ಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದು

Best Portable AC : ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಪೋರ್ಟಬಲ್ ಎಸಿಗಳನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಅನೇಕ ಹೆಸರಾಂತ ಕಂಪನಿಗಳೂ ಸೇರಿವೆ.ಲಾಯ್ಡ್ ಮತ್ತು ಬ್ಲೂ ಸ್ಟಾರ್ ನಂತಹ ಕಂಪನಿಗಳೂ ಇದರಲ್ಲಿವೆ.   

Written by - Ranjitha R K | Last Updated : Apr 19, 2024, 11:26 AM IST
  • ಮಾರುಕಟ್ಟೆಗೆ ಬಂದಿದೆ ಪೋರ್ಟಬಲ್ ಎಸಿ
  • ಕಡಿಮೆ ಬೆಲೆಗೆ ಸಿಗುತ್ತಿದೆ ಪೋರ್ಟಬಲ್ ಎಸಿ
  • ಹೆಸರಾಂತ ಕಂಪನಿಗಳೂ ಮಾರಾಟ ಮಾಡುತ್ತಿವೆ ಪೋರ್ಟಬಲ್ ಎಸಿ
ಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದು  title=

Portable AC : ಬೇಸಿಗೆ ಕಾಲ ಬಂದಾಗಿದೆ. ಎಲ್ಲಾ ಮನೆ, ಕಚೇರಿಗಳಲ್ಲಿ  ಎಸಿ ಆನ್ ಆಗಿದೆ. ಆದರೆ ಪೋರ್ಟಬಲ್ ಎಸಿ ಬಗ್ಗೆ ನೀವೇನಾದರೂ ಯೋಚಿಸುತ್ತಿದ್ದರೆ ಮಾರುಕಟ್ಟೆಗೆ ಹೊಸ ಆಯ್ಕೆ ಬಂದಿದೆ. ಈ ಹೊಸ ಎಸಿಯನ್ನು ಒಂದೇ ಕಡೆ ಫಿಕ್ಷ ಮಾಡುವ ಅಗತ್ಯ ಇಲ್ಲ. ಗೋಡೆಗೆ ನೇತು ಹಾಕುವ ಅಗತ್ಯವೂ ಇಲ್ಲ. ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಇದನ್ನು ಇರಿಸಬಹುದು. ಕಡಿಮೆ ಬೆಲೆಗೆ ಸಿಗುವ ಬಳಕೆಗೂ ಸುಲಭವಾಗಿರುವ ಈ ಪೋರ್ಟಬಲ್ ಎಸಿ ಬಹಳ ಭಿನ್ನವಾಗಿದೆ. ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಪೋರ್ಟಬಲ್ ಎಸಿಗಳನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಅನೇಕ ಹೆಸರಾಂತ ಕಂಪನಿಗಳೂ ಸೇರಿವೆ.ಲಾಯ್ಡ್ ಮತ್ತು ಬ್ಲೂ ಸ್ಟಾರ್ ನಂತಹ ಕಂಪನಿಗಳೂ ಇದರಲ್ಲಿವೆ. 

ಲಾಯ್ಡ್ 1 ಟನ್ 3 ಸ್ಟಾರ್ ಪೋರ್ಟಬಲ್ ಎಸಿ : 
Lloyd 1 Ton 3 Star Portable ACಯನ್ನು ಫ್ಲಿಪ್‌ಕಾರ್ಟ್‌ನಿಂದ  39,990 ರೂಪಾಯಿಗೆ ಖರೀದಿಸಬಹುದು.ಇದರಲ್ಲಿ ಅನೇಕ ಬ್ಯಾಂಕ್ ಆಫರ್ ಗಳು ಕೂಡಾ ಸಿಗುತ್ತವೆ. ಇಲ್ಲಿ ಫಾಸ್ಟ್ ಡೆಲಿವೆರಿ ಆಯ್ಕೆ ಕೂಡಾ ಇದೆ.ಈ AC ಜೊತೆಗೆ 1 ವರ್ಷದ ವಾರಂಟಿ ಕೂಡಾ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ  ಪಾವತಿಸುವುದಾದರೆ  ಇಫ್ದರ ಖರೀದಿ ಮೇಲೆ ರಿಯಾಯಿತಿ ಕೂಡಾ ಸಿಗುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಇದು ಶೇ. 15ರಷ್ಟು ಕಡಿಮೆ ವಿದ್ಯುತ್ ಬಳಸುತ್ತದೆ ಎನ್ನುವುದು    ಕಂಪನಿಯಾ ಮಾತು. 

ಇದನ್ನೂ ಓದಿ : ಬಿರು ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಇಂದೇ ತನ್ನಿ ಕೂಲರ್ ಫ್ಯಾನ್

ಕ್ರೋಮಾ 1.5 ಟನ್ ಪೋರ್ಟಬಲ್ ಎಸಿ : 
ಕ್ರೋಮಾ 1.5 ಟನ್ ಪೋರ್ಟಬಲ್ ಎಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.ಕ್ರೋಮಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕವೂ ಇದನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ 43,990 ರೂ.  ಇದರ ವಿನ್ಯಾಸ ಕೂಡಾ ಸಾಕಷ್ಟು ಅದ್ಭುತವಾಗಿದೆ.

ಬ್ಲೂ ಸ್ಟಾರ್ 1 ಟನ್ ಪೋರ್ಟಬಲ್ ಎಸಿ: 
ಬ್ಲೂ ಸ್ಟಾರ್ 1 ಟನ್ ಪೋರ್ಟಬಲ್ ಎಸಿ  ಉತ್ತಮ ಕೂಲಿಂಗ್ ನೀಡುತ್ತದೆ. ಅದರ ಬೆಲೆ 39,000 ರೂಪಾಯಿ. ಅದನ್ನು ಆನ್‌ಲೈನ್‌ನಲ್ಲಿ 33,990 ರೂಪಾಯಿಗೆ ಖರೀದಿಸಬಹುದು. ಇದರಿಂದ ವಿದ್ಯುತ್ ಉಳಿತಾಯವೂ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಎಲ್ಲಿಗೆ ಬೇಕಾದರೂ  ಸುಲಭವಾಗಿ ಸಾಗಿಸಬಹುದು.

ಇದನ್ನೂ ಓದಿ : ಯಮಹಾ Aerox S: ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಈ ಸ್ಕೂಟರ್ ಚಾಲನೆಗೆ ಕೀ ಅಗತ್ಯವೇ ಇಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News