದಿ ಓದಿ
5050mAh ಬ್ಯಾಟರಿ ಕೂಡ ಇದೆ
ಸಾಮಾನ್ಯವಾಗಿ ನೋಕಿಯಾ (Smartphone) ಅತ್ಯಂತ ಪವರ್ಪುಲ್ ಬ್ಯಾಟರಿ ಹೊಂದಿರುವ ಫೋನ್ ಎಂದು ಹೇಳಲಾಗುತ್ತದೆ. ತನ್ನ ವಿಶಿಷ್ಟ ಬ್ಯಾಟರಿ ಕಾರಣವೆ ಈ ಫೋನ್ ಹೆಡ್ಲೈನ್ ಗಿಟ್ಟಿಸುತ್ತದೆ. ಕಂಪನಿಯ ಹೇಳಿಕೆ ಪ್ರಕಾರ NOKIA G20 ಬ್ಯಾಟರಿ ಒಂದು ಬಾರಿ ಚಾರ್ಜ್ ಗೆ ಸತತ ಮೂರು ದಿನಗಳವೆರೆಗೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಇದರಲ್ಲಿ ಚಾರ್ಜಿಂಗ್ ಗಾಗಿ ನಿಮಗೆ ಟೈಪ್ ಸಿ ಪೋರ್ಟ್ ಸಿಗಲಿದೆ. ಈ ಫೋನ್ ಅನ್ನು ಕೇವಲ 4ಜಿಬಿ RAM ಹಾಗೂ 64GB ಸ್ಟೋರೇಜ್ ಸಾಮರ್ಥ್ಯದ ಒಂದೇ ವೇರಿಯಂಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ- Twitter Grievance Officer: ಭಾರತದಲ್ಲಿ ಕುಂದುಕೊರತೆ ನಿರ್ವಹಣಾ ಅಧಿಕಾರಿಯನ್ನು ನೇಮಕ ಮಾಡಿದ Twitter
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.