ನಿಮ್ಮ Smartphone ಕಳುವಾದರೆ WhatsApp ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

WhatsApp: ನಿಮ್ಮ ಫೋನ್ ಕಳೆದುಹೋದರೆ ಮತ್ತು ಖಾತೆಯನ್ನು ನಿಷ್ಕ್ರಿಯಗೊಳಿಸಲು ನೀವು ವಾಟ್ಸಾಪ್‌ಗೆ ಸಂವಹನ ಮಾಡದಿದ್ದರೆ, ಸಿಮ್ ಲಾಕ್ ಆಗಿದ್ದರೂ ಮತ್ತು ಫೋನ್ ಸೇವೆಯಲ್ಲಿಲ್ಲದಿದ್ದರೂ ಸಹ ವೈ-ಫೈ ಮೂಲಕ ವಾಟ್ಸಾಪ್ ಬಳಸಬಹುದು.  

Written by - Yashaswini V | Last Updated : Jan 11, 2021, 05:01 PM IST
  • ನಿಮ್ಮ ಫೋನ್ ಕಳೆದುಹೋದರೆ ವಾಟ್ಸಾಪ್ ಖಾತೆಯನ್ನು ಕೂಡಲೇ ದುರುಪಯೋಗಪಡಿಸಿಕೊಳ್ಳಬಹುದು
  • ನಿಮ್ಮ ವಾಟ್ಸಾಪ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ಖಾತೆಯನ್ನು ಸಂಪೂರ್ಣವಾಗಿ ಅಳಿಸಲಾಗಿದೆ ಎಂದು ಇದರ ಅರ್ಥವಲ್ಲ
  • ನೀವು ಹೊಸ ಫೋನ್ ಪಡೆದಾಗ ಹೊಸ ಸಿಮ್ ಕಾರ್ಡ್‌ನಲ್ಲಿ ಅದೇ ಸಂಖ್ಯೆಯನ್ನು ಬಳಸಿಕೊಂಡು ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿ
ನಿಮ್ಮ Smartphone ಕಳುವಾದರೆ WhatsApp ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ? title=
Know how to deactivate Whatsapp account

ಬೆಂಗಳೂರು : WhatsApp: ಯಾವುದೇ ಕಾರಣದಿಂದ ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದಾಗ ಅಥವಾ ಯಾರಾದರೂ ನಿಮ್ಮ ಫೋನ್ ಅನ್ನು ಕದ್ದಾಗ ಒಂದೆಡೆ ಡಾಟಾ ಕಳುವಾಗುವ ದುಃಖ, ಮತ್ತೊಂದೆಡೆ ಡೇಟಾದ ಹೊರತಾಗಿ ಫೋನ್‌ನಲ್ಲಿನ ಖಾತೆಯ ಸುರಕ್ಷತೆಯೂ ಸಹ ಚಿಂತೆಗೀಡುಮಾಡುತ್ತದೆ.

ನಿಮ್ಮ ಫೋನ್ ಕಳೆದುಹೋದರೆ ಮತ್ತು ನೀವು ಮೆಸೆಂಜರ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ಬಳಸುತ್ತಿದ್ದರೆ ವಾಟ್ಸಾಪ್ ಖಾತೆಯನ್ನು ಕೂಡಲೇ ದುರುಪಯೋಗಪಡಿಸಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆಯನ್ನು ನೀವು ರಕ್ಷಿಸಬಹುದು. ಇದಕ್ಕಾಗಿ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಫೋನ್ ಕಳೆದುಕೊಂಡ ತಕ್ಷಣ ಇದನ್ನು ಮಾಡಿ :
ಯಾವುದೇ ಕಾರಣದಿಂದ ನಿಮ್ಮ ಸ್ಮಾರ್ಟ್‌ಫೋನ್ (Smartphone) ಕಳೆದುಕೊಂಡರೆ ನಿಮ್ಮ ಮೊಬೈಲ್ ಆಪರೇಟರ್ ಕಂಪನಿಗೆ ಕರೆ ಮಾಡಿ ಮತ್ತು ನಿಮ್ಮ ಸಿಮ್ ಕಾರ್ಡ್ ಅನ್ನು ಲಾಕ್ ಮಾಡಿ. ಸಿಮ್ ಲಾಕ್ ಮಾಡಿದ ನಂತರ ಕದ್ದ ಫೋನ್‌ನಲ್ಲಿ ಖಾತೆಯನ್ನು ಪರಿಶೀಲಿಸಲಾಗುವುದಿಲ್ಲ, ಏಕೆಂದರೆ ಇದಕ್ಕೆ SMS ಅಥವಾ ಕರೆ ಅಗತ್ಯವಾಗಿರುತ್ತದೆ.

ಇದನ್ನೂ ಓದಿ : ಭಾರತದಲ್ಲಿ ನಿಷೇಧಿಸಲ್ಪಟ್ಟಿದ್ದರೂ TikTok ನಂಬರ್ ಒನ್ ಅಪ್ಲಿಕೇಶನ್‌

ಹೊಸ ಫೋನ್‌ನಲ್ಲಿ ಏನು ಮಾಡಬೇಕು ?
ನೀವು ಹೊಸ ಫೋನ್ ಪಡೆದಾಗ ಹೊಸ ಸಿಮ್ ಕಾರ್ಡ್‌ನಲ್ಲಿ ಅದೇ ಸಂಖ್ಯೆಯನ್ನು ಬಳಸಿಕೊಂಡು ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿ. ನೀವು ಇದನ್ನು ಮಾಡಿದ ತಕ್ಷಣ, ನಿಮ್ಮ ಕದ್ದ ಫೋನ್‌ನಲ್ಲಿ ನಿಮ್ಮ ಖಾತೆಯನ್ನು ತಕ್ಷಣ ಮುಚ್ಚಲಾಗುತ್ತದೆ. ಕಂಪನಿಯ ಪ್ರಕಾರ, ವಾಟ್ಸಾಪ್ (Whatsapp) ಒಂದು ಸಮಯದಲ್ಲಿ ಕೇವಲ ಒಂದು ಫೋನ್ ಮತ್ತು ಫೋನ್ ಸಂಖ್ಯೆಯಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.

ಈ ವಿಷಯದ ಬಗ್ಗೆ ಗಮನವಿರಲಿ :
ನಿಮ್ಮ ಫೋನ್ ಕಳೆದುಹೋದರೆ ಮತ್ತು ಖಾತೆಯನ್ನು ನಿಷ್ಕ್ರಿಯಗೊಳಿಸಲು ನೀವು ವಾಟ್ಸಾಪ್‌ಗೆ ಸಂವಹನ ಮಾಡದಿದ್ದರೆ, ಸಿಮ್ ಲಾಕ್ ಆಗಿದ್ದರೂ ಮತ್ತು ಫೋನ್ ಸೇವೆಯಲ್ಲಿಲ್ಲದಿದ್ದರೂ ಸಹ ವೈ-ಫೈ (Wi-Fi) ಮೂಲಕ ವಾಟ್ಸಾಪ್ ಅನ್ನು ಬಳಸಬಹುದು. ನೀವು ಮೊದಲೇ ನಿಮ್ಮ ಫೋನ್ ನಲ್ಲಿ Google ಡ್ರೈವ್, ಐಕ್ಲೌಡ್ (iCloud) ಅಥವಾ ಒನ್‌ಡ್ರೈವ್‌ನಲ್ಲಿ (OneDrive) ಬ್ಯಾಕಪ್ ಮಾಡಿದರೆ, ನೀವು ಎಲ್ಲಾ ಚಾಟ್‌ಗಳನ್ನು ಮತ್ತೆ ಮರುಸ್ಥಾಪಿಸಬಹುದು.

ಇದನ್ನೂ ಓದಿ : Whatsapp ಬಳಕೆದಾರರೇ ಎಚ್ಚರ..! google searchನಲ್ಲಿ ಲೀಕ್ ಆಗಿದೆ ವಾಟ್ಸ್ಆ್ಯಪ್ ಗ್ರೂಪ್ ಲಿಂಕ್

ನಿಮ್ಮ ವಾಟ್ಸಾಪ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ಖಾತೆಯನ್ನು ಸಂಪೂರ್ಣವಾಗಿ ಅಳಿಸಲಾಗಿದೆ ಎಂದು ಇದರ ಅರ್ಥವಲ್ಲ. ಹೌದು, ನಿಮ್ಮ ವಾಟ್ಸಾಪ್ ಖಾತೆಯನ್ನು ನೀವು ಮತ್ತೆ 30 ದಿನಗಳವರೆಗೆ ಸಕ್ರಿಯಗೊಳಿಸದಿದ್ದರೆ, ಅದನ್ನು ಸಂಪೂರ್ಣವಾಗಿ ಅಳಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News