7 ಮತ್ತು 9 ಸೀಟರ್ ಆಯ್ಕೆಗಳೊಂದಿಗೆ ಮಹೀಂದ್ರ ಹೊರ ತರುತ್ತಿದೆ ಮತ್ತೊಂದು ಸ್ಕಾರ್ಪಿಯೋ!

Mahindra Scorpio Classic: ಸ್ಕಾರ್ಪಿಯೊದ ಹೊಸ ರೂಪಾಂತರ S5 ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿದೆ. ಬಿಡುಗಡೆಗೂ ಮುನ್ನವೇ ಈ ಹೊಸ ರೂಪಾಂತರದ ವೈಶಿಷ್ಟ್ಯಗಳು ಹೊರಬಿದ್ದಿವೆ.

Written by - Ranjitha R K | Last Updated : Mar 1, 2023, 01:16 PM IST
  • ಸ್ಕಾರ್ಪಿಯೊ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಒಂದಾಗಿದೆ.
  • ಹಲವು ವರ್ಷಗಳ ನಂತರವೂ ಗ್ರಾಹಕರಲ್ಲಿ ಸ್ಕಾರ್ಪಿಯೊ ಬೇಡಿಕೆ ಹೆಚ್ಚಿದೆ.
  • ಹೊಸ ರೂಪಾಂತರ S5 ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿದೆ.
7 ಮತ್ತು 9  ಸೀಟರ್ ಆಯ್ಕೆಗಳೊಂದಿಗೆ ಮಹೀಂದ್ರ ಹೊರ ತರುತ್ತಿದೆ ಮತ್ತೊಂದು  ಸ್ಕಾರ್ಪಿಯೋ!  title=

Mahindra Scorpio Classic : ಜನಪ್ರಿಯ ಕಾರು ತಯಾರಕರಾದ ಮಹೀಂದ್ರಾಗೆ, ಸೇರಿದ ಸ್ಕಾರ್ಪಿಯೊ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಒಂದಾಗಿದೆ. ಹಲವು ವರ್ಷಗಳ ನಂತರವೂ ಗ್ರಾಹಕರಲ್ಲಿ ಸ್ಕಾರ್ಪಿಯೊ ಬೇಡಿಕೆ ಹೆಚ್ಚಿದೆ. ಈಗ ಸ್ಕಾರ್ಪಿಯೋವನ್ನು ಸ್ಕಾರ್ಪಿಯೋ ಕ್ಲಾಸಿಕ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ, SUV ಕೇವಲ ಎರಡು ರೂಪಾಂತರಗಳಲ್ಲಿ ಬರುತ್ತದೆ.  S ಮತ್ತು S11.ಮತ್ತೊಂದು ಹೊಸ ರೂಪಾಂತರ S5 ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿದೆ. ಬಿಡುಗಡೆಗೂ ಮುನ್ನವೇ ಈ ಹೊಸ ರೂಪಾಂತರದ ವೈಶಿಷ್ಟ್ಯಗಳು ಹೊರಬಿದ್ದಿವೆ. 

ಸೋರಿಕೆಯಾದ ದಾಖಲೆಯ ಪ್ರಕಾರ, S5 ಮತ್ತು S11 ಟ್ರಿಮ್‌ಗಳಿಗೆ ಆಸನ ಆಯ್ಕೆಗಳನ್ನು ಹೆಚ್ಚಿಸಲಾಗಿದೆ. ಬೇಸ್-ಸ್ಪೆಕ್ S ರೂಪಾಂತರವು ಕೇವಲ 9-ಸೀಟ್ ಆಯ್ಕೆಯನ್ನು ಪಡೆದರೆ, S5 ಮತ್ತು S11 ರೂಪಾಂತರಗಳು 7-ಆಸನ ಮತ್ತು 9-ಆಸನಗಳ ಆಯ್ಕೆಗಳನ್ನು ಪಡೆಯುತ್ತವೆ.  ಹೊಸ ಸ್ವರೂಪದಲ್ಲಿ ಸ್ಕಾರ್ಪಿಯೋ ಕ್ಲಾಸಿಕ್‌ನ ಒಟ್ಟು ಏಳು ರೂಪಾಂತರಗಳು ಇರುತ್ತವೆ. ಈ ಹಿಂದೆ, 9 ಸೀಟ್ ಆಯ್ಕೆಯು ಬೇಸ್ ಎಸ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿತ್ತು. 9 ಆಸನಗಳ ರೂಪಾಂತರವು ಎರಡನೇ ಸಾಲಿನಲ್ಲಿ ಬೆಂಚ್ ಸೀಟ್‌ಗಳನ್ನು ಮತ್ತು ಹಿಂಭಾಗದಲ್ಲಿ 2×2 ಸೈಡ್ ಫೇಸಿಂಗ್ ಬೆಂಚ್ ಸೀಟ್‌ಗಳನ್ನು ಹೊಂದಿರುತ್ತದೆ. ಸ್ಕಾರ್ಪಿಯೊ ಕ್ಲಾಸಿಕ್‌ನ ಟಾಪ್-ಸ್ಪೆಕ್ S11 ರೂಪಾಂತರವು ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ನ ಆಯ್ಕೆಯನ್ನು  ಹೊಂದಿರುತ್ತದೆ. 

ಇದನ್ನೂ ಓದಿ : ಒಂದರ ಹಿಂದೆ ಒಂದರಂತೆ ರೋಡಿಗಿಳಿಯಲಿವೆ ಅಗ್ಗದ ಕಾರುಗಳು ! Maruti-Tata-Hyundai ಬಿಡುಗಡೆ ಮಾಡಲಿವೆ ಆರು ಎಸ್ ಯುವಿ

ವೈಶಿಷ್ಟ್ಯಗಳೇನಿರಲಿದೆ ? : 
ಹೊಸ S5 ರೂಪಾಂತರವು ಕಲರ್ ಬಂಪರ್‌ಗಳು, ಉಕ್ಕಿನ ಚಕ್ರಗಳು, ಸೆಂಟ್ರಲ್ ಲಾಕಿಂಗ್, ಆಡಿಯೊ ಸಿಸ್ಟಮ್ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVMಗಳಂತಹ ವೈಶಿಷ್ಟ್ಯಗಳನ್ನು  ಹೊಂದಿರುವ ನಿರೀಕ್ಷೆಯಿದೆ. ಇದು ಡ್ಯುಯಲ್ ಏರ್‌ಬ್ಯಾಗ್‌ಗಳು,  ಕೊಲಾಪ್ಸಿಬಲ್  ಸ್ಟೀರಿಂಗ್, ಎಂಜಿನ್ ಇಮೊಬಿಲೈಜರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸುರಕ್ಷತೆಗಾಗಿ  ಸ್ಪೀಡ್ ಅಲರ್ಟ್ ನಂಥಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. 

ಎಂಜಿನ್‌ಗಳು ಮತ್ತು ಶಕ್ತಿ :
ಸ್ಕಾರ್ಪಿಯೊ ಕ್ಲಾಸಿಕ್‌ನ ಹೊಸ S5 ರೂಪಾಂತರದ ಪರಿಚಯವು S ಮತ್ತು S11 ರೂಪಾಂತರಗಳ ನಡುವಿನ ಬೆಲೆ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಸ್ಕಾರ್ಪಿಯೊ ಕ್ಲಾಸಿಕ್‌ನ ಮೂಲ ರೂಪಾಂತರದ ಬೆಲೆ 12.64  ಲಕ್ಷ ರೂಪಾಯಗಳು ಮತ್ತು ಟಾಪ್ ರೂಪಾಂತರದ ಬೆಲೆ 16.14 ಲಕ್ಷ  ರೂಪಾಯಿಗಳು. ಈ ಎರಡು ರೂಪಾಂತರಗಳ ನಡುವೆ 3.5 ಲಕ್ಷ ರೂಪಾಯಿಗಳ ವ್ಯತ್ಯಾಸವಿದೆ. ಕಾರಿನ ಎಂಜಿನ್ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸ್ಕಾರ್ಪಿಯೊ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಗರಿಷ್ಠ 130 ಎಚ್‌ಪಿ ಶಕ್ತಿಯನ್ನು ಮತ್ತು 300 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು  ಜನರೇಟ್ ಮಾಡುತ್ತದೆ. 

ಇದನ್ನೂ ಓದಿ : ಬರುತ್ತಿದೆ ಅಗ್ಗದ ಬೆಲೆಗೆ ಬೆಸ್ಟ್ ಫ್ಯಾಮಿಲಿ ಫ್ರೆಂಡ್ಲಿ 7 ಸೀಟರ್ ಕಾರುಗಳು: ಇವುಗಳ ಫೀಚರ್’ಗೆ ಫಿದಾ ಆಗದಿವರಿಲ್ಲ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News