mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ

mAadhaar App uses: ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ 35ಕ್ಕೂ ಹೆಚ್ಚು ಸೇವೆಗಳ ಲಾಭವನ್ನು ನೀವು ಪಡೆಯಬಹುದು.

Written by - Yashaswini V | Last Updated : Jan 5, 2021, 09:46 PM IST
  • mAadhaar ಅಪ್ಲಿಕೇಶನ್ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ
  • ಇದರಲ್ಲಿ ನಿಮ್ಮ ಬಯೋಮೆಟ್ರಿಕ್ ಲಾಕಿಂಗ್ / ಅನ್ಲಾಕಿಂಗ್ ಅನ್ನು ನೀವು ಮಾಡಬಹುದು
  • ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ 35ಕ್ಕೂ ಹೆಚ್ಚು ಸೇವೆಗಳ ಲಾಭವನ್ನು ಪಡೆಯಬಹುದು
mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ title=
What is the use of mAadhaar app (File Photo)

ಬೆಂಗಳೂರು :  mAadhaar App uses : ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್‌ ಒಂದು ಪ್ರಮುಖ ದಾಖಲೆಯಾಗಿದೆ. ಆದರೆ ಆಧಾರ್ ಕಾರ್ಡ್ ಅನ್ನು ಎಲ್ಲೆಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಆಧಾರ್‌ನ ಹಾರ್ಡ್ ಕಾಪಿಯನ್ನು ಎಲ್ಲೆಡೆ ಕೊಂಡೊಯ್ಯುವ ತೊಂದರೆಯನ್ನು ನೀವು ತೊಡೆದುಹಾಕಬಹುದು. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಧಾರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಇದು ನಿಮಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ 35ಕ್ಕೂ ಹೆಚ್ಚು ಸೇವೆಗಳ ಲಾಭವನ್ನು ಪಡೆಯಬಹುದು.

MAadhaar ಅಪ್ಲಿಕೇಶನ್ ಬಳಕೆದಾರರಿಗೆ ಅದರ ಆಧಾರ್ ಡೇಟಾವನ್ನು ಸಿಂಕ್ ಮಾಡಲು ಅನುಮತಿಸುತ್ತದೆ. ಇದನ್ನು ಮಾಡುವುದರಿಂದ ಯಾವುದೇ ಸಮಯದಲ್ಲಿ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನಿಮ್ಮ ಬೆರಳ ತುದಿಯಲ್ಲಿ ಪಡೆಯಲು ಇದು ಸಹಾಯ ಮಾಡುತ್ತದೆ.

MAadhaar ಅಪ್ಲಿಕೇಶನ್ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ನಿಮ್ಮ ಬಯೋಮೆಟ್ರಿಕ್ ಲಾಕಿಂಗ್ / ಅನ್ಲಾಕಿಂಗ್ ಅನ್ನು ನೀವು ಮಾಡಬಹುದು. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ಸ್ ಸಕ್ರಿಯಗೊಳಿಸಬೇಕು. 

SMS ಆಧಾರಿತ OTP ಬದಲಿಗೆ, mAadhaar ಸಮಯ ಆಧಾರಿತ ಒಂದು ಬಾರಿ ಪಾಸ್‌ವರ್ಡ್ (TOTP) ಅನ್ನು ಉತ್ಪಾದಿಸುತ್ತದೆ. ಇದು ಬಹಳ ಕಡಿಮೆ ಸಮಯದವರೆಗೆ ಲೈವ್ ಒಟಿಪಿ ಆಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ.

ಇದನ್ನೂ ಓದಿ : ಮನೆಯಲ್ಲಿಯೇ ಕುಳಿತು mAadhaar ಮೂಲಕ ನೀವೂ ಮಾಡಬಹುದು ಈ ಕೆಲಸ

ನೀವು ಆಧಾರ್‌ನಲ್ಲಿ ಯಾವುದೇ ನವೀಕರಣಕ್ಕಾಗಿ ವಿನಂತಿಸಿದ್ದರೆ, ನಂತರ ನೀವು ಪ್ರೊಫೈಲ್ ನವೀಕರಣವನ್ನು ನೋಡಬಹುದು. UIDAI ನಿಂದ ಡೇಟಾವನ್ನು ನವೀಕರಿಸಿದಾಗ ಬಳಕೆದಾರರು ನವೀಕರಿಸಿದ ಪ್ರೊಫೈಲ್ ಅನ್ನು ವೀಕ್ಷಿಸಬಹುದು.
 

ಮನೆಯಲ್ಲಿಯೇ ಕುಳಿತು mAadhaar ಮೂಲಕ ನೀವೂ ಮಾಡಬಹುದು ಈ ಕೆಲಸ

ನವೀಕರಿಸಿದ QR ಕೋಡ್ ಮೂಲಕ ನವೀಕರಿಸಿದ ಆಧಾರ್ ಪ್ರೊಫೈಲ್ ಶೇರಿಂಗ್ (Updated Aadhaar Profile Sharing) ಹಂಚಿಕೊಳ್ಳಲು mAadhaar ಅಪ್ಲಿಕೇಶನ್ ಬಳಕೆದಾರರನ್ನು ಅನುಮತಿಸುತ್ತದೆ. ಇದಲ್ಲದೆ ಬಳಕೆದಾರರು ಇಕೆವೈಸಿ ಡೇಟಾವನ್ನು ಸೇವಾ ಪೂರೈಕೆದಾರರಿಗೆ ಹಂಚಿಕೊಳ್ಳುವ ಸೌಲಭ್ಯವನ್ನೂ ಹೊಂದಿದ್ದಾರೆ.

ಇದನ್ನೂ ಓದಿ : Big Aadhaar card update! ನಿಮ್ಮ ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಬದಲಾಯಿಸಬಹುದು...!

UIDAI ವೆಬ್‌ಸೈಟ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ :
ಈ ಸೇವೆಗಳನ್ನು ಪಡೆಯಲು ನೀವು mAadhaar ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಇದಕ್ಕಾಗಿ ನೀವು ನೇರವಾಗಿ ಯುಐಡಿಎಐ ವೆಬ್‌ಸೈಟ್ https://uidai.gov.in/ ಗೆ ಹೋಗಿ ಅಲ್ಲಿನ ಅಪ್ಲಿಕೇಶನ್‌ನ ಲಿಂಕ್ ಅನ್ನು ಕ್ಲಿಕ್ ಮಾಡಿ. ಅದು ನಿಮಗೆ ಆಪ್ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ (Google Play Store) ಅಥವಾ ಆಪ್ ಸ್ಟೋರ್‌ಗೆ ಮರುನಿರ್ದೇಶಿಸುತ್ತದೆ. ಅಲ್ಲಿ ನೀವು ಆಪ್ ಅನ್ನು ಡೌನ್‌ಲೋಡ್ ಮಾಡಬಹುದು. 

ನೆನಪಿಡಿ : ನಕಲಿ ಅಥವಾ ಅಂತಹುದೇ ಅಪ್ಲಿಕೇಶನ್ ಡೌನ್‌ಲೋಡ್ ಆಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News