JioBharat phone: ಕೇವಲ 999 ರೂ.ಗೆ ರಿಲಯನ್ಸ್ ಜಿಯೋ 4G ಮೊಬೈಲ್

JioBharat phone: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸೋಮವಾರ ಜಿಯೋಭಾರತ್ ಫೋನ್ ಅನ್ನು ಕೇವಲ 999 ರೂ.ಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೊದಲ 1 ಮಿಲಿಯನ್ ಜಿಯೋಭಾರತ್ ಫೋನ್‌ಗಳ ಬೀಟಾ ಪ್ರಯೋಗ ಜುಲೈ 7ರಂದು ಪ್ರಾರಂಭವಾಗುತ್ತದೆ.

Written by - Puttaraj K Alur | Last Updated : Jul 3, 2023, 10:23 PM IST
  • ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋದಿಂದ ಕಡಿಮೆ ಬೆಲೆಯ ಹೊಸ ಫೋನ್ ರಿಲೀಸ್
  • ಕೇವಲ 999 ರೂ.ಗೆ ದೇಶದ ಜನರಿಗೆ ಸಿಗಲಿದೆ ಜಿಯೋಭಾರತ್ 4G ಫೋನ್
  • ಮೊದಲ 1 ಮಿಲಿಯನ್ ಜಿಯೋಭಾರತ್ ಫೋನ್‌ಗಳ ಬೀಟಾ ಪ್ರಯೋಗ ಜುಲೈ 7ರಂದು ಪ್ರಾರಂಭ
JioBharat phone: ಕೇವಲ 999 ರೂ.ಗೆ ರಿಲಯನ್ಸ್ ಜಿಯೋ 4G ಮೊಬೈಲ್ title=
ಜಿಯೋಭಾರತ್ 4G ಫೋನ್  

ನವದೆಹಲಿ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕೇವಲ 999 ರೂ.ಗೆ ಜಿಯೋಭಾರತ್ ಫೋನ್ ಬಿಡುಗಡೆ ಮಾಡುವುದಾಗಿ ಸೋಮವಾರ ಘೋಷಿಸಿದೆ. ಮೊದಲ 1 ಮಿಲಿಯನ್ ಜಿಯೋಭಾರತ್ ಫೋನ್‌ಗಳ ಬೀಟಾ ಪ್ರಯೋಗವು ಜುಲೈ 7ರಂದು ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

6 ವರ್ಷಗಳ ಹಿಂದೆ Jioವನ್ನು ಪ್ರಾರಂಭಿಸಿದಾಗ ಎಲ್ಲರಿಗೂ ಇಂಟರ್ನೆಟ್ ತಲುಪಿಸಲು ಮತ್ತು ಪ್ರತಿಯೊಬ್ಬ ಭಾರತೀಯರಿಗೂ ತಂತ್ರಜ್ಞಾನದ ಪ್ರಯೋಜನ ಒದಗಿಸಲು ಜಿಯೋ ಅವಕಾಶ ಮಾಡಿಕೊಡುವುದಾಗಿ ನಾವು ಸ್ಪಷ್ಟಪಡಿಸಿದ್ದೇವೆ. ತಂತ್ರಜ್ಞಾನವು ಇನ್ನು ಮುಂದೆ ಆಯ್ದ ಕೆಲವರಿಗೆ ಮಾತ್ರ  ಸವಲತ್ತುಗಳಾಗಿ ಉಳಿಯುವುದಿಲ್ಲವೆಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಟೊಮೇಟೊ ಬೆಲೆ ಮುಗಿಲು ಮುಟ್ಟಲು ಇದೇ ಕಾರಣ! ಮತ್ತೆ ದರ ಇಳಿಕೆ ಯಾವಾಗ ?

ಈ ಹೊಸ ಸಾಧನವು ಅದರ ಹಿಂದಿನ ಜಿಯೋಫೋನ್‌ನಂತೆಯೇ, ಜಿಯೋ ಸಿನಿಮಾ ಮತ್ತು ಜಿಯೋ ಸಾವನ್‌ನೊಂದಿಗೆ ಒಟಿಟಿ ಸೇವೆಯನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಹೈ-ಡೆಫಿನಿಷನ್ ಕರೆ, ಕ್ಯಾಮೆರಾ ಸಾಮರ್ಥ್ಯಗಳು ಮತ್ತು ಜಿಯೋಪೇ ಸೇವೆಯನ್ನು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಬಳಸಿಕೊಂಡು ಪಾವತಿಸುವ ವ್ಯವಸ್ಥೆಯನ್ನು ಹೊಂದಿರಲಿದೆ.

ರಿಲಯನ್ಸ್ ರಿಟೇಲ್ ಜೊತೆಗೆ ಇತರ ಫೋನ್ ಬ್ರ್ಯಾಂಡ್‌ಗಳು (ಕಾರ್ಬನ್‌ನಿಂದ ಪ್ರಾರಂಭಿಸಿ), ‘ಜಿಯೋ ಭಾರತ್ ಫೋನ್‌’ಗಳನ್ನು ನಿರ್ಮಿಸಲು ‘ಜಿಯೋ ಭಾರತ್ ಪ್ಲಾಟ್‌ಫಾರ್ಮ್’ನ್ನು ಅಳವಡಿಸಿಕೊಳ್ಳುತ್ತವೆ ಎಂದು ಟೆಲ್ಕೊ ಹೇಳಿದೆ. ಮೊದಲ 1 ಮಿಲಿಯನ್ ಜಿಯೋ ಭಾರತ್ ಫೋನ್‌ಗಳ ಬೀಟಾ ಪ್ರಯೋಗವು ಜುಲೈ 7ರಿಂದ ಪ್ರಾರಂಭವಾಗುತ್ತದೆ ಮತ್ತು ಇದು 6500 ತಹಸಿಲ್‌ಗಳಲ್ಲಿ ನಡೆಯುತ್ತದೆ.

ಇದನ್ನೂ ಓದಿ: ಇನ್ನು ಕೂಡಾ ಪ್ಯಾನ್ ಜೊತೆ ಆಧಾರ್ ಲಿಂಕ್ ಆಗಿಲ್ಲವೇ ? ಚಿಂತೆ ಬೇಡ, ಈ ಕೆಲಸ ಮಾಡಿ

‘ಹೊಸ ಜಿಯೋ ಭಾರತ್ ಫೋನ್ ನಾವೀನ್ಯತೆಯ ಕೇಂದ್ರವಾಗಿದೆ ಮತ್ತು ಇದು ಅರ್ಥಪೂರ್ಣ, ನೈಜ-ಜೀವನದ ಬಳಕೆಯ ಪ್ರಕರಣಗಳೊಂದಿಗೆ ವಿವಿಧ ಭಾಗಗಳ ಬಳಕೆದಾರರಿಗೆ ಅಸಮಾನ ಮತ್ತು ನಿಜವಾದ ಮೌಲ್ಯವನ್ನು ತರುವಲ್ಲಿ ನಮ್ಮ ಗಮನವನ್ನು ಪ್ರದರ್ಶಿಸುವುದನ್ನು ಮುಂದುವರೆಸಿದೆ’ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

ಈ ಹೊಸ ಸಾಧನದ ಬೆಲೆ ಕೇವಲ 999 ರೂ. ಆಗಿರಲಿದೆ. ಇದರ ಮಾಸಿಕ ರಿಚಾರ್ಜ್ ಪ್ಲಾನ್‍ಗಳು ತಿಂಗಳಿಗೆ 123 ರೂ. ಆದರೆ, ವಾರ್ಷಿಕ ರಿಚಾರ್ಜ್ ಪ್ಲಾನ್ 1,234 ರೂ. ಆಗಿರಲಿದೆ. ಈ 2 ಯೋಜನೆಗಳು ಅನಿಯಮಿತ ಕರೆ ಮತ್ತು ತಿಂಗಳಿಗೆ 14GB ಡೇಟಾವನ್ನು ಒಳಗೊಂಡಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News