Maruti Dzire Airbags: 70 ಕಿಮೀ ವೇಗದಲ್ಲಿ ಅಪಘಾತಕ್ಕೀಡಾದರೂ ತೆರೆಯದ Maruti Dzire ಏರ್ ಬ್ಯಾಗ್: ಕಂಪನಿ ಹೇಳಿದ್ದೇನು?

Maruti Dzire Airbags: ಅಮಿತ್ ಕುಮಾರ್ ಎಂಬ ವ್ಯಕ್ತಿ ತಮ್ಮ ಮಾರುತಿ ಸುಜುಕಿ ಡಿಜೈರ್ ಕಾರಿನ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಕಾರು ಗಂಟೆಗೆ 70 ಕಿಮೀ ವೇಗದಲ್ಲಿರುವಾಗ ಅಪಘಾತಕ್ಕೀಡಾಯಿತು. ಆದರೆ ಈ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳಲಿಲ್ಲ. ಸುರಕ್ಷಿತವೆಂದು ಪರಿಗಣಿಸಿದ ವಾಹನವು 'ಟಿನ್ ಬಾಕ್ಸ್' ಆಗಿ ಮಾರ್ಪಟ್ಟಿದೆ ಎಂದು ಅಮಿತ್ ಕುಮಾರ್ ಹೇಳಿದ್ದಾರೆ.

Written by - Bhavishya Shetty | Last Updated : Dec 4, 2022, 03:36 PM IST
    • ವರ್ಷದ ಹಿಂದೆ ಖರೀದಿಸಿದ ಮಾರುತಿ ಡಿಜೈರ್‌ನಲ್ಲಿ ಅಪಘಾತ ಸಂಭವಿಸಿದೆ
    • ಈ ಅಪಘಾತದ ವೇಳೆ ಕಾರಿನ ವೇಗ 70 ಕಿ.ಮೀ ಇತ್ತು.
    • ಅಪಘಾತದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್‌ಗಳು ತೆರೆದಿರಲಿಲ್ಲ
Maruti Dzire Airbags: 70 ಕಿಮೀ ವೇಗದಲ್ಲಿ ಅಪಘಾತಕ್ಕೀಡಾದರೂ ತೆರೆಯದ Maruti Dzire ಏರ್ ಬ್ಯಾಗ್: ಕಂಪನಿ ಹೇಳಿದ್ದೇನು? title=
Maruti Suzuki Cars

Maruti Dzire Airbags: ಸುರಕ್ಷತೆಯ ವಿಷಯದಲ್ಲಿ ಮಹೀಂದ್ರಾ ಮತ್ತು ಟಾಟಾ ವಾಹನಗಳು ಮೊದಲ ಸ್ಥಾನದಲ್ಲಿವೆ. ಈ ಎರಡೂ ಕಂಪನಿಗಳ ಬಹುತೇಕ ಕಾರುಗಳು 4 ಅಥವಾ 5 ಸ್ಟಾರ್ ರೇಟಿಂಗ್ ಪಡೆದಿವೆ. ಮಾರುತಿ ಸುಜುಕಿ ಕಾರುಗಳು ಕಡಿಮೆ ಸುರಕ್ಷಿತ ಎಂಬ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇತ್ತೀಚಿಗೆ ಇಂಥದ್ದೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಒಂದು ವರ್ಷದ ಹಿಂದೆ ಖರೀದಿಸಿದ ಮಾರುತಿ ಡಿಜೈರ್‌ನಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದ ವೇಳೆ ಕಾರಿನ ವೇಗ 70 ಕಿ.ಮೀ ಇತ್ತು. ಆದರೂ ಕೂಡ ಅಪಘಾತದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್‌ಗಳು ತೆರೆದಿರಲಿಲ್ಲ. ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಕಾರಿನ ಮಾಲೀಕರು ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:  Mosquito ಕಾಟವೇ? ಸೊಳ್ಳೆ ಓಡಿಸಲು ಸ್ಮಾರ್ಟ್‌ಫೋನ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್‌ ಮಾಡಿ

ಅಮಿತ್ ಕುಮಾರ್ ಎಂಬ ವ್ಯಕ್ತಿ ತಮ್ಮ ಮಾರುತಿ ಸುಜುಕಿ ಡಿಜೈರ್ ಕಾರಿನ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಕಾರು ಗಂಟೆಗೆ 70 ಕಿಮೀ ವೇಗದಲ್ಲಿರುವಾಗ ಅಪಘಾತಕ್ಕೀಡಾಯಿತು. ಆದರೆ ಈ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳಲಿಲ್ಲ. ಸುರಕ್ಷಿತವೆಂದು ಪರಿಗಣಿಸಿದ ವಾಹನವು 'ಟಿನ್ ಬಾಕ್ಸ್' ಆಗಿ ಮಾರ್ಪಟ್ಟಿದೆ ಎಂದು ಅಮಿತ್ ಕುಮಾರ್ ಹೇಳಿದ್ದಾರೆ. ಮಾರುತಿ ಸುಜುಕಿ (@Maruti_Corp) ನ ಅಧಿಕೃತ ಹ್ಯಾಂಡಲ್ ಅನ್ನು ಸಹ ವೀಡಿಯೊದಲ್ಲಿ ಟ್ಯಾಗ್ ಮಾಡಲಾಗಿದೆ.

 

 

ವ್ಯಕ್ತಿ ತನ್ನ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ, "ಗಂಟೆಗೆ 70 ಕಿಮೀ ವೇಗದಲ್ಲಿ ಅಪಘಾತ ಸಂಭವಿಸಿದ ನಂತರವೂ ಕಾರಿನಲ್ಲಿ ಏರ್ ಬ್ಯಾಗ್ ತೆರೆಯದಿದ್ದರೆ ಏನು ಪ್ರಯೋಜನ. ದೇವರು ಮಾರುತಿ ಸುಜುಕಿ ಉತ್ಪನ್ನಗಳನ್ನು ಬಳಸುತ್ತಿರುವ ಜನರನ್ನು ಮುಂಬರುವ ಯಾವುದೇ ದುರಂತದಿಂದ ರಕ್ಷಿಸಲಿ” ಎಂದು ಬರೆದುಕೊಂಡಿದ್ದಾರೆ.

ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಮಾರುತಿ ಸುಜುಕಿ ಕೂಡ ಉತ್ತರಿಸಿದೆ. ಕಂಪನಿಯು ಹೀಗೆ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ತಂಡದ ಸದಸ್ಯರು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ” ಎಂದು ಹೇಳಿದೆ. ಇನ್ನು ಈ ವಾಹನದಲ್ಲಿ ಸುರಕ್ಷತೆಗಾಗಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಇದನ್ನೂ ಓದಿ:  ಡಿಲೀಟ್‌ ಆದ WhatsApp ಫೋಟೋಗಳನ್ನು restore ಮಾಡುವುದು ಹೇಗೆ? ಇಲ್ಲಿ ತಿಳಿಯಿರಿ

2 ಸ್ಟಾರ್ ಸುರಕ್ಷತೆ ರೇಟಿಂಗ್

ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಸುಜುಕಿ ಡಿಜೈರ್ ಕೇವಲ 2-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. 5-ಸ್ಟಾರ್ ರೇಟಿಂಗ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, 1-ಸ್ಟಾರ್ ರೇಟಿಂಗ್ ಅನ್ನು ಕೆಟ್ಟದಾಗಿ ಪರಿಗಣಿಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News