ಕೊಚ್ಚಿ: ಅಂಡಮಾನ್ ಮತ್ತು ನಿಕೋಬಾರ್ ಮತ್ತು ಈಶಾನ್ಯ ಭಾರತದಲ್ಲಿ ಮರಗಳ ಮೇಲೆ ವಾಸಿಸುವ ಹೊಸ ಪ್ರಜಾತಿಯ ಕಪ್ಪೆಗಳು ಪತ್ತೆಯಾಗಿವೆ. ಸಂಶೋಧಕರು ಗುರುವಾರ ಈ ಮಾಹಿತಿಯನ್ನು ನೀಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ (Delhi University) ಪ್ರೊಫೆಸರ್ ಎಸ್‌ಡಿ ಬಿಜು ನೇತೃತ್ವದಲ್ಲಿ ಭಾರತ, ಚೀನಾ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ನ ಸಂಶೋಧಕರ ತಂಡವೊಂದು ಈ ಮಾಹಿತಿ ನೀಡಿದ್ದು, ಭಾರತದ ಅಂಡಮಾನ್ ದ್ವೀಪಗಳಲ್ಲಿ ರೋಹಾನಿಕ್ಸೊಲಸ್ ಎಂಬ ಮರದ ಕಪ್ಪೆ ಪ್ರಭೇದ ಪತ್ತೆಯಾಗಿದೆ.
ಇದನ್ನು ಓದಿ- ಸೌರ ಮಂಡಲದ ಈ ಗ್ರಹದಲ್ಲಿ ಕಾಣಿಸಿಕೊಂಡ ಮಿಂಚಿನಿಂದ ಕೂಡಿದ ಬಿರುಗಾಳಿ, ಇಲ್ಲಿವೆ photos
ಶ್ರೀಲಂಕಾದ ಪ್ರಾಣಿಶಾಸ್ತ್ರಜ್ಞ ರೋಹನ್ ಪೆಥಿಯಾಗೋಡ ಅವರ ಹೆಸರನ್ನು ಆಧರಿಸಿ ಈ ಹೆಸರನ್ನು ಇಡಲಾಗಿದೆ. ಅಂತರಾಷ್ಟ್ರೀಯ ಜರ್ನಲ್ ಆಫ್ ಬಯಾಲಜಿ 'ಜುಟಾಕ್ಸ'ದ ಪ್ರಸ್ತುತ ಸಂಚಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು, "ಅಂಡಮಾನ್‌ನ ಉಭಯಚರಗಳನ್ನು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಸಮೀಕ್ಷೆ ಮಾಡಲಾಗಿದೆ ಆದರೆ ಈ ದ್ವೀಪಗಳಲ್ಲಿ ರಾಕ್‌ಫರಾಯ್ಡ್ ಕುಟುಂಬವನ್ನು ಇನ್ನೂ ಪತ್ತೆ ಮಾಡಲಾಗಿಲ್ಲ" ಎಂದು ಅಧ್ಯಯನ ಹೇಳಿದೆ.
ಇದನ್ನು ಓದಿ- ವಿಜ್ಞಾನಿಗಳು ಕಂಡು ಹಿಡಿದ ಆ ಹೊಸ ನಕ್ಷತ್ರ ಯಾವುದು ಗೊತ್ತೇ ?
'ಆದರೆ ಆಶ್ಚರ್ಯಕರವಾಗಿ, ಮರಗಳ ಮೇಲೆ ವಾಸಿಸುವ ಕಪ್ಪೆಯ ಪ್ರಭೇದವು ಉತ್ತರ ಮತ್ತು ಮಧ್ಯ ಅಂಡಮಾನ್ ಮತ್ತು ನಿಕೋಬಾರ್‌ಗಳಲ್ಲಿ ಸಾಮಾನ್ಯವಾಗಿವೆ' ಅಂಡಮಾನ್ ದ್ವೀಪಗಳಲ್ಲಿನ ಮರಗಳ ಮೇಲೆ ಕಂಡುಬರುವ ಕಪ್ಪೆ ಅನಿರೀಕ್ಷಿತ ಮತ್ತು ಭಾರತದಂತಹ ದೊಡ್ಡ, ವೈವಿಧ್ಯಮಯ ದೇಶದಲ್ಲಿ ಸೂಕ್ತ ದಾಖಲಾತಿಗಾಗಿ ಜಲಚರಗಳನ್ನು ಸಮೀಕ್ಷೆ ಮಾಡುವ ಮತ್ತು ತನಿಖೆ ಮಾಡುವ ಮಹತ್ವವನ್ನು ಇದು ಮತ್ತೊಮ್ಮೆ ಒತ್ತಿಹೇಳುತ್ತದೆ ಎಂದು ಅಧ್ಯಯನ ಹೇಳಿದೆ.